ಲಕ್ಷಾಂತರ ಜನ ನಿಮ್ಮ ಕೈಬಿಟ್ಟಿದ್ದಾರೆ: ಅವರು ತಪ್ಪಾಗಲು ಸಾಧ್ಯವೇ? ರಾಘವ್​ ಚಡ್ಡಾಗೆ ಪ್ರಕಾಶ್​ ರಾಜ್​ ಟಾಂಗ್​! Prakash Raj on Raghav Chadha

ರಾಘವ್​ ಚಡ್ಡಾ ವಿಡಿಯೋಗೆ ಪ್ರಕಾಶ್​ ರಾಜ್​ ಕೌಂಟರ್​
ರಾಘವ್​ ಚಡ್ಡಾ ವಿಡಿಯೋಗೆ ಪ್ರಕಾಶ್​ ರಾಜ್​ ಕೌಂಟರ್​
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿಗೆ ಬೆಂಬಲ ಸೂಚಿಸಿದ ಎಎಪಿ ಸಂಸದ ರಾಘವ್​ ಚಡ್ಡಾ
  • ನಾನೊಬ್ಬ ತಪ್ಪಾಗಬಹುದು ಆದರೆ ನಿಮ್ಮನ್ನು ಅನ್​ಫಾಲೋ ಮಾಡಿದ ಲಕ್ಷಾಂತರ ಜನ ತಪ್ಪಾಗಲು ಸಾಧ್ಯವಿಲ್ಲ
  • ರಾಘವ್​ ಚಡ್ಡಾ ವಿಡಿಯೋಗೆ ಪ್ರಕಾಶ್​ ರಾಜ್​ ಕೌಂಟರ್​
ನವದೆಹಲಿ: ಆಮ್​ ಆದ್ಮಿ ರಾಜ್ಯಸಭಾ ಸಂಸದ ರಾಘವ್​ ಚಡ್ಡಾ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸಿರುವುದನ್ನು ಬಹುಭಾಷಾ ನಟ ಪ್ರಕಾಶ್​ ರಾಜ್​ (Prakash Raj on Raghav Chadha) ಕಟುವಾಗಿ ಟೀಕಿಸಿದ್ದು, ನಿಮ್ಮನ್ನು ಲಕ್ಷಾಂತರ ಜನ ಅನ್​ಫಾಲೋ ಮಾಡಿದ್ದಾರೆಂದು ಕಿಡಿಕಾರಿದ್ದಾರೆ

ನಾನೊಬ್ಬ ತಪ್ಪಾಗಬಹುದು ಲಕ್ಷಾಂತರ ತಪ್ಪಾಗರು!

ಇಂದು (ಏ.27) ರಾಘವ್​ ಚಡ್ಡಾ ತಾವು ಆಮ್​ ಆದ್ಮಿ ಪಕ್ಷವನ್ನು ಬಿಟ್ಟು ಏಕೆ ಬಿಜೆಪಿಗೆ ವಿಲೀನವಾಗಿದ್ದೆನೆಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಚಡ್ಡಾ, ಬಿಜೆಪಿಗೆ ಬೆಂಬಲ ನೀಡುವುದು ನನ್ನೊಬ್ಬನ ನಿಲುವಾಗಿರಲಿಲ್ಲ, ಇತರ ಆರು ಜನ ಸಂಸದರು ಒಪ್ಪಿಗೆ ನೀಡಿದ ನಂತರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ನನ್ನೊಬ್ಬನ ನಿರ್ಧಾರ ತಪ್ಪಾಗಿರಬಹುದು, ಆದರೆ ಏಳು ಜನರ ನಿರ್ಧಾರ ಹೇಗೆ ತಪ್ಪಾಗಲು ಸಾಧ್ಯವೆಂದು ಚಡ್ಡಾ ಹೇಳಿದ್ದರು.
ಈ ಹೇಳಿಕೆಗೆ ಈಗ ವಿರೋಧ ವ್ಯಕ್ತ ಪಡಿಸಿರುವ ಪ್ರಕಾಶ್​ರಾಜ್​, ನೀವು ಬಿಜೆಪಿಗೆ ಬೆಂಬಲ ನೀಡಿದ ತರುವಾಯ ಲಕ್ಷಾಂತರ ಜನ ನಿಮ್ಮನ್ನು ಸೋಷಿಯಲ್​ ಮೀಡಿಯಾನಲ್ಲಿ ಅಲ್​ಫಾಲೋ ಮಾಡಿದ್ದಾರೆ. ಹಾಗಾದರೆ ನಿಮ್ಮ ವಿಷಯದಲ್ಲಿ ನಾನೊಬ್ಬ ತಪ್ಪಾದರೂ ಲಕ್ಷಾಂತರ ಜನ ತಪ್ಪಾಗಲು ಸಾಧ್ಯವಿಲ್ಲ ಎಂದಿದ್ದಾರೆ.

ಪಕ್ಷ ಭ್ರಷ್ಟನ ಕೈಲಿದೆ!

