ನವದೆಹಲಿ: ಜೂನ್ 10 ಬುಧವಾರ ಇದು ಸ್ವತಂತ್ರ ಭಾರತದಲ್ಲಿ ಅತ್ಯಂತ ಐತಿಹಾಸಿಕ ದಿನಗಳಲ್ಲಿ ಒಂದಾಗಲಿದ್ದು, ಇಂದು ಪಿಎಂ ನರೇಂದ್ರ ಮೋದಿ 4,399 ದಿನಗಳ ವರೆಗೆ ಸುದೀರ್ಘವಾಗಿ ಪ್ರಧಾನ ಮಂತ್ರಿಗಳಾಗಿ ಆಡಳಿತ ನಡೆಸುವ ಮೂಲಕ, ಜವಹರಲಾಲ್ ನೆಹರೂ ಅವರ ದಾಖಲೆಯನ್ನು ಮುರಿದಿದ್ದಾರೆ.
ಈ ಐತಿಹಾಸಿಕ ದಿನದಂದು ಪ್ರಧಾನಿಗಳಿಗೆ ರಾಜ್ಯ, ದೇಶ ಹಾಗೂ ವಿದೇಶಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ. ಹಾಗೆಯೇ ಸೋಷಿಯಲ್ ಮೀಡಿಯಾನಲ್ಲಿ ಸದಾ ಚರ್ಚೆಯಲ್ಲಿರುವ ಸಂಸದ ಎಂದೇ ಖ್ಯಾತಿ ಗಳಿಸಿರುವ ರಾಘವ್ ಚಡ್ಡಾ (Raghav Chadha on Narendra Modi) ಪ್ರಧಾನಿಗಳಿಗೆ ಶುಭಕೋರಿದ್ದಾರೆ.
ನೆಹರು ವಿರೋಧವನ್ನೇ ಕಂಡಿಲ್ಲ; ಮೋದಿ ವಿರೋಧದಿಂದಲೇ ಬೆಳೆದರು!
ಪ್ರಧಾನಿಗಳು ಅತ್ಯಧಿಕ ದಿನಗಳ ಆಡಳಿತವನ್ನು ಶ್ಲಾಘಿಸಿರುವ ರಾಘವ್ ಚಡ್ಡಾ, ಇಂದು ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಅವರು ಅತ್ಯಧಿಕ ದಿನಗಳವರೆಗೆ ಆಡಳಿತ ನಡೆಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ, ಅವರಿಗೆ ನಾನು ಅಭಿನಂದನೆ ಸೂಚಿಸುತ್ತೆನೆಂದು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರದುಕೊಂಡಿದ್ದಾರೆ.
ದೇಶದ ಮೊದಲ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರು ಅವರು ಸುಧೀರ್ಘ ಆಡಳಿತವನ್ನು ನಡೆಸಿದ್ದರು. ಆದರೆ ಅವರು ಏಕ ಪಕ್ಷೀಯ ಆಡಳಿತವಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಹೊರತು ಪಡಿಸಿ ಬೇರೆ ಯಾವುದೇ ಪಕ್ಷ ಅಸ್ಥಿತ್ವದಲ್ಲೇ ಇರದ ಸ್ಥಿತಿಯಿತ್ತು.
ಆದರೆ ನರೇಂದ್ರ ಮೋದಿ ಅವರು ಗುಜರಾತ್ದ ಮುಖ್ಯಮಂತ್ರಿಯಿಂದ ಹಿಡಿದು 2014 ರಲ್ಲಿ ಪ್ರಧಾನಿಯಾಗಿ ಇಲ್ಲಿವರೆಗೆ ವಿರೋಧ ಪಕ್ಷಗಳ ವಿರೋಧವನ್ನು ಎದುರಿಸುತ್ತಾ, ದೇಶದ ಜನರ ಮನವನ್ನು ಗೆಲ್ಲುತ್ತಾ ಬಂದಿದ್ದಾರೆಂದು ಚಡ್ಡಾ ಬರೆದುಕೊಂಡಿದ್ದಾರೆ.
ಅದರ ಜೊತೆಗೆ ಮೋದಿ ಅವರು ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ಜೊತೆ ಸೇರಿಕೊಂಡು ಎರಡು ರೀತಿಯ ಆಡಳಿತಾವಧಿಯನ್ನು ಕಂಡಿದ್ದಾರೆ. ಹಾಗೆಯೇ 2014, 2019 ಮತ್ತು 2024 ರಲ್ಲಿ ನಿರಂತರವಾಗಿ ಜನರಿಂದ ಆಯ್ಕೆಯಾಗುವ ಮೂಲಕ ನೂತನ ದಾಖಲೆಯನ್ನು ಬರೆದಿದ್ದಾರೆಂದು ಹರ್ಷ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್).