"ನೋ UPI ಡೇ" ಪ್ರತಿಭಟನೆಗೆ ಬ್ರೇಕ್‌: ಹೋರಾಟ ಹಿಂಪಡೆದ ವ್ಯಾಪಾರಿಗಳು; ನಿರ್ಮಲಾ ಸೀತಾರಾಮನ್​ ಜೊತೆ ನಡೆದ ಸಭೆಯಲ್ಲಿ ಆಗಿದ್ದೇನು? No UPI Day

"ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಗಿನ ಸಭೆ ಯಶಸ್ವಿ ನಂತರ 'ನೋ ಯುಪಿಐ ಡೇ' ಪ್ರತಿಭಟನೆಯನ್ನು ವ್ಯಾಪಾರಿ ಸಂಘಟನೆಗಳು ಹಿಂಪಡೆದಿವೆ. ಎಂಡಿಆರ್ (MDR) ಶುಲ್ಕ ಮತ್ತು ಯುಪಿಐ ವಹಿವಾಟಿನ ಸಂಪೂರ್ಣ ಮಾಹಿತಿ.
Leaders of trade associations withdrew the 'No UPI Day' protest after holding a meeting with Union Finance Minister Nirmala Sitharaman.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ವ್ಯಾಪಾರಿ ಸಂಘಟನೆಗಳ ಮುಖಂಡರು ಸಭೆ ನಡೆಸಿದ ನಂತರ ನೋ UPI ಡೇ ಪ್ರತಿಭಟನೆ ಹಿಂಪಡೆದಿದ್ದರೆ.
Published on: 

ನವದೆಹಲಿ: ಚಿಲ್ಲರೆ ಚಿಂತೆಯನ್ನು ದೂರ ಮಾಡಿ, ಡಿಜಿಟಲ್ ಇಂಡಿಯಾದ ಹೆಮ್ಮೆಯ ಪ್ರತೀಕವಾಗಿರುವ ಯುಪಿಐ (UPI) ವ್ಯವಸ್ಥೆಯಲ್ಲಿ ಒಂದು ದಿನ ಕಪ್ಪುಛಾಯೆ ಕವಿಯಲಿದೆ ಎನ್ನಲಾಗಿತ್ತು. ಅಕ್ಟೋಬರ್ 2 ರಂದು ದೇಶಾದ್ಯಂತ "ನೋ ಯುಪಿಐ ಡೇ" (No UPI Day) ಹೆಸರಿನಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೆ ವ್ಯಾಪಾರಿ ಸಂಘಟನೆಗಳು ಸಜ್ಜಾಗಿದ್ದವು. ಆದರೆ, ನಂತರ ನಡೆದ ಸಭೆಯೊಂದರ ಫಲವಾಗಿ ಈ ಆತಂಕ ದೂರವಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೊತೆಗೆ ನಡೆದ ಮಾತುಕತೆಯು ಸಫಲವಾಗಿದ್ದು, ವ್ಯಾಪಾರಿಗಳು ತಮ್ಮ ಪ್ರತಿಭಟನೆಯನ್ನು ಅಧಿಕೃತವಾಗಿ ಹಿಂಪಡೆದಿದ್ದಾರೆ. ಇದರಿಂದಾಗಿ ಯುಪಿಐ ಪ್ರಿಯರಿಗೆ ಹಾಗೂ ವ್ಯಾಪಾರಿ ವರ್ಗಕ್ಕೆ ದೊಡ್ಡ ನೆಮ್ಮದಿ ಸಿಕ್ಕಂತಾಗಿದೆ.

Also Read
"ನೀವು ನಿಜವಾದ ಹೀರೋ"...: ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಸಾಹಸಕ್ಕೆ ಇಸ್ರೇಲ್​ ಪ್ರಧಾನಿ ನೆತನ್ಯಾಹು ಮೆಚ್ಚುಗೆ! Captain Smit Machchhar
Leaders of trade associations withdrew the 'No UPI Day' protest after holding a meeting with Union Finance Minister Nirmala Sitharaman.

