MRP ಗಿಂತ ಹೆಚ್ಚಿನ ಬೆಲೆಗೆ ಬಿಯರ್ ಮಾರಾಟ: KSBC ಗೆ 25,000 ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ! MRP Beer Price Issue

MRP ಗಿಂತ ಹೆಚ್ಚಿನ ಬೆಲೆಗೆ ಬಿಯರ್ ಮಾರಾಟ
MRP ಗಿಂತ ಹೆಚ್ಚಿನ ಬೆಲೆಗೆ ಬಿಯರ್ ಮಾರಾಟ
Published on

ಪ್ರಮುಖ ಮುಖ್ಯಾಂಶಗಳು

  • ಎಂಆರ್‌ಪಿಗಿಂತ ಹೆಚ್ಚು ಹಣ ವಸೂಲಿ ಮಾಡಿದ ಕೆಎಸ್‌ಬಿಸಿಐಎಲ್‌
  • MRP ಗಿಂತ ಹೆಚ್ಚಿನ ಬೆಲೆಗೆ ಬಿಯರ್ ಮಾರಾಟ
  • 25,000 ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ
ಕೇರಳ: ಮಾಕ್ಸಿಮಮ್​ ರಿಟೇಲ್​ ಪ್ರೈಸ್​ (MRP) ಕ್ಕಿಂತ ಹೆಚ್ಚಿನ ಬೆಲೆಗೆ ಬಿಯರ್​ (MRP Beer Price Issue) ಮಾರಿದ ಹಿನ್ನಲೆ 25,000 ರೂಪಾಯಿ ದಂಡ ವಿಧಿಸಿದ ಪ್ರಕರಣ ಕೇರಳದಲ್ಲಿ ವರದಿಯಾಗಿದೆ.

10 ರೂ. ಏರಿಕೆ 25,000 ದಂಡ!

ಮಾಹಿತಿ ಪ್ರಕಾರ, ಕೇರಳದ ಪತ್ತನಂತಿಟ್ಟದಲ್ಲಿ KSBC ವ್ಯಾಪ್ತಿಯಲ್ಲಿ ಬರುವ ಮದ್ಯದಂಗಡಿಯಲ್ಲಿ, ವ್ಯಕ್ತಿಯೊಬ್ಬನಿಗೆ 650 ಎಂಎಲ್​​ ಬಿಯರ್​ ಬಾಟಲನ್ನು 170 ರೂಪಾಯಿ ಬದಲಿದೆ 180 ರೂಪಾಯಿಗೆ ಮಾರಾಟ ಮಾಡಲಾಗಿದೆ.
ಹೆಚ್ಚುವರಿ 10 ರೂಪಾಯಿ ಏಕೆಂದು ಕೇಳಿದಾಗ, ಅಂಗಡಿಯವನಿಂದ ಸರಿಯಾದ ಉತ್ತರ ದೊರೆಯದ ಹಿನ್ನಲೆ ವ್ಯಕ್ತಿ ಗ್ರಾಹಕ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾನೆ. ಅರ್ಜಿ ವಿಚಾರಣೆ ನಡೆಸಿದ ಕೇರಳ ಗ್ರಾಹಕ ಆಯೋಗ, ಕೇರಳ ರಾಜ್ಯ ಪಾನೀಯ ನಿಗಮ (KSBC) ಕ್ಕೆ 25,000 ರೂ ಗಳನ್ನು ವ್ಯಕ್ತಿಗೆ ಪರಿಹಾರವಾಗಿ ನೀಡಬೇಕೆಂದು ಆದೇಶಿಸಿದೆ.

MRP ನಿಯಮಗಳ ಉಲ್ಲಂಘನೆ!

ಈ ಪ್ರಕರಣದ ವಿಚಾರಣೆ ನಡೆಸಿದ ಜಾರ್ಜ್ ಬೇಬಿ ಮತ್ತು ನಿಶಾದ್ ಥಂಕಪ್ಪನ್ ಅವರ ಪೀಠ, ಇದು ಎಂಆರ್​ಪಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಭಾರತದಲ್ಲಿ ಯಾವುದೇ ವಸ್ತುಗಳನ್ನು ಅದರ ಎಂಆರ್​​ಪಿ ಬೆಲೆಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದಿದೆ.
ಯಾವುದೇ ವಸ್ತುಗಳ ಮೇಲೆ ಮುದ್ರಣವಾಗಿರುವ ಎಂಆರ್​ಪಿ ಬೆಲೆ ಮೇಲೆ ಹೆಚ್ಚುವರಿಯಾಗಿ ಒಂದು ರೂಪಾಯಿಗಳನ್ನು ಪಡೆಯುವಂತಿಲ್ಲ. ಇಲ್ಲಿ 170 ರೂಪಾಯಿ ಬದಲಿಗೆ 180 ರೂಪಾಯಿಗಳನ್ನು ಪಡೆದಿರುವುದು ಕಂಡುಬಂದಿದೆ. ಹೀಗಾಗಿ ಕೇರಳ ರಾಜ್ಯ ಪಾನೀಯ ನಿಗಮ (KSBC) ಅರ್ಜಿದಾರರಿಗೆ 25,000 ರೂಪಾಯಿಗಳನ್ನು ಪರಿಹಾರ ಮೊತ್ತವಾಗಿ ಪಾವತಿಸಬೇಕೆಂದು ಆದೇಶಿಸಿದೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net