‘ಜೈ ಶ್ರೀ ರಾಮ್’ಗೆ ‘ಸರ್ ತನ್ ಸೇ ಜುದಾ’ ಹೋಲಿಕೆ ಸಾಧ್ಯವಿಲ್ಲ: ಮೌಲಾನಾಗೆ ಜಾಮೀನು ನಿರಾಕರಿಸಿದ ಅಲಹಾಬಾದ್ ಹೈಕೋರ್ಟ್! Allahabad High Court

ಅಲಹಾಬಾದ್ ಹೈಕೋರ್ಟ್ ನ್ಯಾಯಾಲಯದ ಲೋಗೋ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಸಾಂಕೇತಿಕ ಚಿತ್ರ.
ಅಲಹಾಬಾದ್ ಹೈಕೋರ್ಟ್ ನ್ಯಾಯಾಲಯದ ಲೋಗೋ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಸಾಂಕೇತಿಕ ಚಿತ್ರ.
Published on
ಅಲಹಾಬಾದ್​: 2025 ರಲ್ಲಿ ಬರೇಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲಾನಾ ತೌಕೀರ್ ರಜಾ ಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್​ ಹೈಕೋರ್ಟ್ (Allahabad High Court)​ ಅರ್ಜಿ ವಜಾ ಮಾಡಿ ಆದೇಶಿಸಿದೆ. 
ಈ ಸಂದರ್ಭದಲ್ಲಿ ಸರ್​ ತನ್​ ಸೇ ಜುದಾ ಘೋಷಣೆ ಹಾಗೂ ಜೈ ಶ್ರೀ ರಾಮ್​ ಘೋಷಣೆ ಎರಡು ಪ್ರತ್ಯೇಕವಾಗಿದ್ದು, ಒಂದಕ್ಕೊಂದು ಹೋಲಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ. 

ಸರ್​ ತನ್​ ಸೇ ಜುದಾ ಧಾರ್ಮಿಕ ಹೇಳಿಕೆಯಲ್ಲ!

ಸೋಮವಾರ (ಸೆ.8) ಬರೇಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌಲಾನಾ ತೌಕೀರ್ ರಜಾ ಖಾನ್, ಪ್ರಕರಣದಿಂದ ಜಾಮೀನು ನೀಡುವಂತೆ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್​ ಹೈಕೋರ್ಟ್​ ವಿಚಾರಣೆ ನಡೆಸಿತು.ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಜಸ್ಟೀಸ್​ ಆಶುತೋಶ್​ ಶ್ರೀವತ್ಸ ಅವರು ಪೊಲೀಸರ ಮೇಲೆ ದಾಳಿ ಮಾಡುವಾಗ, ಕಿಡಿಗೇಡಿಗಳು ಸರ್​ ತನ್​ ಸೇ ಜುದಾ ಘೋಷಣೆ ಕೂಗಿದ್ದಾರೆ.
ಈ ಸರ್​ ತನ್​ ಸೇ ಜುದಾ ಘೋಷಣೆ ಜೈ ಶ್ರೀ ರಾಮ್​ ಹಾಗೂ ಅಲ್ಲಾ ಹು ಅಕ್ಬರ್​ ರೀತಿ ಧಾರ್ಮಿಕ ಘೋಷಣೆಯಲ್ಲ. ಧಾರ್ಮಿಕ ಘೋಷಣೆಯಲ್ಲಿ ದೇವರಿಗೆ ನಮನ ಅಥವಾ ತಮಗೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸುವುದಾಗಿದೆ. ಆದರೆ, ಈ ಸರ್ ತನ್​ ಸೇ ಜುದಾ ಹೇಳಿಕೆ, ಅದು ಪೊಲೀಸರ ವಿರುದ್ಧ ಬಳಸಿದ್ದು, ಭಾರತದ ಸಾರ್ವಭೌಮತ್ವಕ್ಕೆ ಒಡ್ಡಿರುವ ಬೆದರಿಕೆಯಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತ ಪಡಿಸಿದೆ.

ಪ್ರಕರಣದ ಹಿನ್ನಲೆ!

2025 ರಲ್ಲಿ ಉತ್ತರ ಪ್ರದೇಶದ ಬರೇಲಿಯಲ್ಲಿ ಐ ಲವ್​ ಮೊಹಮ್ಮದ್​ ಎನ್ನುವ ಟ್ರೆಂಡ್​ ಪ್ರಾರಂಭಬವಾಗಿತ್ತು. ಇದರ ವಿರುದ್ಧ ಪೊಲೀಸರಲ್ಲಿ ದೂರು ದಾಖಲಾದ ನಂತರ ಪೊಲೀಸರು ತನಿಖೆಗೆ ಮುಂದಾಗಿದ್ದರು.
ಈ ಹಿನ್ನಲೆಯಲ್ಲಿ ಶುಕ್ರವಾರ್ ರಂಜಾನ್​ ನಂತರ ಕೆಲವರನ್ನು ಬಂಧಿಸಲು ಪೊಲೀಸರು ಮುಂದಾದಾಗ ಕೆಲ ಕಿಡಿಗೇಡಿಗಳು, ಪೊಲೀಸರ ಮೇಲೆ ಕಲ್ಲೆಸಿದ್ದರು. ಈ ಸಂದರ್ಭದಲ್ಲಿ ಆರೋಪಿ ಮೌಲಾನಾ  ತೌಕೀರ್ ರಜಾ ಖಾನ್​ ಸರ್​ ತನ್​ ಸೇ ಜುದಾ ಘೋಷಣೆ ಕೂಗಿ ಉದ್ವಿಗ್ನ ಗುಂಪನ್ನು ಪೊಲೀಸರ ಮೇಲೆ ಎತ್ತಿಕಟ್ಟಿದ್ದ ಆರೋಪವನ್ನು ಹೊತ್ತಿದ್ದಾನೆ. ಈಗ, ಈ ಪ್ರಕರಣದಿಂದ ಪಾರಾಗಲು ಮೌಲಾನಾ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ನ್ಯಾಯಪೀಠ ವಜಾ ಮಾಡಿ ಆದೇಶಿದೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net