ರೋಹಿತ್​ ನಿವೃತ್ತಿ ವದಂತಿ ತಂದ ಆಪತ್ತು; ಮುಖ್ಯ ಆಯ್ಕೆಗಾರ ಹುದ್ದೆಯಿಂದ ಅಜಿತ್​ ಔಟ್​? ಅಗರ್ಕರ್​ ಸ್ಥಾನಕ್ಕೆ ವಿವಿಎಸ್​ ಫೈಟ್​! Ajit Agarkar

ರೋಹಿತ್ ಶರ್ಮಾ ನಿವೃತ್ತಿ ವದಂತಿ; ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್​ಗೆ ಆಪತ್ತು
ರೋಹಿತ್ ಶರ್ಮಾ ನಿವೃತ್ತಿ ವದಂತಿ; ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್​ಗೆ ಆಪತ್ತು
Published on

ಪ್ರಮುಖ ಮುಖ್ಯಾಂಶಗಳು

  • ರೋಹಿತ್ ಶರ್ಮಾ ನಿವೃತ್ತಿ ವದಂತಿ
  • ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್​ ಸ್ಥಾನಕ್ಕೆ ಕುತ್ತು
  • ಅಗರ್ಕರ್ ಸ್ಥಾನಕ್ಕೆ ವಿವಿಎಸ್ ಲಕ್ಷ್ಮಣ್ ಪೈಪೋಟಿ
ನವದೆಹಲಿ: ಇಂಗ್ಲೆಂಡ್​ ವಿರುದ್ಧದ ಏಕದಿನ ಟೂರ್ನಿ ಸಂದರ್ಭದಲ್ಲಿ ಟೀಂ ಇಂಡಿಯಾದ ಓಪನಿಂಗ್​ ಬ್ಯಾಟ್ಸ್​ಮನ್​, ಹಿಟ್​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ನಿವೃತ್ತಿ ಹೊಂದಲಿದ್ದಾರೆಂಬ ವದಂತಿ ಹಬ್ಬಿದಕ್ಕೆ ಬಿಸಿಸಿಐ ಗರಂ ಆಗಿದ್ದು, ಇದೇ ಕಾರಣಕ್ಕಾಗಿ ಮುಖ್ಯ ಅಯ್ಕೆಗಾರರಾದ ಅಜಿತ್​ ಅಗರ್ಕರ್ (Ajit Agarkar)​ ಅವರನ್ನು ತಂಡದಿಂದ ಕೈ ಬಿಡುವ ಸಾಧ್ಯತೆಯಿದೆ ಎಂಬ ಗುಸುಗುಸು ಪ್ರಾರಂಭವಾಗಿದೆ.
2027 ರಲ್ಲಿ ಅಜಿತ್​ ಅಗರ್ಕರ್​ ಅವರ ಸೇವಾ ಅವಧಿ ಮುಕ್ತಾಯವಾಗಲಿದ್ದು, ರೋಹಿತ್​ ಶರ್ಮಾರ ನಿವೃತ್ತಿ ಕುರಿತು ವದಂತಿ ಹಬ್ಬಿದಕ್ಕೆ ಕುಪಿತಗೊಂಡಿರುವ ಆಡಳಿತ ಮಂಡಳಿ ಅಜಿತ್​ರ ತಲೆದಂಡಕ್ಕೆ ಮುಂದಾಗಿದ್ದಾರೆಂಬ ಸುದ್ದಿ ಕ್ರಿಕೆಟ್​ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಅಜಿತ್​ ಬದಲಿಗೆ ವಿವಿಎಸ್​!

ಡ್ರೇಸ್ಸಿಂಗ್​ ರೂಮ್​ನಲ್ಲಿ ನಡೆದಿರುವ ಘಟನೆಯನ್ನು ಮಾಧ್ಯಮ ವರದಿವೆರೆಗೆ ಎಳೆದು ತಂದಿರುವುದು ಬಿಸಿಸಿಐ ಕೋಪಕ್ಕೆ ಕಾರಣವಾಗಿದ್ದು, ಬಿಸಿಸಿಐ ಸೆಕ್ರೆಟರಿ ದೇವಜಿತ್​ ಸೈಕಿಯಾ, ಈಗಾಗಲೇ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

ಅಜಿತ್ ಅಗರ್ಕರ್​ ಹೇಗಿದ್ದರೂ 2027 ರಲ್ಲಿ ತಮ್ಮ ಅಧಿಕಾರವಧಿಯಿಂದ ಕೆಳಗಿಳಿಯುತ್ತಿದ್ದು, ಮುಂದುವರಿಸಲು ಬಿಸಿಸಿಐ ಮನಸ್ಸು ಮಾಡುತ್ತಿಲ್ಲ, ಅದರಲ್ಲೂ ರೋಹಿತ್​ ಶರ್ಮಾ ನಿವೃತ್ತಿ ವದಂತಿ ನಂತರ ಅಗರ್ಕರ್​ ಅವರ ಯಾವಾಗ ತಂಡದಿಂದ ಹೊರಹೋಗುತ್ತಾರೆ ಎನ್ನುವುದು ಗೊತ್ತಿಲ್ಲ ಎಂಬ ಮಾತು ಕೇಳಿಬುತ್ತಿದೆ.


ಈಗ ಅಜಿತ್​ ಅಗರ್ಕರ್​ ತಮ್ಮ ಸ್ಥಾನದಿಂದ ಕೆಳಗಿಳಿದರೆ, ಅನುಭವಿ ಆಟಗಾರ, ಹಾಗೂ ತಮ್ಮ ಅವಧಿಯಲ್ಲಿ ಅತ್ಯುತ್ತಮ ಕ್ರೀಡಾಪಟು ಎಂದೇ ಖ್ಯಾತಿಗಳಿಸಿದ್ದ ವಿವಿಎಸ್​ ಲಕ್ಷ್ಮಣ್​ ಮುಂದಿನ ಟೀಂ ಇಂಡಿಯಾ ತಂಡದ ಮುಖ್ಯ ಆಯ್ಕೆಗಾರ ಹುದ್ದೆ ಅಲಂಕರಿಸಲಿದ್ದಾರೆಂದು ಹೇಳಲಾಗುತ್ತಿದೆ. ಬಿಸಿಸಿಐ ವಲಯದಲ್ಲಿ ಉತ್ತಮ ಸಂಪರ್ಕ ಹೊಂದಿರುವ ಲಕ್ಷ್ಮಣ್​, ಯುವ ಆಟಗಾರರೊಂದಿಗೆ ಚೆನ್ನಾಗಿ ಬೆರೆಯಬಲ್ಲರು ಎನ್ನುವ ಸುದ್ದಿ ಹರಿದಾಡುತ್ತಿದೆ, (ಏಜನ್ಸೀಸ್​). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net