ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡಿ, ಅತ್ಯಾ*ಚಾರ ತಡೆಯಿರಿ: ಹೈಕೋರ್ಟ್ ತೀರ್ಪಿಗೆ ಆಕ್ಷೇಪ, ಶರಿಯಾ ಕಾನೂನಿಗೆ ಬೇಡಿಕೆ; ಮೌಲಾನಾ ಸಾಜಿದ್ ರಶೀದಿ ಹೇಳಿಕೆಗೆ ಭಾರಿ ವಿರೋಧ! Maulana Sajid Rashidi on R*ape

ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡಿ, ಅತ್ಯಾಚಾರ ತಡೆಯಿರಿ: ಮೌಲಾನಾ ಸಾಜಿದ್ ರಶೀದಿ
ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡಿ, ಅತ್ಯಾಚಾರ ತಡೆಯಿರಿ: ಮೌಲಾನಾ ಸಾಜಿದ್ ರಶೀದಿ
Published on

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲಿ ಅತ್ಯಾಚಾರ ತಡೆಯಲು ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡಿ
  • ದೇಶದಲ್ಲಿ ಶರಿಯಾ ಕಾನೂನು ಜಾರಿಗೊಳಿಸಿ ಎಂದ ಮುಸ್ಲಿಂ ಧರ್ಮಗುರು ಮೌಲಾನಾ ಸಾಜಿದ್ ರಶೀದಿ
  • ಹೆಣ್ಣುಮಕ್ಕಳಿಗೆ ಬೇಗ ಮದುವೆ ಮಾಡಿ, ಅತ್ಯಾಚಾರ ತಡೆಯಿರಿ: ಮೌಲಾನಾ ಸಾಜಿದ್ ರಶೀದಿ
ನವದೆಹಲಿ: ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಗಂಭೀರ ಸಮಸ್ಯೆಗೆ ಪರಿಹಾರ ಹುಡುಕುವ ಬದಲು, ಮುಸ್ಲಿಂ ಧರ್ಮಗುರು ಮೌಲಾನಾ ಮೊಹಮ್ಮದ್ ಸಾಜಿದ್ ರಶೀದಿ (Maulana Sajid Rashidi on R*ape) ನೀಡಿರುವ ಹೇಳಿಕೆಯೊಂದು ಈಗ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ.
ಹೆಣ್ಣುಮಕ್ಕಳ ಮದುವೆ ತಡವಾಗುತ್ತಿರುವುದೇ ದೇಶದಲ್ಲಿ ಅತ್ಯಾಚಾರಗಳು ಹೆಚ್ಚಾಗಲು ಪ್ರಮುಖ ಕಾರಣ ಎಂದು ಹೇಳುವ ಮೂಲಕ ಹೊಸ ವಿವಾದವೊಂದಕ್ಕೆ ಮೌನಾಲಾ ಚಾಲನೆ ನೀಡಿದ್ದಾರೆ.

ಬೇಗ ಮದುವೆ ಮಾಡಿ, ಅತ್ಯಾಚಾರ ತಡೆಯಿರಿ!

ತಮ್ಮ ವಿಲಕ್ಷಣ ವಾದವನ್ನು ಸಮರ್ಥಿಸಿಕೊಂಡ ಮೌಲಾನಾ ರಶೀದಿ, ಪೋಷಕರು ತಮ್ಮ ಹೆಣ್ಣುಮಕ್ಕಳ ಸುರಕ್ಷತೆಯನ್ನು ಬಯಸುವುದಾದರೆ ಅವರಿಗೆ ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ವಿವಾಹಗಳು ವಿಳಂಬವಾಗುತ್ತಿರು ಕಾರಣ ಇಂತಹ ಲೈಂಗಿಕ ಅಪರಾಧಗಳು ನಡೆಯುತ್ತಿವೆ. ನಿಮ್ಮ ಹೆಣ್ಣುಮಕ್ಕಳು ಸುರಕ್ಷಿತವಾಗಿರಬೇಕಾದರೆ ಅವರಿಗೆ ಬೇಗನೆ ಮದುವೆ ಮಾಡಿ ಮುಗಿಸಿ ಎಂದು ಪೋಷಕರಿಗೆ ಕರೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಭಾರತದಲ್ಲಿ ಇಸ್ಲಾಮಿಕ್ ಶರಿಯಾ ಕಾನೂನನ್ನು ಜಾರಿಗೆ ತರಬೇಕು, ಆಗ ಮಾತ್ರ ಅತ್ಯಾಚಾರದಂತಹ ಅಪರಾಧಗಳನ್ನು ತಡೆಯಲು ಸಾಧ್ಯ ಎಂದು ಪ್ರತಿಪಾದಿಸಿದ್ದಾರೆ.

