ಗ್ಯಾಂಗ್‌ಟಾಕ್‌ನಲ್ಲಿ ಪೊಲೀಸರ ಮಿಂಚಿನ ಕಾರ್ಯಾಚರಣೆ: 15 ಲಕ್ಷ ಮೌಲ್ಯದ ಡ್ರಗ್ಸ್​ ಜೊತೆಗೆ ಆರೋಪಿ ಬಂಧನ!Drug Seizure

ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 15 ಲಕ್ಷ ರೂ. ಮೌಲ್ಯದ 311 ಗ್ರಾಂ ಬ್ರೌನ್ ಶುಗರ್ ವಶ
ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 15 ಲಕ್ಷ ರೂ. ಮೌಲ್ಯದ 311 ಗ್ರಾಂ ಬ್ರೌನ್ ಶುಗರ್ ವಶ
Published on
ಸಿಕ್ಕಿಂ: ಭಾನುವಾರ (ಮಾ.8) ಸಿಕ್ಕಿಂ ರಾಜ್ಯದ ಗ್ಯಾಂಗ್​ಟಾಕ್​ನಲ್ಲಿ ಸುಮಾರು 15 ಲಕ್ಷ ಮೌಲ್ಯದ ಮಾದಕವಸ್ತು ಪತ್ತೆ(Drug Seizure)ಯಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಿರುವುದಾಗಿ ಕುರಿತು ವರದಿಯಾಗಿದೆ.
ನಿಖರ ಗುಪ್ತಚರ ಮಾಹಿತಿನಯನ್ನು ಆಧರಿಸಿ ಸಿಕ್ಕಿಂ ಪೊಲೀಸರು ನಡೆಸಿದ ದಾಳಿಯಲ್ಲಿ ಸುಮಾರು 311.62 ಗ್ರಾಂ ಬ್ರೌನ್​ ಶುಗರ್​​ನ್ನು ವಶಪಡಿಸಿಕೊಂಡಿದ್ದು, ಇದರ ಅಂದಾಜು ಮೊತ್ತ 15 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಮಾದಕ ವಸ್ತುವಿನ ಜೊತೆಗೆ ಮೊಹಮ್ಮದ್​ ಸದಾರೆ ಅಲಂ ಎಂಬ ಆರೋಪಿಯನ್ನು ಸಹ ವಶಕ್ಕೆ ಪಡೆದು ಕೊಂಡಿರುವುದಾಗಿ ಸಿಕ್ಕಿಂ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿ ಮೊಹಮ್ಮದ್​ ಸದಾರೆ ಅಲಂ ಮೂಲತಃ ಬಿಹಾರದವನಾಗಿದ್ದು, ಇವನು ಸಿಕ್ಕಿಂನಲ್ಲಿ ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗಿ ಪೊಲೀಸ್​ ಅಧಿಕಾರಿ ವಾಂಗ್ಯಾಲ್​ ಭುಟಿಯಾ ಹೇಳಿದ್ದಾರೆ. ಇವನನ್ನು 1985 ರ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ (Narcotic Drugs and Psychotropic Substances Act) ಯಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

1985 ರ ಮಾದಕ ದ್ರವ್ಯಗಳು ಮತ್ತು ಮನೋವಿಕೃತ ವಸ್ತುಗಳ ಕಾಯ್ದೆ ಬಗ್ಗೆ

1985 ರ ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ಕಾಯ್ದೆ (NDPS Act) ಭಾರತದಲ್ಲಿ ಮಾದಕ ವಸ್ತುಗಳ ಸೇವನೆ, ತಯಾರಿಕೆ, ಸಾಗಣೆ ಮತ್ತು ಮಾರಾಟವನ್ನು ನಿಯಂತ್ರಿಸುವ ಅತ್ಯಂತ ಪ್ರಮುಖ ಕಾನೂನಾಗಿದೆ.
ನವೆಂಬರ್ 14, 1985 ರಂದು ಜಾರಿಗೆ ಬಂದ ಈ ಕಾಯ್ದೆಯು, ಮಾದಕ ದ್ರವ್ಯಗಳ ದುರುಪಯೋಗದಿಂದ ಸಮಾಜ ಮತ್ತು ಯುವಜನತೆಯನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದೆ. ಈ ಕಾಯ್ದೆಯು ಅಫೀಮ್​, ಗಾಂಜಾ, ಮತ್ತು ಇತರ ರಾಸಾಯನಿಕ ಸೈಕೋಟ್ರೋಪಿಕ್ ವಸ್ತುಗಳ ಮೇಲೆ ಕಠಿಣ ನಿಷೇಧವನ್ನು ಹೇರುತ್ತದೆ.
ಕಾಯ್ದೆಯ ಅಡಿಯಲ್ಲಿ ಮಾದಕ ದ್ರವ್ಯಗಳನ್ನು ಅಕ್ರಮವಾಗಿ ವಶದಲ್ಲಿಟ್ಟುಕೊಳ್ಳುವುದು, ಮಾರಾಟ ಮಾಡುವುದು ಅಥವಾ ಸಾಗಿಸುವುದು ಗಂಭೀರ ಅಪರಾಧವಾಗಿದ್ದು, ಇದಕ್ಕೆ ಅಪರಾಧದ ಪ್ರಮಾಣ ಮತ್ತು ವಶಪಡಿಸಿಕೊಂಡ ವಸ್ತುವಿನ ತೂಕದ ಆಧಾರದ ಮೇಲೆ ಕನಿಷ್ಠ 10 ವರ್ಷಗಳಿಂದ ಹಿಡಿದು ಜೀವಾವಧಿ ಶಿಕ್ಷೆ ಹಾಗೂ ಭಾರಿ ದಂಡ ವಿಧಿಸುವ ಅವಕಾಶವಿದೆ.
ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಸರ್ಕಾರವು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ನಂತಹ ವಿಶೇಷ ತನಿಖಾ ಸಂಸ್ಥೆಗಳನ್ನು ಸ್ಥಾಪಿಸಿದೆ. ಕಾಲಕಾಲಕ್ಕೆ ಈ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಗಿದ್ದು, ವಿಶೇಷವಾಗಿ 1989, 2001 ಮತ್ತು 2014 ರಲ್ಲಿ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ಮಾದಕ ದ್ರವ್ಯಗಳ ಅಕ್ರಮ ಜಾಲವನ್ನು ಮಟ್ಟಹಾಕಲು ಮತ್ತು ಮಾದಕ ವ್ಯಸನಿಗಳ ಪುನರ್ವಸತಿಗೆ ಈ ಕಾಯ್ದೆ ದಾರಿ ಮಾಡಿಕೊಡುತ್ತದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net