ಭಾರತೀಯ ಸೇನೆಯಲ್ಲಿ ಮಹತ್ವದ ಬದಲಾವಣೆ: ‘ಬ್ರಿಗೇಡಿಯರ್’ ಹುದ್ದೆ ರದ್ದುಗೊಳಿಸಲು ಸಿದ್ಧತೆ? ಕರ್ನಲ್‌ಗಳಿಗೆ ಸಿಗಲಿದೆ ಜಾಕ್‌ಪಾಟ್ ಬಡ್ತಿ! Brigadier Rank

Preparations are underway to submit a significant proposal to the 8th Pay Commission, suggesting the abolition of the rank of Brigadier in the Indian Army and the direct promotion of Colonels to the rank of Major General. (Representative image)
ಭಾರತೀಯ ಸೇನೆಯಲ್ಲಿ ಬ್ರಿಗೇಡಿಯರ್ ಶ್ರೇಣಿಯನ್ನು ರದ್ದುಗೊಳಿಸಿ, ಕರ್ನಲ್‌ಗಳಿಗೆ ನೇರವಾಗಿ ಮೇಜರ್ ಜನರಲ್ ಹುದ್ದೆಗೆ ಬಡ್ತಿ ನೀಡುವ ಮಹತ್ವದ ಪ್ರಸ್ತಾವನೆಯನ್ನು 8ನೇ ವೇತನ ಆಯೋಗಕ್ಕೆ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. (ಸಾಂದರ್ಭಿಕ ಚಿತ್ರ)
Published on: 

ನವದೆಹಲಿ: ಭಾರತೀಯ ಸೇನೆಯ ಆಡಳಿತ ಮತ್ತು ಶ್ರೇಣಿ ವ್ಯವಸ್ಥೆಯಲ್ಲಿ ದಶಕಗಳ ನಂತರ ಅತಿ ದೊಡ್ಡ ಬದಲಾವಣೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸೇನಾಧಿಕಾರಿಗಳ ಬಡ್ತಿ ವಿಳಂಬವನ್ನು ತಪ್ಪಿಸಲು ಮತ್ತು ನಾಗರಿಕ ಸೇವೆಗಳ ಅಧಿಕಾರಿಗಳೊಂದಿಗಿನ ವೇತನ ಹಾಗೂ ಶ್ರೇಣಿ ತಾರತಮ್ಯವನ್ನು ಹೋಗಲಾಡಿಸಲು, ಸೇನೆಯಲ್ಲಿರುವ ‘ಬ್ರಿಗೇಡಿಯರ್’ (Brigadier) ಶ್ರೇಣಿಯನ್ನು ರದ್ದುಗೊಳಿಸಲು ಭಾರತೀಯ ಸೇನೆ ಗಂಭೀರ ಚಿಂತನೆ ನಡೆಸಿದೆ.

ಈ ಮಹತ್ವದ ಪ್ರಸ್ತಾವನೆಯನ್ನು ರಕ್ಷಣಾ ಸಚಿವಾಲಯದ ಮೂಲಕ 8ನೇ ಕೇಂದ್ರ ವೇತನ ಆಯೋಗಕ್ಕೆ ಸಲ್ಲಿಸಲು ಸೇನೆ ಸಿದ್ಧತೆ ನಡೆಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಏನಿದು ಹೊಸ ಪ್ರಸ್ತಾವನೆ?

ಪ್ರಸ್ತುತ ಸೇನೆಯಲ್ಲಿ ಕರ್ನಲ್ ಹುದ್ದೆಯ ನಂತರ ಬ್ರಿಗೇಡಿಯರ್, ತದನಂತರ ಮೇಜರ್ ಜನರಲ್ ಹುದ್ದೆಗೆ ಬಡ್ತಿ ನೀಡಲಾಗುತ್ತದೆ. ಆದರೆ ಹೊಸ ಶಿಫಾರಸು ಜಾರಿಯಾದರೆ, ಬ್ರಿಗೇಡಿಯರ್ ಹುದ್ದೆಯನ್ನು ಸಂಪೂರ್ಣವಾಗಿ ತೆಗೆದುಹಾಕಿ, ಕರ್ನಲ್‌ಗಳಿಗೆ ನೇರವಾಗಿ ಮೇಜರ್ ಜನರಲ್ ಹುದ್ದೆಗೆ ಬಡ್ತಿ ನೀಡಲಾಗುತ್ತದೆ.

ಒಂದೊಮ್ಮೆ ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ, ಇದರ ಪರಿಣಾಮ ನೌಕಾಪಡೆ ಮತ್ತು ವಾಯುಪಡೆಯ ಮೇಲೂ ಬೀರಲಿದ್ದು, ಅಲ್ಲಿನ ಸಮಾನಾಂತರ ಹುದ್ದೆಗಳಾದ ‘ಕಮೋಡೋರ್’ ಮತ್ತು ‘ಏರ್ ಕಮೋಡೋರ್’ ಶ್ರೇಣಿಗಳು ಸಹ ರದ್ದಾಗಲಿವೆ.

ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ 8ನೇ ವೇತನ ಆಯೋಗಕ್ಕೆ ಈ ತಿಂಗಳು (ನವೆಂಬರ್​) ಅಥವಾ ಮುಂದಿನ ತಿಂಗಳೊ (ಡಿಸೆಂಬರ್​) ಳಗೆ ಈ ಪ್ರಸ್ತಾವನೆಯನ್ನು ಅಂತಿಮಗೊಳಿಸಿ ಕಳುಹಿಸುವ ಸಾಧ್ಯತೆಯಿದೆ. ಮುಂದಿನ ವರ್ಷ ಮೇ ತಿಂಗಳೊಳಗೆ ಆಯೋಗವು ಕೇಂದ್ರಕ್ಕೆ ತನ್ನ ವರದಿ ಸಲ್ಲಿಸಲಿದ್ದು, ನವೆಂಬರ್ ವೇಳೆಗೆ ಹೊಸ ಶಿಫಾರಸುಗಳು ಜಾರಿಗೆ ಬರುವ ನಿರೀಕ್ಷೆಯಿದೆ.

ಬದಲಾವಣೆಗೆ ಅಸಲಿ ಕಾರಣವೇನು?

ಸೇನೆ ಮತ್ತು ನಾಗರಿಕ ಸೇವೆಗಳ ಅಧಿಕಾರಿಗಳ ನಡುವಿನ ಬಡ್ತಿ ಹಾಗೂ ವೇತನ ಮಟ್ಟದಲ್ಲಿನ ಭಾರಿ ಅಂತರವೇ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ:

33 ವರ್ಷಗಳ ಸುದೀರ್ಘ ಕಾಯುವಿಕೆ: ಸೇನೆಯ ಕೇಡರ್ ಪುನರ್ರಚನೆ ಪ್ರಸ್ತಾವನೆಯ ಪ್ರಕಾರ, ಸೇನಾಧಿಕಾರಿಯೊಬ್ಬರು ಮೇಜರ್ ಜನರಲ್‌ಗೆ ಸಮಾನವಾದ ‘ವೇತನ ಮಟ್ಟ 14’ (Pay Level 14) ತಲುಪಲು ಬರೋಬ್ಬರಿ 32 ರಿಂದ 33 ವರ್ಷಗಳು ಬೇಕಾಗುತ್ತವೆ. ಆದರೆ ಐಎಎಸ್, ಐಪಿಎಸ್ ಮತ್ತು ಭಾರತೀಯ ಅರಣ್ಯ ಸೇವೆಯ ಅಧಿಕಾರಿಗಳು ಕೇವಲ 16 ರಿಂದ 18 ವರ್ಷಗಳಲ್ಲೇ ಈ ಹಂತವನ್ನು ತಲುಪುತ್ತಾರೆ.

ಶ್ರೇಣಿ ವ್ಯವಸ್ಥೆಯಲ್ಲಿ ವ್ಯತ್ಯಾಸ: ಸೇನೆಯಲ್ಲಿ ಒಟ್ಟು 9 ಶ್ರೇಣಿಗಳಿದ್ದರೆ, ನಾಗರಿಕ ಸೇವೆಗಳಲ್ಲಿ ಕೇವಲ 6 ಹಂತಗಳಿವೆ. ಸೇನೆಯ ಒಟ್ಟು ಅಧಿಕಾರಿಗಳಲ್ಲಿ 86% ರಷ್ಟು ಮಂದಿ ಲೆಫ್ಟಿನೆಂಟ್ ಕರ್ನಲ್ ಅಥವಾ ಅದಕ್ಕಿಂತ ಕೆಳಗಿನ ಹುದ್ದೆಗಳಲ್ಲೇ ಉಳಿದಿದ್ದಾರೆ. ಕರ್ನಲ್‌ಗಳು 10.5%, ಬ್ರಿಗೇಡಿಯರ್‌ಗಳು 2.5% ಮತ್ತು ಮೇಜರ್ ಜನರಲ್‌ಗಳು ಕೇವಲ 0.8% ರಷ್ಟಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಐಪಿಎಸ್‌ನಲ್ಲಿ 26% ಕ್ಕಿಂತ ಹೆಚ್ಚು ಅಧಿಕಾರಿಗಳು ಹಿರಿಯ ಆಡಳಿತ ದರ್ಜೆ ಮತ್ತು ಅದಕ್ಕಿಂತ ಮೇಲಿನ ಹುದ್ದೆಗಳಲ್ಲಿದ್ದಾರೆ.

