ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ ಬಿಗ್ ಬಾಸ್ ಜಾಹ್ನವಿ: JDS ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ! Bigg Boss Jahnavi

ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ ಬಿಗ್ ಬಾಸ್ ಖ್ಯಾತಿಯ ಜಾಹ್ನವಿ! ಜೆಡಿಎಸ್ (JDS) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕೃತವಾಗಿ ನೇಮಕಗೊಂಡಿರುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Bigg Boss's Jahnavi appointed as JD(S) State General Secretary!
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಬಿಗ್ ಬಾಸ್ ಜಾಹ್ನವಿ ನೇಮಕ!
Published on: 

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 12 ರ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದ ಜಾಹ್ನವಿ ಮಹಡಿ ಈಗ ಜೆಡಿಎಸ್​ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಜಾತ್ಯಾತೀತ ಜನತಾ ದಳ (JDS) ಪಕ್ಷದ ಅಧ್ಯಕ್ಷರು, ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಕೇಂದ್ರ ಸಚಿವರಾಗಿರುವ ಹೆಚ್​.ಡಿ. ಕುಮಾರಸ್ವಾಮಿ ಅವರು ಶ್ರೀಮತಿ ಜಾಹ್ನವಿ ಮಹಡಿ ಅವರನ್ನು ರಾಜ್ಯ ಜೆಡಿಎಸ್​ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಜೆಡಿಎಸ್​ ಪಕ್ಷ, ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶ್ರೀಮತಿ ಜಾಹ್ನವಿ ಮಹಡಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ತಾವು ಪಕ್ಷದ ತತ್ವ-ಸಿದ್ಧಾಂತಗಳಿಗೆ ಬದ್ಧರಾಗಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸಿ ರಾಜ್ಯದಾದ್ಯಂತ ಪಕ್ಷದ ಬೆಳವಣಿಗೆಗೆ ಶ್ರಮಿಸುತ್ತೀರಿ ಎಂದು ಆಶಿಸುತ್ತ, ನಿಮ್ಮ ಮುಂದಿನ ಎಲ್ಲ ಕಾರ್ಯಯೋಜನೆಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇವೆಂದು ತಿಳಿಸಿದ್ದಾರೆ.

ಹುದ್ದೆಯ ಗರಿಮೆ ಹೆಚ್ಚಿಸುತ್ತೇನೆ!

ಈ ನೇಮಕಾತಿ ಆದೇಶ ಹೊರ ಬೀಳುತ್ತಿದ್ದಂತೆ, ಶ್ರೀಮತಿ ಜಾಹ್ನವಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಪಕ್ಷದ ಸವೋಚ್ಚ ನಾಯಕರಾದ ಮಾಜಿ ಪ್ರಧಾನಿ ಹೆಚ್​​.ಡಿ. ದೇವೆಗೌಡರಿಗೆ, ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಅವರಿಗೆ ಯುವ ನಾಯಕ ನಿಖಿಲ್​ ಕುಮಾರ ಸ್ವಾಮಿ ಅಣ್ಣನವರಿಗೆ ಧನ್ಯವಾದಗಳು. ಹಾಗೆಯೇ ನನ್ನೆಲ್ಲಾ ಜೆಡಿಎಸ್​ ಕಾರ್ಯಕರ್ತರಿಗೆ ತುಂಬು ಹೃದಯದ ಧನ್ಯವಾದ ತಿಳಿಸಿದ್ದಾರೆ.

ನಾನು ಹುದ್ದೆಯನ್ನಲ್ಲ, ಆ ಹುದ್ದೆಯಲ್ಲಿದ್ದುಕೊಂಡು ಜನಪರವಾಗಿ ಕೆಲಸ ಮಾಡುವ ಗುರಿಯನ್ನು ಹೊಂದಿದ್ದೆನೆ. ಮುಂದಿನ ದಿನಗಳಲ್ಲಿ, ರೈತರ ಪರವಾಗಿ, ರಾಜ್ಯದ ಜನರ ಪರವಾಗಿ ಇನ್ನು ಹೆಚ್ಚಿನದಾಗಿ ಕೆಲಸ ಮಾಡುವುದಾಗಿ ಜಾಹ್ನವಿ ಭರವಸೆ ನೀಡಿದ್ದು, ತಾವು ಮಾಡಲಿರುವ ಸಕಲ ಕಾರ್ಯಗಳಿಗೆ ಬೆಂಬಲ ನೀಡುವಂತೆ ಜನರಲ್ಲಿ ಕೇಳಿಕೊಂಡಿದ್ದಾರೆ.

ಟಿವಿ ಆ್ಯಂಕರ್​ ಟು ಪ್ರಧಾನ ಕಾರ್ಯದರ್ಶಿ!

ಟಿವಿ ಯಲ್ಲಿ ನ್ಯೂಸ್​ ಆ್ಯಂಕರ್​ ಆಗಿ ವೃತ್ತಿ ಜೀವನ ಆರಂಭಿಸಿದ ಜಾಹ್ನವಿ, ನಂತರ ಕಿರುತೆರೆ, ರಿಯಾಲಿಟಿ ಶೋ ಹಾಗೂ ಕೆಲ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಕನ್ನಡ ಬಿಗ್​ಬಾಸ್​ ಸೀಸನ್​ 12 ರಲ್ಲಿ ಸ್ಪರ್ಧಿಯಾಗಿ ಆಗಮಿಸಿ ರಾಜ್ಯಾದ್ಯಂತ ಅಪಾರ ಖ್ಯಾತಿಯನ್ನು ಇವರು ಗಳಿಸಿಕೊಂಡರು.

ನಂತರ, ಹೆಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜಾತ್ಯಾತೀತ ಜನತಾ ದಳ (JDS) ಪಕ್ಷವನ್ನು ಸೇರಿಕೊಂಡು, ಭೈರಮಂಗಲ ಹಾಗೂ ಬಿಡಿದಿ ರೈತರಿಗೆ ಸಂಬಂಧಿಸಿದಂತೆ ಹೋರಾಟಕ್ಕೆ ಮಾಡಿ ರಾಜಕೀಯವಾಗಿ ಪ್ರಸಿದ್ಧಿ ಕಂಡುಕೊಂಡರು. ಈಗ ಪಕ್ಷಕ್ಕೆ ಸೇರಿದ ಕೆಲವೇ ತಿಂಗಳುಗಳಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶ್ರೀಮತಿ ಜಾಹ್ನವಿ ನೇಮಕವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net