ದೆಹಲಿ ಅಬಕಾರಿ ನೀತಿ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು, ಈಗಾಗಲೇ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ವಿಚಾರಣಾ ನ್ಯಾಯಾಲಯವು ಸಿಬಿಐ ತನಿಖೆಯನ್ನು ತಿರಸ್ಕರಿಸಿದೆ. ಆದರೆ ಮಾ. 09ರ ತಮ್ಮ ಪೀಠ, 5 ಸಾವಿರ ಪುಟಗಳಿಗೂ ಹೆಚ್ಚು ಉದ್ದವಾದ ಕೆಳ ನ್ಯಾಯಾಲಯದ ತೀರ್ಪನ್ನು ಕೇವಲ ಐದು ನಿಮಿಷಗಳಲ್ಲಿ ವಜಾಗೊಳಿಸಿದೆ. ಆರ್ಎಸ್ಎಸ್ನ ಕಾನೂನು ವಿಭಾಗ ಎಂದೂ ಕರೆಯಲ್ಪಡುವ ಅಖಿಲ ಭಾರತೀಯ ಅಧಿವಕ್ತ ಪರಿಷತ್ ಆಯೋಜಿಸಿದ್ದ ಕಾರ್ಯಕ್ರಮಗಳಿಗೆ ನೀವು 4 ಬಾರಿ ಹಾಜರಾಗಿದ್ದೀರಿ. ನಾವು ಅವರ ಸಿದ್ಧಾಂತವನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದೇವೆ. ಇದರಿಂದ ತಮ್ಮ ಪೀಠದಲ್ಲಿ ನಡೆಯುವ ವಿಚಾರಣೆ ನಿಷ್ಪಕ್ಷಪಾತ ಮತ್ತು ತಟಸ್ಥವಾಗಿರುವುದಿಲ್ಲ ಎಂಬ ಗಂಭೀರ, ಪ್ರಾಮಾಣಿವಾದ ಅನುಮಾನಗಳು ನನಗಿವೆ. ಅದಕ್ಕಾಗಿಯೇ ತಾವು ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದರು (ಏಜೆನ್ಸೀಸ್).