ಏನಿದು ವಿವಾದ?

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೊರಡಿಸಿದ ಹೊಸ ನಿಯಮಗಳ ಪ್ರಕಾರ, ಅಕ್ಟೋಬರ್ 15 ರಿಂದ ಅನ್ವಯವಾಗುವಂತೆ, 2,000 ರೂಪಾಯಿಗಿಂತ ಹೆಚ್ಚಿನ ಯುಪಿಐ ವಹಿವಾಟುಗಳ ಮೇಲೆ ಶೇ. 0.4 ರಷ್ಟು ಮರ್ಚೆಂಟ್ ಡಿಸ್ಕೌಂಟ್ ದರ (MDR) ಅಂದರೆ ಸೇವಾ ಶುಲ್ಕ ವಿಧಿಸಲು ನಿರ್ಧರಿಸಲಾಗಿತ್ತು.

ಇದೇ ವಿಚಾರಕ್ಕೆ ಸಣ್ಣ ಚಿಲ್ಲರೆ ವ್ಯಾಪಾರಿಗಳು ಕೆಂಡಾಮಂಡಲರಾಗಿದ್ದರು. ನಮ್ಮ ಲಾಭವೇ ಅತ್ಯಂತ ಕಡಿಮೆ, ಇದರ ಮೇಲೆ ಈ ಹೊಸ ಎಂಡಿಆರ್ ಶುಲ್ಕದ ಹೊರೆ ಹೊರಿಸಿದರೆ ಸಣ್ಣ ವ್ಯಾಪಾರಿಗಳು ಬದುಕುವುದು ಹೇಗೆ? ಎಂದು ಆಲ್ ಇಂಡಿಯಾ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ​​(AIMRA) ಮತ್ತು ಆಲ್ ಇಂಡಿಯಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಡಿಸ್ಟ್ರಿಬ್ಯೂಟರ್ಸ್ ಫೆಡರೇಶನ್ (AICPDF) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಸರ್ಕಾರದ ಈ ಕ್ರಮವನ್ನು ವಿರೋಧಿಸಲು ಅಕ್ಟೋಬರ್ 2 ರಂದು ತಮ್ಮ ಕ್ಯೂಆರ್ ಕೋಡ್‌ಗಳು ಹಾಗೂ ಸೌಂಡ್‌ಬಾಕ್ಸ್‌ಗಳಿಗೆ ಕಪ್ಪು ಬಟ್ಟೆ ಕಟ್ಟಿ ವಿರೋಧ ವ್ಯಕ್ತಪಡಿಸಲು ತೀರ್ಮಾನಿಸಿದ್ದವು.

ಹಣಕಾಸು ಸಚಿವೆಯ ಮುಂದೆ ಇಟ್ಟ ಬೇಡಿಕೆಗಳೇನು?

ವ್ಯಾಪಾರಿಗಳ ಆತಂಕವನ್ನು ಮನಗಂಡು, ಬಿಜೆಪಿ ಸಂಸದ ಹಾಗೂ CAIT ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌‌ವಾಲ್ ಹಾಗೂ AIMRA ಅಧ್ಯಕ್ಷ ಕೈಲಾಶ್ ಲಖ್ಯಾಣಿ ನೇತೃತ್ವದ ನಿಯೋಗವು ನೇರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದೆ. ನಂತರ ಅಲ್ಲಿ ನಡೆದ ಸಭೆಯಲ್ಲಿ ಕೆಲ ಸಹಲೆ ಹಾಗೂ ಕೆಲವೊಂದು ಸಂಗತಿಗಳಿಗೆ ವಿರೋಧವನ್ನು ವ್ಯಕ್ತಪಡಿಸಿವೆ ಎನ್ನಲಾಗಿದೆ.