Also Read
ದಾರಿ ತಪ್ಪಿ ಬಾಂಗ್ಲಾ ಗಡಿ ದಾಟಿದ ಭಾರತೀಯ ಯೋಧ ಅರೆಸ್ಟ್​: ಬಿಎಸ್‌ಎಫ್ ಜವಾನನ ವಾಪಸಾತಿಗೆ ಹೈ ಲೆವೆಲ್ ಮೀಟಿಂಗ್​! BSF Soldier
Preparations are underway to submit a significant proposal to the 8th Pay Commission, suggesting the abolition of the rank of Brigadier in the Indian Army and the direct promotion of Colonels to the rank of Major General. (Representative image)

ಯುದ್ಧ ತಂತ್ರಗಾರಿಕೆಯಲ್ಲೂ ಬದಲಾವಣೆ

ಬ್ರಿಗೇಡಿಯರ್ ಹುದ್ದೆ ರದ್ದಾದರೆ, ಮೇಜರ್ ಜನರಲ್‌ಗಳೇ ಬ್ರಿಗೇಡ್‌ಗಳು ಮತ್ತು ವಿಭಾಗಗಳೆರಡನ್ನೂ ಮುನ್ನಡೆಸಲಿದ್ದಾರೆ. ಅಲ್ಲದೆ, ನಿಯಮಿತ ಸೇನಾಧಿಕಾರಿಗಳಿಗೆ ಮೇಜರ್ ಜನರಲ್ ಹುದ್ದೆಯೇ ಕನಿಷ್ಠ ನಿವೃತ್ತಿ ಶ್ರೇಣಿಯಾಗಲಿದೆ.

ಸೇನೆಯು ಈಗಾಗಲೇ ತನ್ನ ಕ್ಷೇತ್ರಗಳನ್ನು ಆಧುನೀಕರಿಸುತ್ತಿದ್ದು, ಸುಮಾರು 5,000 ಸೈನಿಕರನ್ನು ಒಳಗೊಂಡ 5 ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್ ಸಕ್ರಿಯಗೊಳಿಸಿದೆ. ಆದಾಗ್ಯೂ, 3,000 ಸೈನಿಕರನ್ನು ಹೊಂದಿರುವ ಹೊಸ ‘ರುದ್ರ’ ಬ್ರಿಗೇಡ್‌ಗಳು ಸದ್ಯಕ್ಕೆ ಬ್ರಿಗೇಡಿಯರ್‌ಗಳ ನೇತೃತ್ವದಲ್ಲೇ ಕಾರ್ಯನಿರ್ವಹಿಸುತ್ತಿವೆ.

Also Read
"ತಮಿಳುನಾಡಿನ ದತ್ತು ಪುತ್ರ ಮೈದಾನದಿಂದ ನಿವೃತ್ತನಾಗುತ್ತಿದ್ದಾನೆ!" ಎಂ.ಎಸ್. ಧೋನಿ ವಿದಾಯಕ್ಕೆ ಎಂ.ಕೆ. ಸ್ಟಾಲಿನ್ ಭಾವುಕ ಪೋಸ್ಟ್! MS Dhoni
Preparations are underway to submit a significant proposal to the 8th Pay Commission, suggesting the abolition of the rank of Brigadier in the Indian Army and the direct promotion of Colonels to the rank of Major General. (Representative image)

2018 ರಲ್ಲೇ ಮೊಳಕೆಯೊಡೆದಿದ್ದ ಕಲ್ಪನೆ

ಬ್ರಿಗೇಡಿಯರ್ ಶ್ರೇಣಿಯನ್ನು ರದ್ದುಗೊಳಿಸುವ ಆಲೋಚನೆ ಹೊಸದೇನಲ್ಲ. 2018ರಲ್ಲಿ ಅಂದಿನ ಸೇನಾ ಮುಖ್ಯಸ್ಥ ದಿವಂಗತ ಜನರಲ್ ಬಿಪಿನ್ ರಾವತ್ ಅವರು ಆದೇಶಿಸಿದ್ದ ಕೇಡರ್ ಅಧ್ಯಯನದಲ್ಲಿ ಈ ವಿಷಯ ಮೊದಲ ಬಾರಿಗೆ ಪ್ರಸ್ತಾಪವಾಗಿತ್ತು. ಆ ಸಂದರ್ಭದಲ್ಲಿ ಕೆಲವು ನಿವೃತ್ತ ಸೇನಾಧಿಕಾರಿಗಳು ಬ್ರಿಗೇಡ್‌ಗಳನ್ನು ಮುನ್ನಡೆಸುವ ಹುದ್ದೆಯನ್ನು ರದ್ದುಗೊಳಿಸುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಈ ಬಾರಿ ಸೇನೆಯು ಈ ಪ್ರಸ್ತಾವನೆಯನ್ನು ಔಪಚಾರಿಕವಾಗಿ ಜಾರಿಗೆ ತರಲು ಮುಂದಾಗಿರುವುದು ರಕ್ಷಣಾ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ, (ಏಜೆನ್ಸೀಸ್).