ರಾಜಕೀಯ ಪಕ್ಷವನ್ನ ಉದ್ಯಮ ಮಾಡ್ಕೊಂಡಿದ್ದೀರಾ? ಅಖಿಲೇಶ್ ಯಾದವ್ ಜೊತೆ ಫೋಟೊಗೆ 5 ಸಾವಿರ, ಹ್ಯಾಂಡ್‌ಶೇಕ್‌ಗೆ 10 ಸಾವಿರ; ಓಂ ಪ್ರಕಾಶ್ ರಾಜ್‌ಭರ್ ಗಂಭೀರ ಆರೋಪ! O P Rajbhar on Akhilesh Yadav
ಅಖಿಲೇಶ್ ಯಾದವ್ ವಿರುದ್ಧ ಓಂ ಪ್ರಕಾಶ್ ರಾಜ್‌ಭರ್ ಆರೋಪ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸಮಾಜವಾದಿ ಪಕ್ಷವನ್ನು ಉದ್ಯಮ ಮಾಡಿಕೊಂಡಿದ್ದೀರಾ?
ಅಖಿಲೇಶ್ ಯಾದವ್ ಜೊತೆ ಫೋಟೊಗೆ 5 ಸಾವಿರ, ಹ್ಯಾಂಡ್‌ಶೇಕ್‌ಗೆ 10 ಸಾವಿರ ವಸೂಲಿ
ಅಖಿಲೇಶ್ ಯಾದವ್ ವಿರುದ್ಧ ಓಂ ಪ್ರಕಾಶ್ ರಾಜ್‌ಭರ್ ಆರೋಪ
ಲಖನೌ: ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲು, ಕೈ ಕುಲುಕಲು ಹಾಗೂ ಫೋಟೊ ತೆಗೆಸಿಕೊಳ್ಳಲು ಜನರಿಂದ ಹಣ ಪಡೆಯುತ್ತಾರೆ ಎಂದು ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (SBSP) ದ ಮುಖ್ಯಸ್ಥ ಓಂ ಪ್ರಕಾಶ್ ರಾಜ್‌ಭರ್ (O P Rajbhar on Akhilesh Yadav) ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ವೇದಿಕೆ ಟ್ವಿಟರ್ (ಎಕ್ಸ್) ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಕಾಶ್ ರಾಜ್‌ಭರ್, ಕೆಲ ದಿನಗಳ ಹಿಂದೆ ತನ್ನನ್ನು ಭೇಟಿ ಮಾಡಿದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಈ ಮಾಹಿತಿಯನ್ನು ತನ್ನ ಬಳಿ ಹಂಚಿಕೊಂಡಿದ್ದಾರೆಂದು ಬರೆದುಕೊಂಡಿದ್ದಾರೆ.
ನನ್ನ ಜೊತೆ ಮಾತನಾಡಿದ ನಿಮ್ಮ ಪಕ್ಷ ಕಾರ್ಯಕರ್ತರು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರಬೇಕು, ಆದರೆ ನಮ್ಮನ್ನು ಅಖಿಲೇಶ್ ಯಾದವ್ ಬೆಳೆಸುವುದು ಸುಳ್ಳು. ಅವರಿಗೆ ಸದ್ಯ ಅಧಿಕಾರವೊಂದು ದೊರೆತರೆ ಸಾಕಾಗಿದೆ ಎಂದು ಹೇಳಿದ್ದಾರೆ.
ಹಾಗೆಯೇ ನಿಮ್ಮ ಜೊತೆ ಫೋಟೊ ತೆಗೆಸಿಕೊಳ್ಳಬೇಕೆಂದರೆ 5 ಸಾವಿರ, ಹ್ಯಾಂಡ್ಶೆಕ್ ಮಾಡಲು 8 ರಿಂದ 10 ಸಾವಿರವನ್ನು ನಿಮ್ಮ ಕಾರ್ಯಕರ್ತರಿಂದಲೇ ಪಡೆದುಕೊಳ್ಳುತ್ತಿರಿ ಎಂದು ಅವರು ನನ್ನ ಜೊತೆ ಹೇಳಿದ್ದಾರೆ ಎಂದು ಪ್ರಕಾಶ್ ರಾಜ್‌ಭರ್ ಹೇಳಿದ್ದಾರೆ.
ಇದು ನಿಮಗೆ ಶೋಭೆಯೇ?
ಈ ಮಾತನ್ನು ನನ್ನ ಜೊತೆ ಹಂಚಿಕೊಂಡವರು ನಿಮ್ಮ ಯಾದವ ಸಮುದಾಯದವರೆ ಆಗಿದ್ದಾರೆ. ಸ್ವಂತ ಜಾತಿ ಅವರಿಂದಲೇ ಹಣವನ್ನು ಪೀಕುವ ನೀವು ಉಳಿದ ಹಿಂದುಳಿದ ಜನರೊಂದಿಗೆ ಹೇಗೆ ನಡೆದುಕೊಳ್ಳುವಿರಿ ಎನ್ನುವುದು ಇದರಲ್ಲೇ ಅರ್ಥವಾಗುತ್ತದೆ.
ನಿಮ್ಮ ಆಸ್ತಿ ಈಗ 900 ಪಟ್ಟು ಹೆಚ್ಚಾಗಿದೆ ಎಂದು ನಾನು ಕೇಳಿದ್ದೆನೆ. ಈಗ ನಿಮ್ಮ ಕಾರ್ಯಕರ್ತರೊಂದಿಗೆ ಮಾತನಾಡಿದ ಬಳಿಕ ಇದು ಹೇಗೆ ಸಾಧ್ಯವಾಯಿತೆಂದು ತಿಳಿಯಿತು ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮೊದಲು ನೀವು 20 ಸಾವಿರ ಪಡೆದುಕೊಂಡು ಪಕ್ಷದ ಸದಸ್ಯತ್ವ ಕೊಡುವುದನ್ನು ನಿಲ್ಲಿಸಿ. ರಾಜಕೀಯ ಪಕ್ಷವನ್ನು ಉದ್ಯಮ ಮಾಡಿಕೊಳ್ಳಬೇಡಿ. ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಗಳಾಗಿರುವ ನಿಮಗೆ ಇದು ಶೋಭೆಯಲ್ಲ ಎಂದು ಹೇಳಿದ್ದಾರೆ, (ಏಜನ್ಸೀಸ್).