ನಾನೇ ಸಾರ್ವಭೌಮ, ನೀವೆಲ್ಲಾ ನ್ಯಾಯಾಂಗ ಸೇವಕರು: ಸುಪ್ರೀಂ ಕೋರ್ಟ್‌ನಲ್ಲಿ ಹೈಡ್ರಾಮಾ; ಜಡ್ಜ್‌ಗಳಿಗೇ ಆದೇಶ ನೀಡಿ, ಪೇಪರ್ ಎಸೆದ ವಕೀಲ! Courtroom Drama in Supreme Court

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳಿಗೇ ಆದೇಶ ನೀಡಿದ ವಕೀಲ!
ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳಿಗೇ ಆದೇಶ ನೀಡಿದ ವಕೀಲ!
Published on

ಪ್ರಮುಖ ಮುಖ್ಯಾಂಶಗಳು

  • ಸುಪ್ರೀಂ ಕೋರ್ಟ್‌ನಲ್ಲಿ ಹೈಡ್ರಾಮಾ!
  • ವಾದ ಮಂಡಿಸುವಾಗ ನ್ಯಾಯಮೂರ್ತಿಗಳನ್ನೇ ನಿಂದಿಸಿ ಪೇಪರ್ ಎಸೆದ ಅರ್ಜಿದಾರ ಪ್ರಬಲ್ ಪ್ರತಾಪ್
  • ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳಿಗೇ ಆದೇಶ ನೀಡಿದ ವಕೀಲ!
  • ಪೊಲೀಸರಿಂದ ಬಂಧನ; ಆದರೂ ದೊಡ್ಡ ಗುಣ ತೋರಿದ ಜಡ್ಜ್‌ಗಳು!
ನವದೆಹಲಿ: ಶುಕ್ರವಾರ (ಜು.10) ಭಾರತದ ಸವೋಚ್ಚ ನ್ಯಾಯಾಲಯದಲ್ಲಿ ಹೈಡ್ರಾಮಾವೊಂದಕ್ಕೆ (Courtroom Drama in Supreme Court) ಸಾಕ್ಷಿಯಾಗಿದೆ. ವಾದ ಮಂಡಿಸುತ್ತಿದ್ದಾಗ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ, ಕಾಗದವನ್ನು ಎಸೆದಿರುವ ಘಟನೆ ಈಗ ಎಲ್ಲಡೆ ಸಂಚಲನ ಸೃಷ್ಟಿಸಿದೆ.
ಈ ಘಟನೆಯು ಇಂದು ಬೆಳಿಗ್ಗೆ 11.30 ರ ಸುಮಾರಿಗೆ ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಮತ್ತು ಅಲೋಕ್ ಆರಾಧೆ ಅವರ ನ್ಯಾಯಪೀಠದಲ್ಲಿ ಸಂಭವಿಸಿದೆ.

ನಾನೇ ಆದೇಶ ನೀಡುತ್ತೇನೆ!

ಪ್ರಬಲ್ ಪ್ರತಾಪ್ ಎಂದು ಗುರುತಿಸಲಾದ ಅರ್ಜಿದಾರರು ಪೀಠದ ಮುಂದೆ ಹಾಜರಾಗಿ ತಮ್ಮನ್ನು ತಾವು ಸಾರ್ವಭೌಮ ಎಂದು ಪರಿಚಯಿಸಿಕೊಂಡರು. ನ್ಯಾಯಾಧೀಶರನ್ನು ನ್ಯಾಯಾಂಗ ಸೇವಕರು ಎಂದು ಸಂಬೋಧಿಸುತ್ತಾ, ಶ್ರೀ ನ್ಯಾಯಾಂಗ ಸೇವಕರೇ, ಸೈಬರ್ ಅಪರಾಧದಲ್ಲಿ ಸಿಂಡಿಕೇಟ್ ನಡೆಸುತ್ತಿದ್ದಕ್ಕಾಗಿ ಲಕ್ನೋದ ಎಎಸ್ಪಿ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಲು ನಾನು ನಿಮಗೆ ಆದೇಶಿಸುತ್ತೇನೆ ಎಂದು ಹೇಳಿದ್ದಾರೆ.
ಈ ಮಾತನ್ನು ಕೇಳಿಸಿಕೊಳ್ಳುತ್ತಲೇ, ಪೀಠದಲ್ಲಿದ್ದ ನ್ಯಾಯಮೂರ್ತಿಳು, ಏನು ನೀವು ನನಗೆ ಆದೇಶಿಸುತ್ತೀರಾ? ಎಂದು ಗುಡುಗಿದ್ದಾರೆ. ಈ ಮಾತನ್ನು ಕೇಳಿಸಿಕೊಳ್ಳುತ್ತಲೇ ಭಾರತದ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್​ ಅವರಿಗೆ ಅವಾಚ್ಯವಾಗಿ ಸಂಬೋಧಿಸಿದ ಪ್ರದಲ್​ ಪ್ರದೀಪ್​ ತನ್ನ ಕೈಯಲ್ಲಿದ್ದ ಪೇಪರ್​ಗಳನ್ನು ನ್ಯಾಯಮೂರ್ತಿಗಳತ್ತ ಎಸೆದಿದ್ದಾನೆ.
ಕೂಡಲೇ ಈ ವಕೀಲನನ್ನು ಬಂಧಿಸಿದ ಪೊಲೀಸರು ಬೇರೆ ಕೊಠಡಿಗೆ ಕರೆದುಕೊಂಡು ಹೋಗಿದ್ದಾರೆ. ಕೆಲ ಸಮಯದ ಮಟ್ಟಿಗೆ ನ್ಯಾಯ ವಿಚಾರಣೆಯನ್ನು ಮುಂದೂಡಿದ ನ್ಯಾಯಮೂರ್ತಿಗಳು ನಂತರ ಮತ್ತೆ ವಿಚಾರಣೆ ಮುಂದುವರಿಸಿದ್ದಾರೆ.
ಅವನ ಮೇಲೆ ಯಾವುದೇ ಕ್ರಮ ಇಲ್ಲ!
ಆದರೆ ಈ ಪ್ರಕರಣದಲ್ಲಿ ವಕೀಲನ ಮೇಲೆ ಯಾವುದೇ ಕ್ರಮವನ್ನು ಕೈಗೊಳ್ಳದಂತೆ ನ್ಯಾಯಮೂರ್ತಿಗಳು ತಿಳಿಸಿದ್ದಾರೆ. ಅವನು ಈ ಪ್ರಕರಣದಲ್ಲಿ ಸೋಲಲಿದ್ದ, ಹೀಗಾಗಿ ಅವನ ಮಾನಸಿಕ ಸ್ಥಿತಿ ಆತನ ಹಿಡಿತದಲ್ಲಿರಲಿಲ್ಲ. ಹೀಗಾಗಿ ಈ ವರ್ತನೆ ತೋರಿದ್ದಾನೆ. ಆದರೆ ಅವನ ಮೇಲೆ ಯಾವುದೇ ಕಠಿಣ ಕ್ರಮವನ್ನು ಕೈಗೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net