ಆಮ್​ ಆದ್ಮಿ ಪಕ್ಷದ ಹಿಡಿತವು ಒಬ್ಬ ಪರಮ ಭ್ರಷ್ಟನ ಹಿಡಿತಲ್ಲಿದೆ. ಆ ಪಕ್ಷದಲ್ಲಿ ನೀವು ಸ್ವತಂತ್ರವಾಗಿ ಏನನ್ನು ಮಾಡಲು ಬಿಡುವುದಿಲ್ಲ. ಅದೊಂದು ವ್ಯಕ್ತಿ ಪ್ರಧಾನ ರಾಜಕೀಯ ಪಕ್ಷವೆಂದು ಚಡ್ಡಾ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಹಾಗೂ ಆಮ್​ ಆದ್ಮಿ ಪಕ್ಷದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಆ ಪಕ್ಷದ ವಾತಾವರಣ ಈಗ ವಿಷಪೂರಿತವಾಗಿದೆ, ನಾನು ರಾಜಕಾರಣದಲ್ಲಿ ಕೆರಿಯರ್​ ಬಿಲ್ಡ್​ ಮಾಡಲು ಬಂದಿಲ್ಲ, ನಾನು ಆ ಪಕ್ಷಕ್ಕಾಗಿ ನನ್ನ ಯೌವನದ 15 ವರ್ಷಗಳನ್ನು ಮುಡಿಪಾಗಿಟ್ಟಿದ್ದು, ಪಕ್ಷವನ್ನು ಕಟ್ಟುವಲ್ಲಿ ಎಷ್ಟು ಶ್ರಮ ವಹಿಸಿದ್ದೆನೆಂದು ಅಲ್ಲಿರುವ ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.

ರಾಘವ್​ ಕಳೆದುಕೊಂಡ ಫಾಲೋವರ್ಸ್​ ಎಷ್ಟು?

ರಾಘವ್​ ಚಡ್ಡಾ ಅವರು ಸಂಸತ್ತಿನಲ್ಲಿ ಗಿಗ್​ ಕಾರ್ಮಿಕರ ಹಕ್ಕುಗಳ ಬಗ್ಗೆ, ಫೋನ್​ ರೀಚಾರ್ಜ್​ ಸರಯಾಗಿ ಮೂವತ್ತು ದಿನ ಇರಬೇಕು ಎನ್ನುವ ಬಗ್ಗೆ, ಬ್ಯಾಂಕ್​ ದಂಡಗಳಂತಹ ವಿಚಾರದ ಬಗ್ಗೆ ಮಾತನಾಡಿ ಝೆನ್​ ಜಿಗಳ ಮನಸ್ಸನ್ನು ಗೆದ್ದುಕೊಂಡಿದ್ದರು.
ಶುಕ್ರವಾರ ರಾಘವ್​ ಚಡ್ಡಾ ಅವರು ಬಿಜೆಪಿಗೆ ಸೇರಿದ ಬಗ್ಗೆ ಸುದ್ದಿಯಾಗುತ್ತಲೇ ಶನಿವಾರ ಮಧ್ಯಾಹ್ನದ ವೇಳೆಗೆ ಈ ಸಂಖ್ಯೆ 13.5 ಮಿಲಿಯನ್‌ಗೆ ಇಳಿಕೆಯಾಗಿದೆ. ಈ ಮೊದಲು ಅವರಿಗೆ 14.6 ಮಿಲಿಯನ್ ಫಾಲೋವರ್ಸ್​ ಹೊಂದಿದ್ದರು. ಅಂದರೆ ಸುಮಾರು 10 ಲಕ್ಷ ಜನ ಅನ್​ಫಾಲೋ ಮಾಡಿದ್ದಾರೆ.

ಪಕ್ಷ ಬಿಡಲು ಇದೇ ಕಾರಣ

ಕಳೆದ ಮೂರು ದಿನಗಳಿಂದ ದೇಶದಾದ್ಯಂತ ನಾನು ಪಕ್ಷ ಬಿಟ್ಟಿರುವುದೇ ಚರ್ಚೆಯಾಗುತ್ತಿರುವ ಕಾರಣ ಈ ವಿಡಿಯೋವನ್ನು ನಾನು ಹಂಚಿಕೊಳ್ಳುತ್ತಿದ್ದೆನೆ. ಆಮ್​ ಅದ್ಮಿ ಪಕ್ಷ ಈಗ ಮೊದಲಿನಂತಿಲ್ಲ, ಸರಿಯಾದ ವ್ಯಕ್ತಿ ತಪ್ಪಾದ ಪಕ್ಷದಲ್ಲಿದಿರಿ ಎಂದು ನನಗೆ ಹಲವಾರು ಜನ ಹೇಳುತ್ತಿದ್ದರು, ಅದ ನನಗೆ ಈಗ ಅರಿವಾಗಿದೆ.
ಆಮ್​ ಆದ್ಮಿ ಪಕ್ಷ ಕಟ್ಟುವಾಗ ಕೇಜ್ರಿವಾಲ್​ ಜೊತೆ ಇದ್ದ ಕೆಲವರಲ್ಲಿ ನಾನು ಒಬ್ಬ. ನಾನು ಈ ಪಕ್ಷದ ಸಂಘಟನೆಗಾಗಿ 15 ವರ್ಷ ನಿಡಿದ್ದೆನೆ. ನಾನು ನನ್ನ ಯೌವನದ 15 ವರ್ಷಗಳಲ್ಲಿ ಈ ಪಕ್ಷಕ್ಕಾಗಿ ಎಷ್ಟು ಶ್ರಮ, ಬೆವರು, ರಕ್ತ ಸುರಿಸಿದ್ದೆನೆಂದು ಪಕ್ಷದ ಹಿರಿಯರಿಗೆ ತಿಳಿದಿದೆ ಎಂದಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net