  1. ಮೊದಲನೆಯದಾಗಿ, ಈ ಎಂಡಿಆರ್ ಜಾರಿಯನ್ನು ತಕ್ಷಣಕ್ಕೆ ಮಾಡದೆ ಹಂತ ಹಂತವಾಗಿ ಜಾರಿಗೆ ತರಬೇಕು.

  2. ಮೊದಲ ವರ್ಷವೇ ಶೇ. 0.40 ರಷ್ಟು ವಿಧಿಸುವ ಬದಲು, 2026-27 ರಲ್ಲಿ ಕೇವಲ ಶೇ. 0.20 ರಿಂದ ಆರಂಭಿಸಿ ಸ್ವಲ್ಪ ಸ್ವಲ್ಪವೇ ಹೆಚ್ಚಿಸಬೇಕು.

  3. ವ್ಯಾಪಾರಿಗಳ ನಡುವಿನ (M2M) ವಹಿವಾಟುಗಳಿಗೆ ಸಂಪೂರ್ಣ ವಿನಾಯಿತಿ ನೀಡಬೇಕು.

  4. ಈ ಎಲ್ಲ ಸಮಸ್ಯೆಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿಯೊಂದನ್ನು ರಚಿಸಬೇಕು.

ಸೀತಾರಾಮನ್ ಕೊಟ್ಟ ಭರವಸೆ ಏನು?

ವ್ಯಾಪಾರಿಗಳ ಈ ಎಲ್ಲಾ ನೋವುಗಳು ಮತ್ತು ಆತಂಕಗಳನ್ನು ಹಣಕಾಸು ಸಚಿವರು ತಾಳ್ಮೆಯಿಂದ ಆಲಿಸಿದ್ದು, ವ್ಯಾಪಾರಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಷಯದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರದ ಕಡೆಯಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕ ಹಿನ್ನೆಲೆಯಲ್ಲಿ, AIMRA ಮತ್ತು AICPDF ಸಂಘಟನೆಗಳು ಅಕ್ಟೋಬರ್ 2 ರಂದು ನಿಗದಿಯಾಗಿದ್ದ "ನೋ ಯುಪಿಐ ಡೇ" ಪ್ರತಿಭಟನೆಯನ್ನು ಅಧಿಕೃತವಾಗಿ ಕೈಬಿಡುವುದಾಗಿ ಘೋಷಿಸಿದ್ದಾರೆ.

Also Read
ಸೌಜನ್ಯ ಪ್ರಕರಣ: ಮರು ತನಿಖೆ ಮುನ್ನವೇ ಮೊದಲ ಸವಾಲು; ಎಸ್​ಐಟಿ ತಂಡದಿಂದ ಹೆಸರು ಕೈಬಿಡುವಂತೆ ASP ವೆಂಕಟೇಶ್ ಪ್ರಸನ್ನ ಮನವಿ! ASP Venkatesh Prasanna
Leaders of trade associations withdrew the 'No UPI Day' protest after holding a meeting with Union Finance Minister Nirmala Sitharaman.

ಸಾಮಾನ್ಯ ಜನರಿಗೆ ಏನು ಲಾಭ?

ಹಣಕಾಸು ಸಚಿವಾಲಯ ಈಗಾಗಲೇ ಸ್ಪಷ್ಟಪಡಿಸಿರುವಂತೆ, ಸಾಮಾನ್ಯ ಜನರು ಮಾಡುವ ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಹಣ ವರ್ಗಾವಣೆಗೆ ಯುಪಿಐ ಎಂದಿಗೂ ಸಂಪೂರ್ಣ ಉಚಿತವಾಗಿರಲಿದೆ. ಒಟ್ಟು ವಹಿವಾಟಿನ ಶೇ. 70 ರಷ್ಟು ಭಾಗ ಮತ್ತು ಸುಮಾರು ಶೇ. 96 ರಷ್ಟು ವ್ಯಾಪಾರಿ ವಹಿವಾಟುಗಳು ಈ ಎಂಡಿಆರ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯಲಿವೆ ಎಂದು ಸಚಿವಾಲಯ ತಿಳಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net