ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಅಬ್ಬರ: ಅ. 28 ಕ್ಕೆ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ವರುಣಾರ್ಭಟ; ಹವಾಮಾನ ಇಲಾಖೆ ರೆಡ್ ಅಲರ್ಟ್! Cyclone Alert

ಬಂಗಾಳ ಕೊಲ್ಲಿಯಲ್ಲಿ ಪ್ರಬಲ ಚಂಡಮಾರುತ ಸೃಷ್ಟಿಯಾಗುತ್ತಿದ್ದು, ಅಕ್ಟೋಬರ್ 28 ರವರೆಗೆ ಕರ್ನಾಟಕ ಸೇರಿ ದಕ್ಷಿಣ ಭಾರತದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
Cyclone warning in the Bay of Bengal; heavy rain warning for South India and Karnataka.
ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಎಚ್ಚರಿಕೆ ದಕ್ಷಿಣ ಭಾರತ ಮತ್ತು ಕರ್ನಾಟಕದಲ್ಲಿ ಭಾರಿ ಮಳೆ ಎಚ್ಚರಿಕೆ
Published on: 

ನವದೆಹಲಿ: ಬಂಗಾಳ ಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಒಂದೇ ಬಾರಿಗೆ ಎರಡು ಬೃಹತ್ ಹವಾಮಾನ ವೈಪರೀತ್ಯಗಳು ಶುರುವಾಗಿದ್ದು, ದಕ್ಷಿಣ ಭಾರತದತ್ತ ಭಾರೀ ಮಳೆಯ ಕಾರ್ಮೋಡಗಳು ಕವಿದಿವೆ. ಅಕ್ಟೋಬರ್ 26 ರಿಂದ 28 ರ ವೇಳೆಗೆ ಪಶ್ಚಿಮ ಹಾಗೂ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಪ್ರಬಲ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.

ಇದರ ನೇರ ಪರಿಣಾಮ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಒಡಿಶಾ ರಾಜ್ಯಗಳ ಮೇಲೆ ಬೀರಲಿದ್ದು, ಮುಂದಿನ ನಾಲ್ಕೈದು ದಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಹೇಳಲಾಗುತ್ತಿದೆ.

ಗಂಟೆಗೆ 90 ಕಿ.ಮೀ ವೇಗದಲ್ಲಿ ಬೀಸಲಿದೆ ರಣಗಾಳಿ!

ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಸದ್ಯ ಸಮುದ್ರದಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತವು ಇನ್ನಷ್ಟು ತೀವ್ರಗೊಂಡು 'ಡೀಪ್ ಡಿಪ್ರೆಷನ್' ಆಗಿ ಪರಿವರ್ತನೆಯಾಗಲಿದೆ. ಬಳಿಕ ಅಕ್ಟೋಬರ್ 26ರ ಬೆಳಗಿನ ವೇಳೆಗೆ ಚಂಡಮಾರುತವಾಗಿ ಮಾರ್ಪಟ್ಟು, ಅಕ್ಟೋಬರ್ 28ರ ಹೊತ್ತಿಗೆ ಇದು ಕರಾವಳಿ ತೀರಕ್ಕೆ ಅಪ್ಪಳಿಸಲಿದೆ ಎನ್ನಲಾಗಿದೆ.

ಈ ವೇಳೆ ಸಮುದ್ರದಲ್ಲಿ ಗಂಟೆಗೆ 70ರಿಂದ 90 ಕಿ.ಮೀ ವೇಗದಲ್ಲಿ ಭೀಕರ ಬಿರುಗಾಳಿ ಬೀಸಲಿದೆ. ಅಕ್ಟೋಬರ್ 27 ಮತ್ತು 28ರಂದು ಆಂಧ್ರದ ತೀರ ಪ್ರದೇಶದಲ್ಲಿ ಭಾರಿ ಮಳೆಯಾಗಲಿದ್ದರೆ, ಒಡಿಶಾ ಮತ್ತು ತೆಲಂಗಾಣದಲ್ಲೂ ಭೀಕರ ಪ್ರವಾಹದ ಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.

Attachment
PDF
Rain IMD press note
Preview

ಕರುನಾಡಿನಲ್ಲೂ ವರುಣನ ಅಬ್ಬರ: ಎಲ್ಲೆಲ್ಲಿ ಎಚ್ಚರ?

ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಈಗಾಗಲೇ ಮಳೆಯ ರೌದ್ರನರ್ತನ ಆರಂಭವಾಗಿದೆ. ಅಕ್ಟೋಬರ್ 24 ಮತ್ತು 25 ರಂದು ಕರಾವಳಿ ಕರ್ನಾಟಕ (ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ) ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆ ಸುರಿಯಲಿದೆ.

ಅಕ್ಟೋಬರ್ 26ರಿಂದ 28ರ ಅವಧಿಯಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿಯ ವೇಗ ಹೆಚ್ಚಾಗಲಿದ್ದು, ಗಂಟೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಬೆಂಗಳೂರು, ಮೈಸೂರು, ಹಾಸನ ಸೇರಿದಂತೆ ಒಳನಾಡಿನ ಹಲವೆಡೆ ಮೋಡ ಕವಿದ ವಾತಾವರಣದ ಜೊತೆಗೆ ಮಳೆಯ ಆರ್ಭಟವಿರಲಿದೆ.

Also Read
"ಕನ್ನಡ ಗೊತ್ತಿದ್ರೆ ಸೆಲೆಕ್ಟ್​ ಆಗಲ್ಲ"! ಐಟಿ ಕಂಪನಿಗಳಲ್ಲಿ ಭಾಷಾ ತಾರತಮ್ಯ ಆರೋಪ: ಯುವತಿ ವಿಡಿಯೋ ವೈರಲ್​! Bengaluru IT Company
Cyclone warning in the Bay of Bengal; heavy rain warning for South India and Karnataka.

ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ವಾರ್ನಿಂಗ್!

ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಅಲೆಗಳ ಅಬ್ಬರ ಮುಗಿಲು ಮುಟ್ಟಲಿದ್ದು, ಸಮುದ್ರವು ಅತ್ಯಂತ ಪ್ರಕ್ಷುಬ್ಧ ಸ್ಥಿತಿಗೆ ತಲುಪಲಿದೆ. ಅಕ್ಟೋಬರ್ 24 ರ ಸಂಜೆಯಿಂದ ಅಕ್ಟೋಬರ್ 28 ರ ವರೆಗೆ ಯಾವುದೇ ಕಾರಣಕ್ಕೂ ಬಂಗಾಳ ಕೊಲ್ಲಿ ಹಾಗೂ ಆಂಧ್ರ-ಒಡಿಶಾ ಕರಾವಳಿ ತೀರದತ್ತ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಕರಾವಳಿ ತೀರದ ನಿವಾಸಿಗಳು ಕೂಡ ಸಮುದ್ರದ ಹತ್ತಿರ ಸುಳಿಯದಂತೆ ಜಿಲ್ಲಾಡಳಿತಗಳು ಕಟ್ಟೆಚ್ಚರ ವಹಿಸಿವೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net