'ಆಲ್ಫಾ' ಟೀಸರ್ ಔಟ್: ಆ್ಯಕ್ಷನ್​ ಮೊಡ್​​ನಲ್ಲಿ ಆಲಿಯಾ; ತಂದೆ ಪಾತ್ರದಲ್ಲಿ ಬಾಬಿ ಮಿಂಚಿಂಗ್​; ಜುಲೈ 3 ಕ್ಕೆ ಸಿನಿಮಾ ರಿಲೀಸ್​! Alpha Teaser

ಬಾಲಿವುಡ್‌ನ ಬಹುನಿರೀಕ್ಷಿತ 'ಆಲ್ಫಾ' ಸಿನಿಮಾದ ಟೀಸರ್ ಬಿಡುಗಡೆ
ಬಾಲಿವುಡ್‌ನ ಬಹುನಿರೀಕ್ಷಿತ 'ಆಲ್ಫಾ' ಸಿನಿಮಾದ ಟೀಸರ್ ಬಿಡುಗಡೆ
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ನ ಬಹುನಿರೀಕ್ಷಿತ 'ಆಲ್ಫಾ' ಸಿನಿಮಾದ ಟೀಸರ್ ಬಿಡುಗಡೆ
  • ಆಕ್ಷನ್ ಮೂಡ್‌ನಲ್ಲಿ ಆಲಿಯಾ ಭಟ್ ಮಿಂಚಿದ್ದರೆ, ತಂದೆಯಾಗಿ ಬಾಬಿ ಡಿಯೋಲ್ ಸಾಥ್ ನೀಡಿದ್ದಾರೆ
  • ಜುಲೈ 3 ಕ್ಕೆ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ
ಮುಂಬೈ: ಬಿಡುಗಡೆಗೆ ತಯಾರಾಗಿರುವ ಬಾಲಿವುಡ್​ನ ಬಹು ನೀರಿಕ್ಷಿತ ಸಿನಿಮಾಗಳಲ್ಲಿ ಒಂದಾದ ಆಲ್ಫಾ ಸಿನಿಮಾದ ಟೀಸರ್​ (Alpha Teaser) ಬುಧವಾರ (ಜೂ.10) ಬಿಡುಗಡೆಯಾಗಿದೆ. ಯಶ್​ ರಾಜ್​ ಫಿಲ್ಮ್ಸ್​ನ ಸ್ಪೈ ಥ್ರಿಲ್ಲರ್​ ಸರಣಿಯ ಸಿನಿಮಾ ಇದಾಗಿದ್ದು, ಈ ಚಿತ್ರದಲ್ಲಿ ಆಲಿಯಾ ಭಟ್​ ಹಾಗೂ ಬಾಬಿ ಡಿಯೋಲ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

1 ನಿಮಿಷ 55 ಸೆಕೆಂಡ್​ಗಳ ಟೀಸರ್​​!

ಬಿಡುಗಡೆಯಾಗಿರುವ ಟೀಸರ್​ನಲ್ಲಿ ಆಲಿಯಾ ಭಟ್​ ಮತ್ತು ಬಾಬಿ ಡಿಯೋಲ್​ ತಂದೆ ಮಗಳ ಪಾತ್ರದಲ್ಲಿ ಕಂಡುಬಂದಿದ್ದು, ತಂದೆ ಬಾಬಿ ಡಿಯೋಲ್​ ತನ್ನ ಮಗಳಾದ ಆಲಿಯಾಳನ್ನು ಹೇಗೆ ಗೂಢಚರ್ಯೆ ಕೆಲಸಕ್ಕೆ ಸಿದ್ಧ ಪಡಿಸುತ್ತಾನೆ ಎನ್ನುವ ದೃಶ್ಯಗಳನ್ನು ತೋರಿಸಲಾಗಿದೆ.
ಟೀಸರ್​ ಸುಮಾರು 1 ನಿಮಿಷ 55 ಸೆಕೆಂಡ್​ ಉದ್ದವಿದ್ದು, ಇದರಲ್ಲಿ ಆಲಿಯಾ ಭಟ್​​, ಸಖತ್​ ಆ್ಯಕ್ಷನ್​ಗಳಲ್ಲಿ ತೊಡಗಿರುವ ಸೀನ್​ಗಳನ್ನು ನೋಡ ಬಹುದಾಗಿದೆ. ಕೆಲ ದಿನಗಳ ನಂತರ ಟ್ರೇಲರ್​​ ರೀಲಿಸ್​ ಆಗಲಿದ್ದು, ಆಗ ಸಿನಿಮಾದ ಕಥೆ ಏನು? ವಿಲನ್​ ಯಾರು? ಹಿಂದಿನ ಸ್ಪೈ ಸಿನಿಮಾಗಳ ಜೊತೆ ಏನಾದರೂ ನಂಟಿದೆಯೇ ಎಂದು ಆಗ ಒಂದು ಅಂದಾಜು ಮೂಡಲಿದೆ. ಸಿನಿಮಾ ಬಿಡುಗಡೆಗೆ ಸಂಪೂರ್ಣ ಸಿದ್ಧವಾಗಿದ್ದು ಇದೇ ಜುಲೈ 3 ರಂದು ತೆರೆಕಾಣಲಿದೆ ಎಂದು ಸಿನಿಮಾ ತಂಡ ಘೋಷಿಸಿದೆ.

ಆಲ್ಫಾ ಬಗ್ಗೆ

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಆಲ್ಫಾ (Alpha) ಯಶ್ ರಾಜ್ ಫಿಲ್ಮ್ಸ್ (YRF) ನಿರ್ಮಿಸುತ್ತಿರುವ ಪ್ರಸಿದ್ಧ ಸ್ಪೈ ಯೂನಿವರ್ಸ್ ಭಾಗವಾಗಿದ್ದು, ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ ಆಕ್ಷನ್ ಕಥೆಯನ್ನು ಹೊಂದಿದೆ. ಈ ಚಿತ್ರದಲ್ಲಿ ಸ್ಟಾರ್ ನಟಿ ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಅವರು ತಂದೆಯ ಮಾರ್ಗದರ್ಶನದಲ್ಲಿ ಕಠಿಣ ತರಬೇತಿ ಪಡೆದು ದೇಶದ ಮುಂದಿನ ಪೀಳಿಗೆಯ ಗೂಢಚಾರಳಾಗಿ ರೂಪಾಂತರಗೊಳ್ಳುವ ಯುವತಿಯ ಪಾತ್ರದಲ್ಲಿದ್ದಾರೆ. ಖ್ಯಾತ ನಟ ಬಾಬಿ ಡಿಯೋಲ್ ಆಲಿಯಾ ಭಟ್ ಅವರ ತಂದೆ ಹಾಗೂ ಮೆಂಟರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶಿವ ರಾವೈಲ್ ನಿರ್ದೇಶನದ ಈ ಬಿಗ್ ಬಜೆಟ್ ಆಕ್ಷನ್ ಎಂಟರ್ಟೈನರ್‌ನಲ್ಲಿ ಶರ್ವರಿ ವಾಘ್ ಮತ್ತೊಂದು ಮುಖ್ಯ ಪಾತ್ರದಲ್ಲಿದ್ದು, ಅನಿಲ್ ಕಪೂರ್ ಕೂಡ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಮೂಲತಃ ಹಿಂದಿ ಭಾಷೆಯದ್ದಾಗಿದ್ದರೂ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿರುವ ಈ ಚಿತ್ರವು ಕನ್ನಡ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ಭಾಷೆಗಳಿಗೆ ಡಬ್ ಆಗಿ ಜುಲೈ 3 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net