ಬಿಹಾರದಲ್ಲಿ ಉಂಟಾಗಿರುವ ಪ್ರವಾಹದ ಬಗ್ಗೆ ಮಾತನಾಡಿರುವ ಪ್ರಶಾಂತ್ ಕಿಶೋರ್, ಬಿಹಾರ ಕಳೆದ 80 ವರ್ಷಗಳಿಂದ ಪ್ರವಾಹಕ್ಕೆ ತುತ್ತಾಗುತ್ತಿದೆ. ಅದರಲ್ಲೂ ಕೋಸಿ ನದಿ ಪ್ರದೇಶ ಅಧಿಕ ನಷ್ಟವನ್ನು ಅನುಭವಿಸುತ್ತಿದೆ. ಆದರೆ ಅಧಿಕಾರದಲ್ಲಿ ಕುಳಿತವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ, ಕೇವಲ ಬೊಗಸ್ ಯೋಜನೆ, ಪರಿಹಾರ ಎಂದು ಹೇಳುತ್ತಾ ಸಮಯ ಹಾಳು ಮಾಡುತ್ತಿದ್ದಾರೆ. ಬಿಹಾರ ಕೇವಲ ಪ್ರವಾಹದ ನೀರಿನಿಂದ ಮಾತ್ರವಲ್ಲ, ಭ್ರಷ್ಟಾಚಾರದಿಂದ ಕೂಡ ಮುಳುಗುತ್ತಿದೆ ಎಂದು ಕಿಡಿ ಕಾರಿದ್ದಾರೆ, (ಏಜನ್ಸೀಸ್).