ಪ್ರಧಾನಿ ಮೋದಿ ಪದವಿ ಪ್ರಮಾಣ ಪತ್ರ ಬಹಿರಂಗಪಡಿಸುವ ವಿಚಾರ: ಕೇಜ್ರಿವಾಲ್ ಮೇಲ್ಮನವಿ ಅರ್ಜಿ ವಜಾಗೊಳಿಸಿದ ಗುಜರಾತ್ ಹೈಕೋರ್ಟ್ | Gujarat High Court

ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರಗಳನ್ನು ಬಹಿರಂಗಪಡಿಸುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ಮಂಗಳವಾರ(ಸೆ. 29) ಎತ್ತಿಹಿಡಿದಿರುವ ಗುಜರಾತ್ ಹೈಕೋರ್ಟ್, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.
ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ
ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ
Published on: 

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರಗಳನ್ನು ಬಹಿರಂಗಪಡಿಸುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ಕೇಂದ್ರ ಮಾಹಿತಿ ಆಯೋಗ ನೀಡಿದ್ದ ಆದೇಶವನ್ನು ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ತೀರ್ಪನ್ನು ಮಂಗಳವಾರ(ಸೆ. 29) ಎತ್ತಿಹಿಡಿದಿರುವ ಗುಜರಾತ್ ಹೈಕೋರ್ಟ್, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಮತ್ತು ನ್ಯಾಯಮೂರ್ತಿ ಡಿ.ಎನ್. ರೇ ಅವರಿದ್ದ ವಿಭಾಗೀಯ ಪೀಠವು, ಕೇಂದ್ರ ಮಾಹಿತಿ ಆಯೋಗ(ಸಿಐಸಿ) 2016ರ ನಿರ್ದೇಶನವನ್ನು ರದ್ದುಗೊಳಿಸಿ, ಕೇಜ್ರಿವಾಲ್ ಅವರಿಗೆ 25,000 ರೂ.ಗಳ ದಂಡ ವಿಧಿಸಿದ ಏಕಸದಸ್ಯ ಪೀಠದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಆಧಾರವಿಲ್ಲ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಿದೆ.

Also Read
ಬದುಕೋ ಚಾನ್ಸ್​ ಕೇವಲ 10 ರಷ್ಟು ಅಂದಿದ್ರು ವೈದ್ಯರು ಆದ್ರೆ ಇಂದು ಗೂಗಲ್ ಉದ್ಯೋಗಿ: ಈಕೆಯ ಕತೆ ಕೇಳಿದ್ರೆ ಮನಕಲಕುತ್ತೆ..! Survival Story
ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ

ಪ್ರಸ್ತುತ ಪ್ರಕರಣದ ಒಟ್ಟಾರೆ ಸತ್ಯಾಂಶಗಳು ಮತ್ತು ಸನ್ನಿವೇಶಗಳನ್ನು ಪರಿಗಣಿಸಿದಾಗ, ಪ್ರಶ್ನಿತ ತೀರ್ಪಿನಲ್ಲಿ ಮೇಲ್ಮನವಿದಾರರ ವಾದಗಳಿಗೆ ಸಂಬಂಧಿಸಿದಂತೆ ಯಾವುದೇ ದೋಷ ಕಂಡುಬರುವುದಿಲ್ಲ. ಆದ್ದರಿಂದ ಈ ಮೇಲ್ಮನವಿ ವಜಾಗೊಳಿಸಲಾಗಿದೆ. ವೆಚ್ಚದ ಕುರಿತು ಯಾವುದೇ ಹೆಚ್ಚಿನ ಆದೇಶವಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.

ಕೇಜ್ರಿವಾಲ್ ಅವರ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ದಂಡ ವಿಧಿಸಿದ ಆಧಾರವನ್ನು ಪ್ರಶ್ನಿಸಿದರು. ಏಕಸದಸ್ಯ ಪೀಠದ ವೀಕ್ಷಣೆಗೆ ವಿರುದ್ಧವಾಗಿ, ತನ್ನ ಕಕ್ಷಿದಾರರು ಪ್ರಧಾನಿ ಮೋದಿ ಅವರ ಪದವಿಯನ್ನು ಪಡೆಯಲು ಪಟ್ಟುಹಿಡಿದಿರಲಿಲ್ಲ ಎಂದು ವಾದಿಸಿದರು.

ಸಿಐಸಿಯು ಸ್ವಯಂಪ್ರೇರಿತವಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಮತ್ತು ಔಪಚಾರಿಕ ಅರ್ಜಿಯ ಆಧಾರದ ಮೇಲೆ ಅಲ್ಲದೆ ಕೇವಲ ಒಂದು ಪತ್ರದ ಆಧಾರದ ಮೇಲೆ ಅವರನ್ನು ಪ್ರತಿನಿಧಿಯನ್ನಾಗಿ ಹೆಸರಿಸಿದೆ. ಇದಲ್ಲದೆ, ಪದವಿಯು ಈಗಾಗಲೇ ಆನ್‌ಲೈನ್‌ನಲ್ಲಿ ಲಭ್ಯವಿದೆ ಎಂದು ಗುಜರಾತ್ ವಿಶ್ವವಿದ್ಯಾನಿಲಯವು ಏಕಸದಸ್ಯ ಪೀಠದ ಮುಂದೆ ಸಲ್ಲಿಸಿತ್ತು. ಆದಾಗ್ಯೂ, ಪೀಠದ ಮುಂದೆ ಅದು ಎಂದಿಗೂ ಆನ್‌ಲೈನ್‌ನಲ್ಲಿ ಇರಲಿಲ್ಲ ಸೂಚಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಪೀಠ ಆ ಅರ್ಜಿಯನ್ನು ತಿರಸ್ಕರಿಸಿತು ಎಂದು ಹೇಳಿದರು.

