ಪಾಕಿಸ್ತಾನದಲ್ಲಿ 'ಅಪರಿಚಿತ' ರ ಆರ್ಭಟ: ಬಂದೂಕುದಾರಿಗಳ ಗುಂಡಿಗೆ ಲಷ್ಕರ್​ ಕಮಾಂಡರ್​ ಅಫ್ರಿದಿ ಬಲಿ! Sheikh Yusuf Afridi

ಲಷ್ಕರ್-ಎ-ತೊಯ್ಬಾ ಕಮಾಂಡರ್ ಶೇಖ್ ಯುಸೂಫ್ ಅಫ್ರಿದಿ ಸಾವು
ಲಷ್ಕರ್-ಎ-ತೊಯ್ಬಾ ಕಮಾಂಡರ್ ಶೇಖ್ ಯುಸೂಫ್ ಅಫ್ರಿದಿ ಸಾವು
Published on

ಪ್ರಮುಖ ಮುಖ್ಯಾಂಶಗಳು

  • ಲಷ್ಕರ್-ಎ-ತೊಯ್ಬಾ ಕಮಾಂಡರ್ ಶೇಖ್ ಯುಸೂಫ್ ಅಫ್ರಿದಿ ಸಾವು
  • ಅಪರಿಚಿತ ಬಂದೂಕುದಾರಿಗಳ ಗುಂಡಿಗೆ ಬಲಿಯಾದ ಉಗ್ರ
  • ಪಾಕಿಸ್ತಾನದಲ್ಲಿ 2026 ಒಂದೇ ವರ್ಷ ಸುಮಾರು 30 ಭಯೋತ್ಪಾದಕರು ಮಟಾಷ್​!
ಇಸ್ಲಾಮಾಬಾದ್​: ಪಾಕಿಸ್ತಾನದ ಕುಖ್ಯಾತ ಭಯೋತ್ಪಾದಕ ಸಂಘಟನೆ ಲಷ್ಕರ್​-ಎ-ತೊಯ್ಬಾದ ಕಮಾಂಡರ್​ ಆಗಿದ್ದ ಶೇಕ್​ ಯೂಸುಫ್​ ಅಫ್ರಿದಿ (Sheikh Yusuf Afridi) ಯನ್ನು ಇಂದು (ಏ.27) ಪಾಕಿಸ್ತಾನದ ಖೈಬರ್​ ಪ್ರಾಂತ್ಯದ ಪಖತುಂಖ್ವಾ ಎಂಬಲ್ಲಿ ಅಪರಿಚಿತ ಬಂದೂಕುಧಾರಿ (Unknown Gunmen) ಗಳು ಗುಂಡಿಕ್ಕಿ ಕೊಂದಿರುವ ಬಗ್ಗೆ ವರದಿಯಾಗಿದೆ.
ಮೃತ ಉಗ್ರ ಶೇಖ್​ ಯೂಸುಫ್ ಅಫ್ರಿದಿ, ಹಾಫಿಜ್​ ಸಯ್ಯದ್​ನ ಆಪ್ತನಾಗಿದ್ದು, ಆಗಂತುಕರು ದಿಢೀರನೇ ದಾಳಿ ಮಾಡಿದ ಪರಿಣಾಮ ಯುಸೂಫ್ ಅಫ್ರಿದಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆಂದು ಪಾಕಿಸ್ತಾನದ ಮಾಧ್ಯಮ ದೃಢ ಪಡಿಸಿದೆ.

ಪಾಕಿಸ್ತಾನದಲ್ಲಿ ನಿಲ್ಲದ ಉಗ್ರರ ಬೇಟೆ!

ಪಾಕಿಸ್ತಾನದಲ್ಲಿ ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನದಲ್ಲಿ ಕುಳಿತು ಕೊಂಡು ಭಾರತದ ವಿರುದ್ಧ ಸಂಚನ್ನು ರೂಪಿಸುತ್ತಿದ್ದ ಭಯೋತ್ಪಾದಕರ ಬೇಟೆ ತೀವ್ರಗತಿಯಲ್ಲಿ ನಡೆಯುತ್ತಿದೆ.
ಕಳೆದ ತಿಂಗಳು, ಲಷ್ಕರ್​-ಎ-ತೊಯ್ಬಾ ಸಂಘಟನೆಯ ಸಹ ಸಂಸ್ಥಾಪಕನಾದ ಅಮೀರ್​ ಹಮ್ಜಾನನ್ನು ಲಾಹೋರಿನ ನಡು ರಸ್ತೆಯಲ್ಲಿ ಅಪರಿಚಿತ ಬಂದೂಕುದಾರಿಗಳು ಗುಂಡಿನ ದಾಳಿ ನಡೆಸಿದ್ದು, ಆತ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟವನ್ನು ಮುಂದುವರೆಸಿದ್ದಾನೆ.
ಈ ದಾಳಿಯೂ ಮೊದಲು ಜೈಶ್-ಎ-ಮೊಹಮ್ಮದ್ ಸಂಘಟನೆಯ ಮೌಲಾನಾ ಮಸೂದ್​ ಅಜರ್​ನ ಸಹೋದರ, ಮೊಹಮ್ಮದ್​ ತಾಹೀರ್​ ಅನ್ವರ್​ ಸಹ ನಿಗೂಢವಾಗಿ ಸಾವನ್ನಪ್ಪಿದ್ದನು. ಕಳೆದ ವರ್ಷ ಮಾರ್ಚ್​ನಲ್ಲಿ, 26/11 ಗೆ ಕಾರಣನಾದ ಅಬು ಕತಲ್​ ಅಲಿಯಾಸ್​ ಕತಲ್​ ಸಿಂಧಿಯನ್ನು ಅಪರಿಚಿತರು ಗುಂಡಿಕ್ಕಿ ಕೊಂದಿದ್ದರು.

ಒಂದೇ ವರ್ಷದಲ್ಲಿ 30 ಉಗ್ರರು ಮಟಾಷ್!

2026 ಒಂದೇ ವರ್ಷ ಪಾಕಿಸ್ತಾನದಲ್ಲಿ ಸುಮಾರು 30 ಭಯೋತ್ಪಾದಕರನ್ನು ಅಪರಿಚಿತ ಬಂದೂಕುದಾರಿಗಳು ಕೊಂದಿರುವುದು ವರದಿಯಾಗಿದೆ. ಸಾವನ್ನಪ್ಪಿರುವ ಬಹುತೇಕರು ಲಷ್ಕರ್​-ಎ-ತೊಯ್ಬಾ, ಜೈಶ್​-ಎ-ಮೊಹಮ್ಮದ್​ ಮತ್ತು ಹಿಜ್ಬುಲ್​ ಮುಜಾಹಿದ್ದಿನ್​ ಸಂಘಟನೆಗೆ ಸೇರಿದವರಾಗಿದ್ದಾರೆ. ಈ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ಅನುಮಾನ ವ್ಯಕ್ತ ಪಡಿಸುತ್ತಿವೆ. ಆದರೆ ಭಾರತ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಗಳನ್ನು ಇಲ್ಲಿವರೆಗೆ ನೀಡಿಲ್ಲ, (ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net