ತಮ್ಮ ಮಕ್ಕಳ ಆರೋಗ್ಯ ಹದಗೆಡಲು ಹಿಂದಿನ ದಿನ ಸಂಜೆ ತಿಂದಿರುವ ಪಾನಿಪುರಿಯೇ ಕಾರಣ ಎನ್ನುವುದು ಹೆತ್ತವರ ಆರೋಪವಾಗಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನು ವೈದ್ಯರಾಗಲಿ, ಅಧಿಕಾರಿಗಳಾಗಲಿ ಸ್ಪಷ್ಟನೆ ನೀಡಿಲ್ಲ. ಆದರೆ ಮಕ್ಕಳಿಗೆ ಫುಡ್ ಪಾಯಿಸಾನಿಂಗ್ ಆಗಿರುವುದು ದೃಢವಾಗಿದ್ದು, ಇದಕ್ಕೆ ಯಾವ ಆಹಾರ ಕಾರಣವೆಂದು ವೈದ್ಯರು ಹಾಗೂ ಆಹಾರ ಸುರಕ್ಷಾ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾಗಿ ತಿಳಿದು ಬಂದಿದೆ, (ಏಜನ್ಸೀಸ್).