ಕುಕ್ಕರ್​ ಬ್ಲಾಸ್ಟ್​ ಪ್ರಕರಣ: ಆರೋಪಿ ಶಾರೀಕ್​ಗೆ 10 ವರ್ಷ ಕಠಿಣ ಶಿಕ್ಷೆ; NIA ನ್ಯಾಯಾಲಯದಿಂದ ತೀರ್ಪು ಪ್ರಕಟ..Cooker Blast

ಆರೋಪಿ ಶಾರೀಕ್
ಆರೋಪಿ ಶಾರೀಕ್
Published on

ಪ್ರಮುಖ ಮುಖ್ಯಾಂಶಗಳು

  • ಕುಕ್ಕರ್​ ಬಾಂಬ್​ ಬ್ಲಾಸ್ಟ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರೀಕ್​ಗೆ 10 ವರ್ಷಗಳ ಕಠಿಣ ಶಿಕ್ಷೆ
  • 2022 ರಲ್ಲಿ ಮಂಗಳೂರಿನ ಆಟೋ ರಿಕ್ಷಾದಲ್ಲಿ ಸ್ಪೋಟಗೊಂಡಿದ್ದ ಬಾಂಬ್​
  • ಬೆಂಗಳೂರಿನ ಎನ್​ಐಎ ವಿಶೇಷ ನ್ಯಾಯಾಲಯದಿಂದ ತೀರ್ಪು ಪ್ರಕಟ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಾರೀಕ್​ ಪಾತ್ರ ಸಕ್ರೀಯವಾಗಿ ಕಂಡುಬಂದಿದ್ದು, ದೇಶದ ಭದ್ರತೆಗೆ ಧಕ್ಕೆ ತರುವ ಸ್ಪಷ್ಟ ಉದ್ದೇಶವನ್ನು ಇವರು ಹೊಂದಿದ್ದರು ಎಂದು ಮನಗಂಡ ನ್ಯಾಯಾಲಯ ಹತ್ತು ವರ್ಷಗಳ ಕಠಿಣ ಕಾರಾವಾಸ ಹಾಗೂ 94,000 ಸಾವಿರ ರೂಪಾಯಿ ದಂಡವನ್ನು ವಿಧಿಸಿದೆ. ಶಾರೀಕ್​ಗೆ ಈ ಕೃತ್ಯದಲ್ಲಿ ಸಹಕರಿಸಿದ ಇತರ 16 ಜನರನ್ನು ದೋಷಿಗಳೆಂದು ಹೇಳಿದೆ.

ತಪ್ಪೊಪ್ಪಿಕೊಂಡಿದ್ದ ಶಾರೀಕ್​!

ಈ ಕುಕ್ಕರ್​ ಬಾಂಬ್​ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಆರೋಪಿ ಶಾರೀಕ್​ ಈ ಕೃತ್ಯದಲ್ಲಿ ತನ್ನ ಪಾತ್ರವಿರುವುದನ್ನು ಒಪ್ಪಿಕೊಂಡಿದ್ದನು. ಈ ಪ್ರಕರಣವನ್ನು ಎನ್​ಐಎ ಅಧಿಕಾರಿಗಳು ಕೈಗೆತ್ತುಕೊಂಡ ಪರಿಣಾಮ, ಅವರು ಕಲೆಹಾಕಿದ ಸಾಕ್ಷಿಗಳನ್ನು ನೋಡಿದ ಶಾರೀಕ್​ ತನ್ನ ತಪ್ಪನ್ನು ಒಪ್ಪಿಕೊಂಡಿದ್ದನು. ಹೀಗಾಗಿ ಈ ಪ್ರಕರಣವು ಆದಷ್ಟು ಬೇಗ ಕೊನೆಗಾಣಲು ಸಾಧ್ಯವಾಯಿತು.

ಶಿವಮೊಗ್ಗ ಜೈಲಿಗೆ ವರ್ಗಾಯಿಸಿ

ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಶಾರೀಕ್​, ನಾನು ಜೈಲಿನಲ್ಲಿದ್ದು, ಸುಮಾರು 3 ವರ್ಷಗಳಾಗಿದೆ. ಸರಿಯಾಗಿ ನಿದ್ರೆ ಬರುತ್ತಿಲ್ಲ, ಔಷಧ ತೆಗೆದುಕೊಂಡರು ಏನು ಪ್ರಯೋಜನ ಕಾಣುತ್ತಿಲ್ಲ, ನನ್ನನ್ನು ದಯವಿಟ್ಟು ಶಿವಮೊಗ್ಗ ಜೈಲಿಗೆ ವರ್ಗಾಯಿಸಿ ಎಂದು ಶಾರೀಕ್​ ನ್ಯಾಯಾಧೀಶರನ್ನು ಕೇಳಿಕೊಂಡಿದ್ದಾನೆ.
ಅದಕ್ಕೆ ನ್ಯಾಯಾಧೀಶರು ಎಲ್ಲಾರು ಬೆಂಗಳೂರು ಜೈಲಿಗೆ ವರ್ಗಾವಣೆ ಕೇಳಿದರೆ ನೀನೇನು ಶಿವಮೊಗ್ಗ ಜೈಲಿಗೆ ವರ್ಗಾವಣೆ ಕೇಳುತ್ತಿದ್ದಿಯಾ? ಎಲ್ಲಾ ಸೌಲಭ್ಯ ಬೇಕು ಎಂದರೆ ಹೇಗೆ? ಎಂದು ನ್ಯಾಯಾಧೀಶರು ಕೇಳಿದ್ದಾರೆ.

ಪ್ರಕರಣದ ಹಿನ್ನಲೆ

ನವೆಂಬರ್​ 19, 2022 ರಂದು ಮಂಗಳೂರಿನ ಕಂಕವಾಡಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಆಟೋ ರಿಕ್ಷಾ ಮೂಲಕ ಕುಕ್ಕರ್​ನಲ್ಲಿ ಬಾಂಬ್​ನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಂಬ್​ ಸ್ಟೋಟಗೊಂಡು ಶಾರೀಕ್​ ಮತ್ತು ಆಟೋ ಡ್ರೈವರ್​ ಗಾಯಗೊಂಡಿದ್ದರು.
ನಂತರ ಈ ಪ್ರಕರಣವನ್ನು ಎನ್​ಐಎ ತಂಡ ಕೈಗೆತ್ತುಕೊಂಡ ಹಿನ್ನೆಲೆ, ಈ ದಾಳಿ ನಡೆಸಲು ಈತ ISIS ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದ, ಶಿವಮೊಗ್ಗದಲ್ಲಿ ಟ್ರಯಲ್​ ಬ್ಲಾಸ್ಟ್​ ಸಹ ನಡೆಸಿದ್ದ ಎನ್ನುವುದು ಬೆಳಕಿಗೆ ಬಂದಿತು. ಇವನು ನಕಲಿ ದಾಖಲೆಗಳನ್ನು ನೀಡಿ ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಎಂದು ಎನ್​ಐಎ ಅಧಿಕಾರಿಗಳು ಬಹಿರಂಗ ಪಡಿಸಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net