ತುಂಬಾ ವರ್ಷಗಳ ಬಳಿಕ ಸಿಂಹ ರಾಶಿಯಲ್ಲಿ ಗುರು-ಕೇತು ಮಹಾಯೋಗ: ಈ 4 ರಾಶಿಗಳಿಗೆ ರಾಜಯೋಗ, ಅನಿರೀಕ್ಷಿತ ಆದಾಯ ಭರಪೂರ! Astrology

ಆಕಸ್ಮಿಕ ಬದಲಾವಣೆಗಳು ಮತ್ತು ರಹಸ್ಯಗಳಿಗೆ ಹೆಸರಾದ ಕೇತು ಹಾಗೂ ಜ್ಞಾನದಾತ ಗುರುವಿನ ಈ ಸಂಯೋಗವು ಹಲವು ವರ್ಷಗಳ ಬಳಿಕ ಸಂಭವಿಸುತ್ತಿರುವುದರಿಂದ ಜ್ಯೋತಿಷ್ಯದಲ್ಲಿ ಅತ್ಯಂತ ಮಹತ್ವಪೂರ್ಣವೆಂದು ಪರಿಗಣಿಸಲಾಗಿದೆ.
Astrology
ಸಾಂದರ್ಭಿಕ ಚಿತ್ರ
Published on: 

Astrology : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಗುರು ಬೃಹಸ್ಪತಿಯು (ಗುರು ಗ್ರಹ) ಅತ್ಯಂತ ಶುಭ ಗ್ರಹವಾಗಿದ್ದು, ನವಾಧಿಪತ್ಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾನೆ. ಪ್ರತಿ ಒಂದು ವರ್ಷಕ್ಕೊಮ್ಮೆ ತನ್ನ ರಾಶಿಯನ್ನು ಬದಲಾಯಿಸುವ ಗುರು ಗ್ರಹವು, ಸದ್ಯದಲ್ಲೇ ಕರ್ಕಾಟಕ ರಾಶಿಯಿಂದ ಸಿಂಹ ರಾಶಿಗೆ ಪ್ರವೇಶಿಸಲಿದೆ. ಅಕ್ಟೋಬರ್ 31 ರಂದು ಸಿಂಹ ರಾಶಿಯನ್ನು ಪ್ರವೇಶಿಸಲಿರುವ ಗುರುವು, ಈಗಾಗಲೇ ಅಲ್ಲಿ ಸಂಚರಿಸುತ್ತಿರುವ ಛಾಯಾ ಗ್ರಹ ಕೇತುವಿನೊಂದಿಗೆ ಅಪರೂಪದ ಸಂಯೋಗವನ್ನು (Jupiter-Ketu Conjunction) ರಚಿಸಲಿದ್ದಾನೆ.

ಆಕಸ್ಮಿಕ ಬದಲಾವಣೆಗಳು ಮತ್ತು ರಹಸ್ಯಗಳಿಗೆ ಹೆಸರಾದ ಕೇತು ಹಾಗೂ ಜ್ಞಾನದಾತ ಗುರುವಿನ ಈ ಸಂಯೋಗವು ಹಲವು ವರ್ಷಗಳ ಬಳಿಕ ಸಂಭವಿಸುತ್ತಿರುವುದರಿಂದ ಜ್ಯೋತಿಷ್ಯದಲ್ಲಿ ಅತ್ಯಂತ ಮಹತ್ವಪೂರ್ಣವೆಂದು ಪರಿಗಣಿಸಲಾಗಿದೆ. ಈ ವಿಶೇಷ ರಾಜಯೋಗದಿಂದ ಎಲ್ಲಾ ರಾಶಿಗಳ ಮೇಲೂ ಪ್ರಭಾವ ಬೀರಿದರೂ ನಿರ್ದಿಷ್ಟವಾಗಿ ಕೆಲವು ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆಯಲಿದೆ.

