ನನ್ನ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ನನ್ನಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ದೇಶಕ್ಕಾಗಿ ಏನೇನೋ ಸಾಧನೆ ಮಾಡಿದವಳಿಗೆ ನನ್ನ ರಾಜ್ಯದ ಸಮಸ್ಯೆಗೆ ಸ್ಪಂದಿಸಲು ಆಗಲಿಲ್ಲ. ನಾನೇನು ಪ್ರಭಾವಿ ವ್ಯಕ್ತಿಯಲ್ಲ, ನನಗೆ ಬಹಳ ಅಸಾಯಕ ಮನೋಭಾವ ಕಾಡಿತು. ನನ್ನವರ ನೋವಿಗೆ ಪರಿಹಾರ ಹುಡಕಲು ನನ್ನಿಂದ ಆಗಲಿಲ್ಲ, ನನ್ನ ಮೇಲೆ ನನಗೆ ನಾಚಿಕೆಯಾಗುತ್ತಿದೆ ಎಂದು ಮೇರಿ ಕಣ್ಣೀರು ಸುರಿಸಿದ್ದಾರೆ.