ಬೆಂಗಳೂರಲ್ಲಿ ಹಾರ್ದಿಕ್-ಮಹೀಕಾ ಕ್ರೇಜ್: ಫೆರಾರಿ ಕಾರಿಗೆ ಮುತ್ತಿಗೆ ಹಾಕಿದ ಫ್ಯಾನ್ಸ್; ವಿಡಿಯೋ ವೈರಲ್​! Hardik Pandya and Mahika Sharma

ಬೆಂಗಳೂರಿಗೆ ಗರ್ಲ್‌ಫ್ರೆಂಡ್ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯಾ ಆಗಮನ
ಬೆಂಗಳೂರಿಗೆ ಗರ್ಲ್‌ಫ್ರೆಂಡ್ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯಾ ಆಗಮನ
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿಗೆ ಗರ್ಲ್‌ಫ್ರೆಂಡ್ ಮಹೀಕಾ ಶರ್ಮಾ ಜೊತೆ ಹಾರ್ದಿಕ್ ಪಾಂಡ್ಯಾ ಆಗಮನ
  • ಐಷಾರಾಮಿ ಫೆರಾರಿ ಕಾರಿನಲ್ಲಿ ಎಂಟ್ರಿ ಕೊಟ್ಟ ಜೋಡಿ
  • ಕಾರಿಗೆ ಮುತ್ತಿಗೆ ಹಾಕಿದ ಪಾಂಡ್ಯಾ ಫ್ಯಾನ್ಸ್​
ಬೆಂಗಳೂರು: ಮಂಗಳವಾರ (ಜೂ.9) ಭಾರತದ ಸ್ಟಾರ್​ ಕ್ರಿಕೆಟ್​ ಆಟಗಾರ ಹಾರ್ದಿಕ್​ ಪಾಂಡ್ಯಾ ಮತ್ತು ಪ್ರೇಯಸಿ ಮಹೀಕಾ ಶರ್ಮಾ (Hardik Pandya and Mahika Sharma) ಜೊತೆ ಬೆಂಗಳೂರಿಗೆ ಆಗಮಿಸಿದಾಗ ಅಭಿಮಾನಿಗಳು ಮುತ್ತಿಗೆ ಹಾಕಿದ ಘಟನೆ ನಡೆದಿದೆ.
ಐಷಾರಾಮಿ ಫೇರಾರಿ ಕಾರಿನಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಜೋಡಿ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಸೇರಿದ್ದ ನೂರಾರು ಜನ ಅಭಿಮಾನಿಗಳು ಕಾರಿಗೆ ಮುತ್ತಿಗೆ ಹಾಕಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗಿದೆ.

ಹರ ಸಾಹಸಪಟ್ಟ ರಕ್ಷಣಾ ಸಿಬ್ಬಂದಿ!

ಕಾರ್ಯಕ್ರಮದ ಸ್ಥಳಕ್ಕೆ ಹಾರ್ದಿಕ್​ ಪಾಂಡ್ಯಾ ಹಾಗೂ ಮಹೀಕಾ ಶರ್ಮಾ ಆಗಮಿಸುತ್ತಿದ್ದಂತೆ ಅಭಿಮಾನಿಗಳ ಹರ್ಷದ ಕಟ್ಟೆ ಒಡೆದು ಕಾರಿಗೆ ಮುತ್ತಿಗೆ ಹಾಕಲು ಪ್ರಾರಂಭಸಿದ್ದಾರೆ. ಇದನ್ನು ತಡೆಯಲು ನಿಯೋಜಿತರಾಗಿದ್ದ ರಕ್ಷಣಾ ಸಿಬ್ಬಂದಿ ಹರ ಸಾಹಸಪಟ್ಟಿದ್ದು, ಭಾರತದಲ್ಲಿ ಹಾರ್ದಿಕ್​ ಪಾಂಡ್ಯಾ ಅವರ ಕ್ರೇಜ್​ ಯಾವ ಮಟ್ಟದಲ್ಲಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದರೆ ತಪ್ಪಾಗದು.
ಆದರೂ ಕರ್ತವ್ಯ ನಿರತರಾಗಿದ್ದ ರಕ್ಷಣಾ ಸಿಬ್ಬಂದಿ ಈ ಗಲಾಟೆಯಿಂದ ಹಾರ್ದಿಕ್​ ಪಾಂಡ್ಯಾ ಹಾಗೂ ಮಹೀಕಾ ಶರ್ಮಾ ಅವರಿಗೆ ಯಾವುದೇ ಅಪಾಯಕಾರಿ, ಅನುಚಿತ ಪರಿಸ್ಥಿತಿ ಎದುರಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಕ್ರಮ ಮುಗಿದ ನಂತರ ಜೋಡಿ ತಮ್ಮ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾಗಿ ತಿಳಿದು ಬಂದಿದೆ.

ಅಫ್ಘಾನ್​ ಸಿರೀಸ್​ನಿಂದ ಹಾರ್ದಿಕ್​ ಔಟ್​!

ಜೂನ್​ 13 ರಿಂದ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮೂರು ಏಕದಿನ ಪಂದ್ಯಾವಳಿಯಿಂದ ಸ್ಟಾರ್​ ಆಗಟಾರ ಹಾರ್ದಿಕ್​ ಪಾಂಡ್ಯಾನ ಹೆಸರನ್ನು ಕೈಬಿಡಲಾಗಿದೆ. ಪಾಂಡ್ಯಾ ಕಾಲಿನ ಇಂಜುರಿಯಿಂದ ಬಳಲುತ್ತಿರುವ ಕಾರಣ ಪಂದ್ಯಾವಳಿಯಿಂದ ಹೊರಗಿಡಲಾಗಿದೆ ಎಂದು ಹೇಳಲಾಗುತ್ತಿದೆ.
ವೈಟ್​ ಬಾಲ್​ ಕ್ರಿಕೆಟ್​ನಲ್ಲಿ ಭಾರತ ತಂಡದ ಪ್ರಮುಖ ಬ್ಯಾಟರ್​ ಹಾಗೂ ಬೌಲಿಂಗ್​ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಪಾಂಡ್ಯಾನ ಅನುಪಸ್ಥಿತಿ ತಂಡಕ್ಕೆ ಖಂಡಿತವಾಗಿ ಕೊರತೆಯಾಗಲಿದೆ ಎನ್ನುವುದು ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯವಾಗಿದೆ, (ಏಜನ್ಸೀಸ್​). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net