ಮತ ಕಳವು ವಿರೋಧಿ ಪ್ರತಿಭಟನೆಯಲ್ಲಿ ಭಾರಿ ಹೈಡ್ರಾಮಾ: ಪರಸ್ಪರ ಹೊಡೆದಾಡಿಕೊಂಡ ಇಬ್ಬರು ಕಾಂಗ್ರೆಸ್​ ನಾಯಕಿಯರು..! Congress leaders

'ಮತ ಕಳವು' ಆರೋಪದಡಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್ ಅವರ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಅದೇ ರೀತಿ ಹರಿಯಾಣದ ಫರಿದಾಬಾದ್‌ನಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.
Congress leaders
ಹರಿಯಾಣ ಪ್ರತಿಭಟನೆಯಲ್ಲಿ ಪರಸ್ಪರ ಹೊಡೆದಾಡಿಕೊಂಡ ಇಬ್ಬರು ಕಾಂಗ್ರೆಸ್​ ನಾಯಕಿಯರು!
Published on: 

ಚಂಡೀಗಢ : ಹರಿಯಾಣದ ಫರಿದಾಬಾದ್‌ನಲ್ಲಿ ನಡೆದ 'ಮತ ಕಳವು' ಪ್ರತಿಭಟನೆಯು ರಾಜಕೀಯ ವಿಷಯಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ನಾಯಕಿಯರ ( Congress Leaders ) ನಡುವಿನ ಕೈಕೈ ಮಿಲಾಯಿಸುವ ಹೈಡ್ರಾಮಾದಿಂದಾಗಿ ಭಾರೀ ಸಂಚಲನ ಮೂಡಿಸಿದೆ. ಇಂಡಿಯಾ ಮೈತ್ರಿಕೂಟದ ಮೆರವಣಿಗೆಯಲ್ಲೇ ಇಬ್ಬರು ಮಹಿಳಾ ನಾಯಕಿಯರು ಸಾರ್ವಜನಿಕವಾಗಿ ಪರಸ್ಪರ ಕಪಾಳಮೋಕ್ಷ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಕ್ಷಕ್ಕೆ ಮುಜುಗರ ತಂದಿದೆ.

'ಮತ ಕಳವು' ಆರೋಪದಡಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್ ಅವರ ವಿರುದ್ಧ ದೇಶಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಅದೇ ರೀತಿ ಹರಿಯಾಣದ ಫರಿದಾಬಾದ್‌ನಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಹರಿಯಾಣದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪರ್ಲ್ ಚೌಧರಿ ಮತ್ತು ಜಿಲ್ಲಾ ಅಧ್ಯಕ್ಷ ಬಲ್ಜಿತ್ ಕೌಶಿಕ್ ನೇತೃತ್ವದಲ್ಲಿ ಹಳೆಯ ಫರಿದಾಬಾದ್‌ನ ಚಂಡಿವಾಲಿ ಧರ್ಮಶಾಲಾದಿಂದ ಪಠ್ವಾರಿ ಮಂದಿರದವರೆಗೆ ಈ ಮೆರವಣಿಗೆ ಸಾಗಿತು.

Also Read
ಈ ಊರುಗಳಲ್ಲಿ ಸಾಯುವುದೇ ಬ್ಯಾನ್... ಇಲ್ಲಿ ಯಾರಾದರೂ ಮೃತಪಟ್ಟರೆ ಏನಾಗುತ್ತೆ ಗೊತ್ತಾ? Death
Congress leaders

