ನದಿಗಿಲ್ಲ ಸೇತುವೆ ದೋಣಿಯೇ ಆಸರೆ: ಶಾಲೆಗೆ ಹೋಗಲು ತಮ್ಮ ಜೀವವನ್ನೇ ಪಣಕ್ಕಿಡುತ್ತಿರುವ ಅಸ್ಸಾಂ ಮಕ್ಕಳು! School Children

ಜೋನೈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಈ ಗ್ರಾಮದಲ್ಲಿ ಚೆಂಗಾಜನ್ ಕೈವರ್ತ ಎಂ.ಇ. ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಮಕ್ಕಳು ಶಾಲೆಗೆ ತೆರಳುವಾಗ ಜಲಮಾರ್ಗಗಳನ್ನು ದಾಟಲು ದೋಣಿಗಳನ್ನು ಅವಲಂಬಿಸಿದ್ದಾರೆ.
School Children
ಶಾಲೆಗೆ ಹೋಗಲು ತಮ್ಮ ಜೀವವನ್ನೇ ಪಣಕ್ಕಿಡುತ್ತಿರುವ ಅಸ್ಸಾಂ ಮಕ್ಕಳು!
Published on: 

ಅಸ್ಸಾಂ : ಧೇಮಾಜಿ ಜಿಲ್ಲೆಯ ಚೆಂಗಜನ್ ಗೋವಾಲಾ ಗ್ರಾಮದ ಶಾಲಾ ಮಕ್ಕಳು ( School Children ) ಶಾಲೆಗೆ ತೆರಳಲು ಇನ್ನೂ ಸಣ್ಣ ದೋಣಿಗಳನ್ನೇ ಅವಲಂಬಿಸಿದ್ದಾರೆ. ಏಕೆಂದರೆ, ಇಲ್ಲಿನ ಲಾಲಿ ನದಿ ಮತ್ತು ಬುರಿ ಸೌತಿ ನದಿಗಳ ಮೇಲೆ ಶಾಶ್ವತ ಸೇತುವೆ ನಿರ್ಮಾಣವಾಗಿಲ್ಲ. ಪ್ರತಿದಿನ ಹೀಗೆ ನದಿ ದಾಟುವುದು ಕೇವಲ ಅನಾನುಕೂಲಕರವಲ್ಲದೆ, ಸುರಕ್ಷತೆಯ ದೃಷ್ಟಿಯಿಂದಲೂ ಅಪಾಯಕಾರಿ ಎಂದು ಸ್ಥಳೀಯರು ಹೇಳುತ್ತಾರೆ.

ಜೋನೈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಈ ಗ್ರಾಮದಲ್ಲಿ ಚೆಂಗಾಜನ್ ಕೈವರ್ತ ಎಂ.ಇ. ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಮಕ್ಕಳು ಶಾಲೆಗೆ ತೆರಳುವಾಗ ಜಲಮಾರ್ಗಗಳನ್ನು ದಾಟಲು ದೋಣಿಗಳನ್ನು ಅವಲಂಬಿಸಿದ್ದಾರೆ. ನದಿಯಲ್ಲಿ ನೀರಿನ ಹರಿವು ಹೆಚ್ಚಿರುವ ಸಂದರ್ಭಗಳಲ್ಲಿ ಹಾಗೂ ದೋಣಿಗಳ ಸಂಖ್ಯೆ ಕಡಿಮೆ ಇರುವ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ. ಮಕ್ಕಳನ್ನು ಸಣ್ಣ ದೋಣಿಯಲ್ಲಿ ನದಿ ದಾಟಿಸುವಾಗ ಅವರು ನೀರಿಗೆ ಬಿದ್ದುಬಿಡಬಹುದೆಂಬ ಭಯ ಯಾವಾಗಲೂ ಇರುತ್ತದೆ ಎಂದು ಸ್ಥಳೀಯ ನಿವಾಸಿ ಚಂದನ್ ಮಾಝಿ ಆತಂಕ ವ್ಯಕ್ತಪಡಿಸಿದ್ದಾರೆ.

Also Read
ಬದುಕೋ ಚಾನ್ಸ್​ ಕೇವಲ 10 ರಷ್ಟು ಅಂದಿದ್ರು ವೈದ್ಯರು ಆದ್ರೆ ಇಂದು ಗೂಗಲ್ ಉದ್ಯೋಗಿ: ಈಕೆಯ ಕತೆ ಕೇಳಿದ್ರೆ ಮನಕಲಕುತ್ತೆ..! Survival Story
School Children

