

ಪ್ರಮುಖ ಮುಖ್ಯಾಂಶಗಳು
ಇತ್ತೀಚೆಗೆ ರಾಜಸ್ಥಾನದ ಸುಜನ್‌ಗಢ ಎಂಬಲ್ಲಿ ನಡೆದಿರುವ ಘಟನೆ ವಿಡಿಯೋ ನೋಡಿರುವ ಜನ ಸರ್ಕಾರಿ ಆಸ್ಪತ್ರೆಗೆ ಪ್ರಾಣವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಹೋಗುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಹೇಳುತ್ತಿದ್ದಾರೆ.
ಮಹಿಳೆ ಮೇಲೆ ಒಮ್ಮಲೇ ಮೇಲ್ಚಾವಣಿ ಬಿದ್ದಿದ್ದೇ, ಶಾಕ್ ಆಗಿರುವ ಮಹಿಳೆ ಒಮ್ಮಲೇ ವಿಚಲಿತರಾಗಿದ್ದಾರೆ. ಆದರೆ ಆ ಮಹಿಳೆಯ ಪ್ರಾಣಕ್ಕೇನೂ ಅಪಾಯವಾಗದಿದ್ದರೂ, ಬಲವಾಗಿ ಪೆಟ್ಟುಬಿದ್ದಿರುದಂತೂ ನಿಜವಾಗಿದೆ. ಆದರೆ ಮಹಿಳೆಗೆ ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದೆ ಬೇರೊಂದು ಆಸ್ಪತ್ರೆಗೆ ಸಾಗಿಸಿರುವುದು ಸೋಜಿಗವಾಗಿದೆ.
ಈ ಆಸ್ಪತ್ರೆಯಲ್ಲಿ ಮೊದಲೇ ಮೂಲಸೌಕರ್ಯಗಳ ಕೊರತೆಯಿದ್ದು, ಈ ಬಗ್ಗೆ ನಾವು ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದ್ದೆವೆ. ಆ ದಿನ ಆಸ್ಪತ್ರೆಗೆ ಬಂದಿದ್ದ ರೋಗಿಗಳ ಸಂಖ್ಯೆ ಕಡಿಮೆ ಇತ್ತು. ಒಂದು ವೇಳೆ ಜನರ ಸಂಖ್ಯೆ ಹೆಚ್ಚಿದ್ದರೆ, ದೊಡ್ಡ ಮಟ್ಟದ ದುರಂತ ಸಂಭವಿಸುತ್ತಿತ್ತು ಎಂದು ಹೇಳಿದ್ದಾರೆ.