ಮೇಷ ರಾಶಿ

Aries Zodiac Signs

ಮೇಷ ರಾಶಿಯವರ ಜಾತಕದ 5ನೇ ಮನೆಯಲ್ಲಿ ಗುರು ಮತ್ತು ಕೇತುವಿನ ಸಂಯೋಗವು ಜರುಗಲಿದೆ. ಇದು ಈ ರಾಶಿಯವರಿಗೆ ಹೊಸ ಆದಾಯದ ಮೂಲಗಳನ್ನು ಸೃಷ್ಟಿಸುವುದಲ್ಲದೆ, ದೀರ್ಘಕಾಲದಿಂದ ಬಾರದೆ ನಿಂತುಹೋಗಿದ್ದ ಹಣವನ್ನು ನಿಮ್ಮ ಕೈ ಸೇರುವಂತೆ ಮಾಡುತ್ತದೆ. ನಿರೀಕ್ಷೆಗೂ ಮೀರಿ ನಿಮ್ಮ ಆದಾಯದಲ್ಲಿ ಭಾರಿ ಏರಿಕೆಯಾಗಲಿದೆ. ಉದ್ಯೋಗದಲ್ಲಿರುವವರಿಗೆ ಹೊಸ ಜವಾಬ್ದಾರಿಗಳ ಜೊತೆಗೆ ಬಡ್ತಿ ಹಾಗೂ ವೇತನ ಹೆಚ್ಚಳದ ಸಂಭವವಿದ್ದು, ಉದ್ಯಮಿಗಳಿಗೆ ಹೊಸ ಒಪ್ಪಂದಗಳಿಂದ ಭರ್ಜರಿ ಲಾಭ ಸಿಗಲಿದೆ.

Also Read
ಮಕರ ರಾಶಿಗೆ ರಾಹು ಪ್ರವೇಶ: ಈ 4 ರಾಶಿಗಳಿಗೆ ಖುಲಾಯಿಸಲಿದೆ ಅದೃಷ್ಟ, ಹಠಾತ್​ ಕೈಸೇರಲಿದೆ ಕಾಂಚಾಣ..! Astrology
Astrology

ಕರ್ಕಾಟಕ ರಾಶಿ

cancer

ಕರ್ಕಾಟಕ ರಾಶಿಯವರ ಜಾತಕದ 2ನೇ ಮನೆಯಲ್ಲಿ ಈ ಅಪರೂಪದ ಸಂಯೋಗವು ಸಂಭವಿಸಲಿದೆ. ಇದು ಇವರಿಗೆ ವೃತ್ತಿಜೀವನ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿಯನ್ನು ತಂದುಕೊಡಲಿದೆ. ಆದಾಯದ ಗಳಿಕೆ ಹೆಚ್ಚಾಗುವುದರ ಜೊತೆಗೆ ಹಳೆಯ ಹೂಡಿಕೆಗಳಿಂದಲೂ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ದೀರ್ಘಕಾಲದಿಂದ ಕಠಿಣ ಪರಿಶ್ರಮ ಪಡುತ್ತಿರುವವರಿಗೆ ಬಡ್ತಿ ಭಾಗ್ಯ ಒಲಿಯಲಿದೆ ಹಾಗೂ ಅನಿರೀಕ್ಷಿತ ಧನಲಾಭವಾಗುವ ಬಲವಾದ ಯೋಗವಿದೆ. ಆದರೆ ಪ್ರಮುಖ ಆರ್ಥಿಕ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುವುದು ಉತ್ತಮ.

ಸಿಂಹ ರಾಶಿ

Leo Zodiac Signs

ಗುರು ಮತ್ತು ಕೇತುವಿನ ಈ ಮಹಾಯೋಗವು ಸ್ವತಃ ಸಿಂಹ ರಾಶಿಯವರ 1 ನೇ ಮನೆ ಅಂದರೆ ಲಗ್ನದಲ್ಲಿಯೇ ಸಂಭವಿಸುತ್ತಿದೆ. ಇದರಿಂದಾಗಿ ಈ ರಾಶಿಯವರಿಗೆ ಅನಿರೀಕ್ಷಿತ ಧನಪ್ರಾಪ್ತಿಯಾಗುವ ಯೋಗವಿದೆ. ಉದ್ಯಮಿಗಳು ಹೊಸ ವ್ಯವಹಾರಿಕ ಒಪ್ಪಂದಗಳ ಮೂಲಕ ಹೆಚ್ಚಿನ ಲಾಭವನ್ನು ಕಾಣಲಿದ್ದಾರೆ. ಕೆಲಸದ ಸ್ಥಳದಲ್ಲಿ ಬಡ್ತಿ ಅಥವಾ ಸಂಬಳ ಹೆಚ್ಚಳದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಯಶಸ್ವಿಯಾಗಿ ಮುಕ್ತಾಯಗೊಳ್ಳಲಿದ್ದು, ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳ ಪರಿಚಯ ಹಾಗೂ ಸ್ನೇಹ ದೊರೆಯಲಿದೆ.