ಈ ಪ್ರತಿಭಟನಾ ಮೆರವಣಿಗೆಯಲ್ಲಿ ಬಾಲ್ಲಭಘಡ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಪರಾಗ್ ಶರ್ಮಾ ಮತ್ತು ಮತ್ತೊಬ್ಬ ನಾಯಕಿ ಗಜ್ನಾ ಲಂಬಾ ಅವರು ಕಾಂಗ್ರೆಸ್ ಬ್ಯಾನರ್ ಹಿಡಿದು ಒಟ್ಟಾಗಿ ಸಾಗುತ್ತಿದ್ದರು. ಈ ವೇಳೆ ಗಜ್ನಾ ಲಂಬಾ ಅವರು ಪರಾಗ್ ಶರ್ಮಾ ಅವರ ಮುಂದೆ ಹೋಗಲು ಪ್ರಯತ್ನಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಗಜ್ನಾ ಲಂಬಾ ಅವರು ಮುಂದೆ ಹೋಗಲು ಯತ್ನಿಸುತ್ತಿದ್ದಂತೆ ಕೋಪಗೊಂಡ ಪರಾಗ್ ಶರ್ಮಾ ಅವರು ಲಂಬಾ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಗಜ್ನಾ ಲಂಬಾ ಕೂಡ ಪರಾಗ್ ಶರ್ಮಾ ಅವರಿಗೆ ತಿರುಗಿ ಹೊಡೆದಿದ್ದಾರೆ. ಈ ಅನಿರೀಕ್ಷಿತ ಹೈಡ್ರಾಮಾವನ್ನು ಕಂಡು ಮೆರವಣಿಗೆಯಲ್ಲಿದ್ದ ಇತರೆ ಕಾರ್ಯಕರ್ತರು ದಂಗಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಮೆರವಣಿಗೆಯಲ್ಲಿದ್ದ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಲ್ಜಿತ್ ಕೌಶಿಕ್ ಹಾಗೂ ಇತರ ಹಿರಿಯ ನಾಯಕರು ಕೂಡಲೇ ಮಧ್ಯಪ್ರವೇಶಿಸಿ ಜಗಳವಾಡುತ್ತಿದ್ದ ಇಬ್ಬರೂ ಮಹಿಳಾ ನಾಯಕಿಯರನ್ನು ಬಿಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಈ ಘಟನೆಯು ಕಾಂಗ್ರೆಸ್ ಪಕ್ಷದ ಆಂತರಿಕ ಕಲಹವನ್ನು ಮತ್ತೊಮ್ಮೆ ಬೀದಿಗಿಳಿಸಿದೆ.

Also Read
ತುಂಬಾ ವರ್ಷಗಳ ಬಳಿಕ ಸಿಂಹ ರಾಶಿಯಲ್ಲಿ ಗುರು-ಕೇತು ಮಹಾಯೋಗ: ಈ 4 ರಾಶಿಗಳಿಗೆ ರಾಜಯೋಗ, ಅನಿರೀಕ್ಷಿತ ಆದಾಯ ಭರಪೂರ! Astrology
Congress leaders

ಈ ಅಹಿತಕರ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧ್ಯಕ್ಷ ಬಲ್ಜಿತ್ ಕೌಶಿಕ್, ದೊಡ್ಡ ಜನಸಂದಣಿಯಲ್ಲಿ ಒಟ್ಟಿಗೆ ನಡೆಯುವಾಗ ಇಂತಹ ಆಕಸ್ಮಿಕ ಘಟನೆಗಳು ಮತ್ತು ಸಣ್ಣಪುಟ್ಟ ವಿವಾದಗಳು ಸಹಜವಾಗಿ ನಡೆಯುತ್ತವೆ ಎಂದು ಘಟನೆಯನ್ನು ಹಗುರುಗೊಳಿಸಲು ಯತ್ನಿಸಿದ್ದಾರೆ. ಅಲ್ಲದೆ, ಇಬ್ಬರ ನಡುವಿನ ಈ ಸಣ್ಣ ವಿವಾದವನ್ನು ಶೀಘ್ರದಲ್ಲೇ ರಾಜಿ ಮೂಲಕ ಬಗೆಹರಿಸಿಕೊಳ್ಳಲಾಗುವುದು ಎಂದಿದ್ದಾರೆ. ಆದರೆ ಇದರ ಬೆನ್ನಲ್ಲೇ ಓಲ್ಡ್ ಫರಿದಾಬಾದ್ ಪೊಲೀಸ್ ಠಾಣೆಯಲ್ಲಿ ಒಬ್ಬ ನಾಯಕಿ ಮತ್ತೊಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆಂದು ತಿಳಿದುಬಂದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net