ಪಿಂಕ್ ರಾಪಿಡೋ ಬುಕ್ ಮಾಡಿದ ಯುವತಿಗೆ ಬಂದಿದ್ದು ಪುರುಷ ರೈಡರ್: ಪ್ರಶ್ನಿಸಿದಕ್ಕೆ ನಾನು ಗೇ ಎಂದ ಚಾಲಕ..! Rapido Pink rider

ಇನ್‌ಸ್ಟಾಗ್ರಾಂ ಬಳಕೆದಾರರಾದ ಶಾಲಿನಿ ಚತುರ್ವೇದಿ ಎಂಬುವವರು ತಮ್ಮ ಕಹಿ ಅನುಭವದ ಕುರಿತು ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮಹಿಳೆಯರಿಗಾಗಿಯೇ ಮೀಸಲಾಗಿರುವ ಬೈಕ್​ ಟ್ಯಾಕ್ಸಿ ಸೇವೆಯಲ್ಲಿನ ಸುರಕ್ಷತೆಯ ಬಗ್ಗೆ ಶಾಲಿನಿ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.
Rapido Pink rider
ಸಾಂದರ್ಭಿಕ ಚಿತ್ರ
Published on: 

ನವದೆಹಲಿ: ಮಹಿಳೆಯರ ಸುರಕ್ಷತೆಗಾಗಿ ವಿಶೇಷವಾಗಿ ಪರಿಚಯಿಸಲಾಗಿರುವ ಬೈಕ್ ಟ್ಯಾಕ್ಸಿ ಸೇವೆಯಲ್ಲಿ ಗಂಭೀರ ಭದ್ರತಾ ಲೋಪವೊಂದು ಬೆಳಕಿಗೆ ಬಂದಿದೆ. ರಾಪಿಡೋ ಪಿಂಕ್ ( Rapido Pink rider ) ರೈಡ್ ಬುಕ್ ಮಾಡಿದ ಮಹಿಳೆಗೆ ಪುರುಷ ರೈಡರ್ ಓರ್ವ ಕರೆ ಮಾಡಿದ್ದು, 'ನಾನು ಗೇ ( Gay )' ಎಂದು ವಿಚಿತ್ರವಾಗಿ ಉತ್ತರಿಸಿ ಆತಂಕ ಸೃಷ್ಟಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇನ್‌ಸ್ಟಾಗ್ರಾಂ ಬಳಕೆದಾರರಾದ ಶಾಲಿನಿ ಚತುರ್ವೇದಿ ಎಂಬುವವರು ತಮ್ಮ ಕಹಿ ಅನುಭವದ ಕುರಿತು ತಮ್ಮ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಮಹಿಳೆಯರಿಗಾಗಿಯೇ ಮೀಸಲಾಗಿರುವ ಬೈಕ್​ ಟ್ಯಾಕ್ಸಿ ಸೇವೆಯಲ್ಲಿನ ಸುರಕ್ಷತೆಯ ಬಗ್ಗೆ ಶಾಲಿನಿ ಅವರು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

Also Read
ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ ಬಿಗ್ ಬಾಸ್ ಜಾಹ್ನವಿ: JDS ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ! Bigg Boss Jahnavi
Rapido Pink rider

ಮಹಿಳಾ ರೈಡರ್ ಇರುತ್ತಾರೆ ಎಂದು ನಂಬಿ ರಾಪಿಡೋ ಪಿಂಕ್ ಸೇವೆಯನ್ನು ಶಾಲಿನಿ ಬುಕ್ ಮಾಡಿದ್ದರು. ಆದರೆ, ಅವರಿಗೆ ಅಪರಿಚಿತ ಪುರುಷನೊಬ್ಬನಿಂದ ಫೋನ್ ಕಾಲ್ ಬಂದಿದ್ದು, ನೀವು ಪಿಕ್‌ಅಪ್ ಸ್ಥಳಕ್ಕೆ ತಲುಪಿದ್ದೀರಾ ಎಂದು ಆತ ವಿಚಾರಿಸಿದ್ದಾನೆ. ಹುಡುಗನ ಧ್ವನಿ ಕೇಳಿ ಬೆರಗಾದ ಶಾಲಿನಿ, ನಾನು ಬುಕ್​ ಮಾಡಿದ್ದು ಪಿಂಕ್ ರೈಡ್ ಮತ್ತು ಮಹಿಳಾ ರೈಡರ್ ಬರಬೇಕಿತ್ತು ಎಂದಿದ್ದಾರೆ.

ಶಾಲಿನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪುರುಷ ರೈಡರ್ ಅತ್ಯಂತ ನಿರ್ಲಕ್ಷ್ಯದಿಂದ "ಮೇಡಂ, ನಾನು ಗೇ" ಎಂದು ಉತ್ತರಿಸಿದ್ದಾನೆ. ಇದರಿಂದ ಶಾಲಿನಿ ಅವರು ಇನ್ನಷ್ಟು ಗಾಬರಿಯಾಗಿದ್ದಾರೆ. ಅಲ್ಲದೆ, ಆ ರೈಡರ್​ ಪಿಂಕ್​ ರೈಡ್​ ಆ್ಯಪ್‌ನಲ್ಲಿ ತನ್ನ ಸ್ವಂತ ಫೋಟೋದ ಬದಲು ಮಹಿಳಾ ಸಂಬಂಧಿಕರ ಫೋಟೋವನ್ನು ಬಳಸಿಕೊಂಡಿರುವುದು ಬಯಲಾಗಿದೆ.

ಶಾಲಿ ಅವರು ರೈಡ್ ರದ್ದುಗೊಳಿಸಲು ಮುಂದಾದಾಗ ಅವರಿಗೆ 15 ರೂಪಾಯಿ ದಂಡದ ವಿಧಿಸಲಾಗಿದೆ. ಇಲ್ಲಿ ಶಾಲಿನಿ ಅವರಿಗೆ ಕಾಡುತ್ತಿರುವ ಆತಂಕ ಏನೆಂದರೆ, ಈಗಾಗಲೇ ಆ ರಾಪಿಡೋ ಪಿಂಕ್​ ಡ್ರೈವರ್​ ಆಕೆಯ ಮುಖವನ್ನು ನೋಡಿದ್ದಾನೆ. ಅಲ್ಲದೆ, ಆಕೆ ವಾಸವಿರುವ ಸ್ಥಳದ ಮಾಹಿತಿಯೂ ಆತನಿಗೆ ಗೊತ್ತಿದೆ. ಈ ವಿಚಾರ ಶಾಲಿಗೆ ಭಯ ಹುಟ್ಟಿಸಿದ್ದು, ಈ ದೇಶದಲ್ಲಿ ಮಹಿಳೆಯರ ಸುರಕ್ಷತೆ ಎನ್ನುವುದು ಕೇವಲ ಲಾಭದಾಯಕ ವ್ಯವಹಾರ ಹಾಗೂ ಹಾಸ್ಯದಂತಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

Also Read
CNG ಗ್ಯಾಸ್ ತುಂಬಿಸುವಾಗಲೇ ಕಾರು ಸ್ಫೋಟ: ಮೈ ನಡುಗಿಸುವ ವಿಡಿಯೋ ವೈರಲ್​; ಭೀಕರ ದೃಶ್ಯ ಕಂಡು ನೆಟ್ಟಿಗರು ಶಾಕ್​! CNG Car Blast
Rapido Pink rider

ಇನ್ನು ಈ ಘಟನೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ರಾಪಿಡೋ ಕಂಪನಿಯು ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, ಈ ಅನುಭವವು ಎಷ್ಟು ಆತಂಕಕಾರಿಯಾಗಿದೆ ಎಂಬುದು ನಮಗೆ ಅರ್ಥವಾಗಿದೆ ಎಂದು ಪ್ರತಿಕ್ರಿಯಿಸಿದೆ. 'ಬೈಕ್ ಪಿಂಕ್' ರೈಡ್‌ಗಳನ್ನು ಕಡ್ಡಾಯವಾಗಿ ಮಹಿಳಾ ಕ್ಯಾಪ್ಟನ್‌ಗಳಿಗೆ ಮಾತ್ರ ನಿಯೋಜಿಸಬೇಕಾಗಿದ್ದು, ಪುರುಷ ಕ್ಯಾಪ್ಟನ್‌ಗೆ ಬುಕಿಂಗ್ ಹೇಗೆ ಹೋಯಿತು ಮತ್ತು ಆತನ ವರ್ತನೆಯ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸುವುದಾಗಿ ರಾಪಿಡೋ ಭರವಸೆ ನೀಡಿದೆ.

ಕಂಪನಿಯ ನಿಯಮಾವಳಿಗಳ ಪ್ರಕಾರ ಕ್ಯಾಪ್ಟನ್‌‌ಗಳು ನೋಂದಣಿ ವೇಳೆ ನಿಖರವಾದ ಮಾಹಿತಿ ನೀಡಬೇಕು ಮತ್ತು ಬೇರೆಯವರಿಗೆ ತಮ್ಮ ಖಾತೆಯನ್ನು ಬಳಸಲು ಅವಕಾಶ ನೀಡಬಾರದು ಎಂದು ಸ್ಪಷ್ಟಪಡಿಸಿದ್ದರೂ, ಇಂತಹ ಲೋಪಗಳು ಪುನರಾವರ್ತನೆಯಾಗುತ್ತಿರುವುದು ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net