ಹೈಕೋರ್ಟ್ ತೀರ್ಪಿಗೆ ಆಕ್ಷೇಪ!

ಇತ್ತೀಚೆಗಷ್ಟೇ ಅಲಹಾಬಾದ್ ಹೈಕೋರ್ಟ್, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ವಿವಾಹಗಳು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಅಪರಾಧ ಎಂದು ಹೇಳಿತ್ತು. ಆದರೆ, ಕೋರ್ಟ್‌ನ ಈ ನಿಲುವನ್ನು ತೀವ್ರವಾಗಿ ಟೀಕಿಸಿರುವ ರಶೀದಿ, ಇದು ತಪ್ಪು ಮತ್ತು ಅಸಂವಿಧಾನಿಕ ಎಂದಿದ್ದಾರೆ.
ಮುಸ್ಲಿಮರಿಗೆ ತಮ್ಮ ಧಾರ್ಮಿಕ ಪದ್ಧತಿಯ ಪ್ರಕಾರ ನಿಕಾಹ್ ಮತ್ತು ತಲಾಖ್ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಭಾರತದ ಸಂವಿಧಾನ ಮತ್ತು ಶರಿಯಾ ಕಾನೂನು ಎರಡೂ ನೀಡಿವೆ. ಹೀಗಿರುವಾಗ ಕೋರ್ಟ್ ಮಧ್ಯಪ್ರವೇಶಿಸುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ನಮ್ಮದು ದುರ್ಬಲ ಕಾನೂನು ವ್ಯವಸ್ಥೆ

ಭಾರತದ ಪ್ರಸ್ತುತ ಕಾನೂನು ವ್ಯವಸ್ಥೆಯು ಅಪರಾಧಗಳನ್ನು ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಮೌಲಾನಾ ಗಂಭೀರ ಆರೋಪ ಮಾಡಿದ್ದಾರೆ. ಇವತ್ತಿನ ದಿನಗಳಲ್ಲಿ 15 ವರ್ಷದ ಹುಡುಗಿಯರು ಸಂಬಂಧಗಳಲ್ಲಿದ್ದಾರೆ, ರಾತ್ರಿ ಇಡೀ ಮನೆಗಳಿಂದ ಹೊರಗೆ ಕಳೆಯುತ್ತಿದ್ದಾರೆ.
ಆದರೆ ಅವರು ಅಪ್ರಾಪ್ತರಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಕಾನೂನು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಬಿಡುತ್ತಿಲ್ಲ. ಇಂತಹ ದುರ್ಬಲ ಕಾನೂನು ವ್ಯವಸ್ಥೆ ನಮಗೇಕೆ ಬೇಕು? ಇದರ ಬದಲಿಗೆ ಶರಿಯಾ ಆಧಾರಿತ ಕಠಿಣ ಕಾನೂನು ತನ್ನಿ ಎಂದು ಅವರು ಒತ್ತಾಯಿಸಿದ್ದಾರೆ.

ನಾನು ಸಂವಿಧಾನದ ವಿರೋಧಿಯಲ್ಲ!

ತಮ್ಮ ಈ ಹೇಳಿಕೆಗಳಿಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅಲರ್ಟ್ ಆಗಿರುವ ರಶೀದಿ, ತಾವು ಸಂವಿಧಾನದ ವಿರುದ್ಧವಾಗಿ ಏನನ್ನೂ ಹೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ತಮಗೆ ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯದ ಚೌಕಟ್ಟಿನಲ್ಲೇ ತಾವು ಇಸ್ಲಾಮಿಕ್ ಶರಿಯಾ ಕಾನೂನಿನ ಬೇಡಿಕೆಯನ್ನು ಇಟ್ಟಿರುವುದಾಗಿ ಸಮರ್ಥಿಸಿಕೊಂಡಿದ್ದಾರೆ.
ಆದಾಗ್ಯೂ, ಹೆಣ್ಣುಮಕ್ಕಳ ವಯಸ್ಸು ಮತ್ತು ಅತ್ಯಾಚಾರವನ್ನು ಲಿಂಕ್ ಮಾಡಿ ಮೌಲಾನಾ ಆಡಿರುವ ಮಾತುಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ನೆಟ್ಟಿಗರು ಇವರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net