ಒಂದು ವೇಳೆ ಆ ಪದವಿಯು ನಿಜವಾಗಿಯೂ ಆನ್‌ಲೈನ್‌ನಲ್ಲಿ ಲಭ್ಯವಿದ್ದರೆ, ಬಹುಶಃ ಅದರ ಸಾರ್ವಜನಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಗುಜರಾತ್ ವಿಶ್ವವಿದ್ಯಾನಿಲಯವು ಅದನ್ನು ಲಭ್ಯವಾಗಿಸಿದೆ. ಅದು ಆರ್‌ಟಿಐ ಕಾಯ್ದೆಯ ವ್ಯಾಪ್ತಿಗೆ ಬರುತ್ತದೆ ಮತ್ತು ಮೊಕದ್ದಮೆಗೆ ಕಾರಣವೇ ಇಲ್ಲದಂತಾಗುತ್ತದೆ ಎಂದು ವಾದಿಸಿದರು.

Also Read
ನದಿಗಿಲ್ಲ ಸೇತುವೆ ದೋಣಿಯೇ ಆಸರೆ: ಶಾಲೆಗೆ ಹೋಗಲು ತಮ್ಮ ಜೀವವನ್ನೇ ಪಣಕ್ಕಿಡುತ್ತಿರುವ ಅಸ್ಸಾಂ ಮಕ್ಕಳು! School Children
ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ಮೋದಿ

ಗುಜರಾತ್ ವಿವಿ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಜ್ರಿವಾಲ್ ಅವರು ಈ ಪ್ರಕರಣದಲ್ಲಿ ಎಡೆಬಿಡದೆ ಹೋರಾಡಿದ್ದಲ್ಲದೆ, ಸಂಸ್ಥೆಯ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಪತ್ರಿಕಾಗೋಷ್ಠಿಗಳನ್ನೂ ನಡೆಸಿದ್ದರು ಎಂದು ಪ್ರತಿಪಾದಿಸಿದರು.

ಆರ್‌ಟಿಐ ಕಾಯಿದೆಯ ದುರುಪಯೋಗವನ್ನು ತಡೆಯಲು ಹಾಗೂ ಕಾಯಿದೆಯ ಮೂಲ ಉದ್ದೇಶವನ್ನು ಈಡೇರಿಸದಂತಹ ಮನವಿಗಳನ್ನು ನಿಭಾಯಿಸುವಲ್ಲಿ ಸರ್ಕಾರಿ ಅಧಿಕಾರಿಗಳ ಉತ್ಪಾದಕ ಕೆಲಸದ ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು, ಮೇಲ್ಮನವಿ ಸಲ್ಲಿಸಿದ್ದಕ್ಕಾಗಿ ಕೇಜ್ರಿವಾಲ್ ಅವರ ಮೇಲೆ ನ್ಯಾಯಾಲಯದ ವೆಚ್ಚವನ್ನು ವಿಧಿಸಬೇಕು ಎಂದು ಮನವಿ ಮಾಡಿದರು.

2016ರಲ್ಲಿ ಕೇಜ್ರಿವಾಲ್ ಅವರು ಪ್ರಧಾನ ಮಂತ್ರಿಯ ಪದವಿಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿ ಸಿಐಸಿಗೆ ಪತ್ರ ಬರೆದಿದ್ದರು. 2016 ಏಪ್ರಿಲ್ ತಿಂಗಳಲ್ಲಿ, ಆಗಿನ ಸಿಐಸಿ ಎಂ ಶ್ರೀಧರ್ ಆಚಾರ್ಯುಲು ಅವರು ಮೋದಿ ಪಡೆದ ಪದವಿಗಳ ಬಗ್ಗೆ ಕೇಜ್ರಿವಾಲ್‌ಗೆ ಮಾಹಿತಿ ನೀಡಬೇಕೆಂದು ದೆಹಲಿ ವಿಶ್ವವಿದ್ಯಾಲಯ ಮತ್ತು ಗುಜರಾತ್ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡಿದ್ದರು.

ಮೋದಿಯವರ ಪದವಿ ವಿವರಗಳನ್ನು ನೀಡುವಂತೆ ಸಿಐಸಿ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಗುಜರಾತ್ ವಿವಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್​ನ ಏಕಸದಸ್ಯ ಪೀಠ, 2023 ಮಾರ್ಚ್ 13ರಂದು ಸಿಐಸಿ ಆದೇಶವನ್ನು ರದ್ದುಪಡಿಸಿ, ಆರ್‌ಟಿಐ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಮತ್ತು ಧೋರಣೆಯು ನಿರ್ಲಕ್ಷ್ಯದಿಂದ ಕೂಡಿರುವುದಾಗಿ ಹೇಳಿ ಕೇಜ್ರಿವಾಲ್ ಅವರಿಗೆ 25,000 ರೂಪಾಯಿ ದಂಡ ವಿಧಿಸಿತ್ತು. (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net