ಎಣ್ಣೆ ಏಟಿನಲ್ಲಿ ಬಸ್ಸನ್ನೇ ಕದ್ದ ಭೂಪ: 21 ಕಿ.ಮೀ ಓಡಿಸಿ ಟೋಲ್ ಗೇಟ್ಗೆ ಗುದ್ದಿ ಸಿಕ್ಕಿಬಿದ್ದ ಕುಡುಕ; ವಿಡಿಯೋ ವೈರಲ್! Drunk Man Steals Bus
ಕುಡಿದ ಮತ್ತಿನಲ್ಲಿ ಬಸ್ ಕಳ್ಳತನ ಮಾಡಿದ ತೆಲಂಗಾಣದ ವೆಂಕಣ್ಣ!
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮನೆಯಲ್ಲಿ ಜಗಳವಾಡಿ ಕಂಠಪೂರ್ತಿ ಕುಡಿದ ಭೂಪ
ನಿಲ್ದಾಣದಲ್ಲಿದ್ದ ಬಸ್ಸನ್ನೇ ಕದ್ದು 21 ಕಿ.ಮೀ ಓಡಿಸಿ ಟೋಲ್ ಗೇಟ್ಗೆ ಗುದ್ದಿದ್ದಾನೆ!
ಕುಡಿದ ಮತ್ತಿನಲ್ಲಿ ಬಸ್ ಕಳ್ಳತನ ಮಾಡಿದ ತೆಲಂಗಾಣದ ವೆಂಕಣ್ಣ!
ತೆಲಂಗಾಣ: ಕುಡಿದ ಮತ್ತಿನಲ್ಲಿ, ಜಗಳವಾಡುವುದನ್ನೋ, ಕೊಲೆ ಮಾಡುವುದನ್ನೋ ಅಥವಾ ಬಾರ್ ಎದುರಿಗೆ ಮಲಗಿರುವ ಸುದ್ದಿಯನ್ನು ಕೇಳಿರುತ್ತೆವೆ, ನೋಡಿರುತ್ತೆವೆ.
ಆದರೆ ತೆಲಂಗಾಣದ ವ್ಯಕ್ತಿಯೊಬ್ಬ ಎಣ್ಣೆ ಏಟಿನಲ್ಲಿ ಬಸ್ಸನ್ನೇ ಕದ್ದು (Drunk Man Steals Bus), ಸುಮಾರು 21 ಕಿ.ಮೀ ಡ್ರೈವಿಂಗ್ ಮಾಡಿ ನಂತರ ಟೋಲ್ ಗೇಟ್ಗೆ ಗುದ್ದಿರುವ ಘಟನೆ ಈಗ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಘಟನೆಯು ಗುರುವಾರ (ಜು.9) ಜನಗಾಂವ್ ಎಂಬಲ್ಲಿ ನಡೆದಿದೆ. ಪೊಲೀಸ್ ಮಾಹಿತಿ ಪ್ರಕಾರ, ಆರೋಪಿ ಜಿಟ್ಟಬೋಯಿನ ವೆಂಕಣ್ಣ, ಎನ್ನುವವನು ಮನೆಯಲ್ಲಿ ಜಗಳವಾಡಿಕೊಂಡು ಆಚೆ ಬಂದಿದ್ದಾನೆ. ನಂತರ ಅದೇ ಕೋಪದಲ್ಲಿ ಕಂಠಪೂರ್ತಿ ಕುಡಿದಿದ್ದಾನೆ.
ಆಮೇಲೆ, ಜನಗಾಂವ್ ನಿಲ್ದಾಣದಲ್ಲಿ ನಿಂತಿದ್ದ ಬಸ್ನ್ನು ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಕೂಡಲೇ ಬಸ್ ಚಾಲಕ, ತನ್ನ ಬಸ್ ಕಳ್ಳತನವಾಗಿದೆ ಎಂದು ಪೊಲೀಸರಲ್ಲಿ ದೂರನ್ನು ಸಲ್ಲಿಸಿದ್ದಾನೆ.
ಕುಡಿದ ಮತ್ತಿನಲ್ಲಿ ಜಿಟ್ಟಬೋಯಿನ ವೆಂಕಣ್ಣ ಸುಮಾರು 21 ಕೀ.ಮಿ ಬಸ್ಅನ್ನು ಡ್ರೈವ್ ಮಾಡಿದ್ದಾನೆ. ನಂತರ ಸೂರ್ಯಾಪೇಟ್ನಲ್ಲಿರುವ ಟೋಲ್ ಗೇಟ್ವೊಂದಕ್ಕೆ ಡಿಕ್ಕಿ ಮಾಡಿದ್ದಾನೆ. ಅಲ್ಲಿಂದ ಸಹ ಪೊಲೀಸರಿಗೆ ದೂರು ಬಂದಿದೆ. ನಂತರ ಸ್ಥಳಕ್ಕೆ ಆಗಮಿಸಿದ ಖಾಕಿ ಪಡೆ ವೆಂಕಣ್ಣನನ್ನು ವಶಕ್ಕೆ ಪಡೆದಿದ್ದಾರೆ.
ಸದ್ಯ ವೆಂಕಣ್ಣನ ಮೇಲೆ ಕುಡಿದು ಗಾಡಿ ಚಲಾಯಿಸಿದ, ವಾಹನ ಕಳ್ಳತನ ಹಾಗೂ ಅಫಘಾತದ ಪ್ರಕರಣಗಳಲ್ಲಿ ಬಂಧಿಸಲಾಗಿದ್ದು, ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ, (ಏಜನ್ಸೀಸ್).