ದೋಣಿಗಳು ಕೆಲವೊಮ್ಮೆ ವಾಪಸ್ ಬರಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇದರಿಂದ ಗ್ರಾಮಸ್ಥರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ದೋಣಿ ಲಭ್ಯವಿಲ್ಲದ ಸಂದರ್ಭದಲ್ಲಿ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಸಾಧ್ಯವಾಗದೆ, ಅವರ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಈ ಸಮಸ್ಯೆ ಶಾಲಾ ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ರೋಗಿಗಳು, ಗರ್ಭಿಣಿಯರು, ರೈತರು, ವ್ಯಾಪಾರಿಗಳು ಸೇರಿದಂತೆ ಗ್ರಾಮದ ಹಲವು ಜನರು ನದಿ ದಾಟಲು ದೋಣಿಗಳನ್ನೇ ಅವಲಂಬಿಸಿದ್ದಾರೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ದೋಣಿ ಸಿಗದಿದ್ದರೆ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯುವುದು ಅಥವಾ ಸಮಯಕ್ಕೆ ಸರಿಯಾಗಿ ಔಷಧ ಪಡೆಯುವುದು ಕಷ್ಟವಾಗುತ್ತದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಇದರ ಜತೆಗೆ ಗ್ರಾಮದಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸುವಂತೆ ಉಪ ಆರೋಗ್ಯ ಕೇಂದ್ರ ಹಾಗೂ ಪಶುವೈದ್ಯಕೀಯ ಸೇವೆ ಆರಂಭಿಸಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ರೈತರು ಹಾಗೂ ಜಾನುವಾರು ಸಾಕಾಣಿಕೆದಾರರು ವೈದ್ಯಕೀಯ ನೆರವಿಗಾಗಿ ಇತರ ಪ್ರದೇಶಗಳಿಂದ ಬರುವ ವೈದ್ಯರನ್ನು ಅವಲಂಬಿಸಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಬಾಲಕಿಯೊಬ್ಬಳು ನದಿಗೆ ಬಿದ್ದು ಮೃತಪಟ್ಟಿದ್ದಾಳೆ. ಆದರೆ ಈ ಘಟನೆಯನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ. ನದಿ ದಾಟುವ ಸಂದರ್ಭದಲ್ಲಿ ಸಂಭವಿಸಬಹುದಾದ ಅಪಘಾತಗಳ ಬಗ್ಗೆಯೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಲಾಲಿ ನದಿ ಮತ್ತು ಬುರಿ ಸೌತಿ ನದಿಗಳ ಸಂಗಮದ ಬಳಿ ಶಾಶ್ವತ ಸೇತುವೆ ನಿರ್ಮಿಸಿದರೆ ಗ್ರಾಮಸ್ಥರ ಸಂಚಾರ ಮತ್ತಷ್ಟು ಸುರಕ್ಷಿತವಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಸೇತುವೆ ನಿರ್ಮಾಣದ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರಲಾಗಿದೆ. ಶಾಸಕ ಭೂಬನ್ ಪೇಗು ಹಾಗೂ ಸಂಸದ ಪ್ರದಾನ್ ಬರುವಾ ಅವರಿಗೂ ಈ ಬಗ್ಗೆ ಮನವಿ ಮಾಡಲಾಗಿದೆ. ಸೇತುವೆ ನಿರ್ಮಿಸುವ ಭರವಸೆ ದೊರೆತಿದ್ದರೂ ಇದುವರೆಗೆ ಸೇತುವೆ ನಿರ್ಮಾಣವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Also Read
ರೇಣುಕಾಸ್ವಾಮಿ ಮರ್ಮಾಂಗಕ್ಕೆ 2 ಬಾರಿ ಒದ್ದ ದರ್ಶನ್​... ಇಂದಿನ ವಿಚಾರಣೆಯಲ್ಲಿ ಮತ್ತಷ್ಟು ಸ್ಫೋಟಕ ಹೇಳಿಕೆ ನೀಡಿದ ಪ್ರದೋಶ್! Actor Darshan
School Children

ಜೋನೈ ಪ್ರದೇಶದಲ್ಲಿ ಶಾಲಾ ಮಕ್ಕಳು ದೋಣಿಗಳ ಮೂಲಕ ನದಿ ದಾಟಿ ಶಾಲೆಗೆ ತೆರಳುವ ಸಮಸ್ಯೆ ಈ ಹಿಂದೆಯೂ ವರದಿಯಾಗಿತ್ತು. ಇದೀಗ ಶಾಶ್ವತ ಸೇತುವೆ ನಿರ್ಮಿಸಿ ಮಕ್ಕಳ ಸುರಕ್ಷಿತ ಸಂಚಾರಕ್ಕೆ ಹಾಗೂ ಗ್ರಾಮಸ್ಥರಿಗೆ ಆರೋಗ್ಯ ಸೇರಿದಂತೆ ಅಗತ್ಯ ಸೇವೆಗಳನ್ನು ಸುಲಭವಾಗಿ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರು ಮನವಿ ಮಾಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net