Also Read
ಅ.17ರಂದು ಶುಕ್ರಾದಿತ್ಯ ರಾಜಯೋಗ ಸೃಷ್ಟಿ: ಈ 4 ರಾಶಿಯವರಿಗೆ ಶುಕ್ರದೆಸೆ ಆರಂಭ, ಹರಿದುಬರಲಿದೆ ಅನಿರೀಕ್ಷಿತ ಆದಾಯ! Astrology
Astrology

ಧನುಸ್ಸು ರಾಶಿ

Sagittarius Zodiac Signs

ಧನುಸ್ಸು ರಾಶಿಯವರ ಜಾತಕದ 9ನೇ ಮನೆಯಲ್ಲಿ ಗುರುವಿನ ಮತ್ತು ಕೇತುವಿನ ಸಂಯೋಗವು ಜರುಗಲಿದೆ. ಇದು ಇವರಿಗೆ ಅದೃಷ್ಟದ ಬಾಗಿಲು ತೆರೆಯಲಿದ್ದು, ಆರ್ಥಿಕ ಸ್ಥಿತಿಯಲ್ಲಿ ಹಠಾತ್ ಮತ್ತು ಅನಿರೀಕ್ಷಿತ ಏರಿಕೆಯನ್ನು ತರಲಿದೆ. ವ್ಯಾಪಾರ-ವ್ಯವಹಾರಗಳಲ್ಲಿ ಉತ್ತಮ ಪ್ರಗತಿ ಕಂಡುಬರುವುದಲ್ಲದೆ, ನಿರೀಕ್ಷಿಸದ ಮೂಲಗಳಿಂದಲೂ ದೊಡ್ಡ ಪ್ರಮಾಣದ ಲಾಭ ಹರಿದುಬರಲಿದೆ. ಇಲ್ಲಿಯವರೆಗೆ ಹಣಕಾಸಿನ ತೊಂದರೆಗಳಿಂದ ಬಳಲುತ್ತಿದ್ದವರಿಗೆ ಗುರುವಿನ ಈ ಸಂಚಾರದ ನಂತರ ಆರ್ಥಿಕ ಮುಗ್ಗಟ್ಟು ನಿವಾರಣೆಯಾಗಿ ನೆಮ್ಮದಿಯ ಜೀವನ ನಡೆಸಲು ಉತ್ತಮ ಅವಕಾಶಗಳು ದೊರೆಯಲಿವೆ.

ಗುರು-ಕೇತುಗಳ ಈ ವಿಶಿಷ್ಟ ಮೈತ್ರಿಯು ವ್ಯಕ್ತಿಗಳ ವೃತ್ತಿಜೀವನ ಹಾಗೂ ಹಣಕಾಸಿನ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಅಲೆಯೊಂದನ್ನು ಸೃಷ್ಟಿಸಲಿದೆ. ಕೇತುವಿನ ಪ್ರಭಾವದಿಂದ ಜೀವನದಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳು ಕಂಡುಬಂದರೂ, ದೇವಗುರುವಿನ ಶುಭ ದೃಷ್ಟಿಯಿಂದ ಅಂತಿಮವಾಗಿ ಯಶಸ್ಸು ಮತ್ತು ಆಧ್ಯಾತ್ಮಿಕ ಹಾಗೂ ಭೌತಿಕ ಪ್ರಗತಿಯು ಲಭ್ಯವಾಗಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ.

Also Read
ಇಲ್ಲಿ ಶಿವನಿಗೆ ಏಡಿ ಅರ್ಪಿಸಿದರೆ ಪವಾಡವೇ ನಡೆಯುತ್ತಂತೆ... ಈ ದೇವಸ್ಥಾನದ ವಿಚಿತ್ರ ಆಚರಣೆ ಕೇಳಿದ್ರೆ ಅಚ್ಚರಿಯಾಗುತ್ತೆ! Shiva temple
Astrology

ಈ ಯೋಗವು ಅದೃಷ್ಟವನ್ನು ತಂದರೂ ಸಹ, ಆರ್ಥಿಕ ವಹಿವಾಟುಗಳು ಮತ್ತು ಹೂಡಿಕೆಗಳ ವಿಚಾರದಲ್ಲಿ ಜಾತಕರು ಜಾಗರೂಕರಾಗಿರಬೇಕು. ಕೇತುವಿನ ಪ್ರಭಾವದಿಂದ ಕೆಲವು ನಿರ್ಧಾರಗಳಲ್ಲಿ ಗೊಂದಲಗಳು ಉಂಟಾಗಬಹುದು, ಆದ್ದರಿಂದ ಹಿರಿಯರ ಅಥವಾ ಜ್ಯೋತಿಷಿಗಳ ಸಲಹೆ ಪಡೆದು ಹೆಜ್ಜೆ ಇಡುವುದು ಒಳಿತು.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net