ಪ್ರೀತಿಗಾಗಿ ಹಠ ಹಿಡಿದ ಮಗಳು ; ಹೆತ್ತ ಮಗಳನ್ನೇ ಕೊಂದು ಮುಖಕ್ಕೆ ಆಸಿಡ್ ಹಾಕಿದ ತಂದೆ | Father kills daughter

ಆರೋಪಿ ವಿಜಯ್ ಕುಮಾರ್ ಚೌಬೆ ಮತ್ತು ಆತನ ಸ್ನೇಹಿತನನ್ನು ಬಂಧಿಸಿರುವುದು.
ಆರೋಪಿ ವಿಜಯ್ ಕುಮಾರ್ ಚೌಬೆ ಮತ್ತು ಆತನ ಸ್ನೇಹಿತನನ್ನು ಬಂಧಿಸಿರುವುದು.
Published on
ಲಖನೌ: ಪ್ರೀತಿಯಲ್ಲಿ ಬಿದ್ದಿದ್ದ 16 ವರ್ಷದ ಅಪ್ರಾಪ್ತ ಮಗಳನ್ನು ಆಕೆಯ ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿ(Father kills daughter), ಮುಖ ಗುರುತು ಸಿಗದಂತೆ ಆಸಿಡ್ ಹಾಕಿ ಶವವನ್ನು ನದಿ ಪಕ್ಕ ಎಸೆದಿರುವ ಘಟನೆ ಉತ್ತರ ಪ್ರದೇಶದ ಲಖನೌದಲ್ಲಿ ನಡೆದಿದ್ದು, ವರ್ಷದ ಬಳಿಕ ಪ್ರಕರಣ ಬೆಳಕಿಗೆ ಬಂದಿದ್ದು, ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ವಂದನಾ ಚೌಬೆ ಕೊಲೆಯಾದ ಮಗಳು. 2025 ಆಗಸ್ಟ್​ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ತಂದೆ ವಿಜಯ್ ಕುಮಾರ್ ಚೌಬೆ ಮತ್ತು ಆತನಿಗೆ ಸಹಕರಿಸಿದ ಸಹಚರನನ್ನು ಯುಪಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಆರೋಪಿ ತಂದೆಯೂ ಲಖನೌ ವಿಶ್ವ ವಿದ್ಯಾಲಯದಲ್ಲಿ ಬಸ್ ಚಾಲಕನಾಗಿದ್ದಾನೆ. ತಾನು ಮಾಡಿದ ಅಪರಾಧದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

ಘಟನೆ ಹಿನ್ನೆಲೆ

2025 ಏಪ್ರಿಲ್​ನಲ್ಲಿ ವಂದನಾ ಚೌಬೆ ಪ್ರೀತಿಯಲ್ಲಿ ಬಿದ್ದು ತನ್ನ ಗೆಳೆಯನ ಜೊತೆ ಮನೆಬಿಟ್ಟು ಓಡಿ ಹೋಗಿದ್ದಳು ಎನ್ನಲಾಗಿದೆ. ಪೊಲೀಸರ ದೂರಿನನ್ವಯ ಅಪ್ರಾಪ್ತಳಾಗಿದ್ದರಿಂದ ಹುಡುಗಿಯನ್ನು ವಾಪಸ್ ಮನೆಗೆ ಕರೆತಂದಿದ್ದಾರೆ. ಮತ್ತೆ ಅವನನ್ನು ಬಿಟ್ಟು ಬಿಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಬಾಲಕಿ ತನ್ನ ಪ್ರಿಯಕರನೊಂದಿಗೆ ನಿರಂತರ ಸಂಪರ್ಕವನ್ನು ಮುಂದುವರೆಸಿದ್ದಾಳೆ.
ಮಗಳ ಸಂಬಂಧದಿಂದಾಗಿ ಸಮಾಜಿಕ ಕಳಂಕವನ್ನು ತಪ್ಪಿಸಲು ಕುಟುಂಬವು ಹಲವು ಬಾರಿ ಮನೆಗಳನ್ನು ಬದಲಾಯಿಸಿದ್ದು, ಕೊನೆಗೆ ಮಗಳು ಪ್ರಿಯಕರನನ್ನು ಬಿಡಲು ಒಪ್ಪದ ಹಿನ್ನೆಲೆ ಸಿಟ್ಟಾದ ತಂದೆ, ಮರ್ಯಾದೆಗೆ ಅಂಜಿ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದಾನೆ.
ಆಗಸ್ಟ್​ 13ರಂದು ತನ್ನ ಅಬ್ದುಲ್ ಮನ್ನನ್ ಜೊತೆ ಮಗಳನ್ನುರಾಜಸ್ಥಾನಕ್ಕೆ ಭೂತವಿಮೋಚನೆ ಅಥವಾ ಫಾತ್-ಹೀಲಿಂಗ್ ಆಚರಣೆಗಳಿಗಾಗಿ ಕರೆದೊಯ್ಯುದಿದ್ದು, ರಾತ್ರಿಯ ಸಮಯದಲ್ಲಿ ಬಾರಾಬಂಕಿಯ ನಿರ್ಜನ ಸಮಯದಲ್ಲಿ ಮಗಳ ನಿದ್ರೆಯ ಸಮಯದಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ಮುಖ ಗುರುತು ಸಿಗದಂತೆ ಆಸಿಡ್ ಹಾಕಿ, ಶವವನ್ನು ನದಿ ಪಕ್ಕ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ನಂತರ ಮನೆಗೆ ವಾಪಸ್ ಆದ ತಂದೆ ವಿಜಯ್ ಕುಮಾರ್ ಆಗಸ್ಟ್ 16ರಂದು ಇಂಟಿಗ್ರೇಟೆಡ್ ಗ್ರೀವೆನ್ಸ್ ರಿಡ್ರೆಸಲ್ ಸಿಸ್ಟಮ್ (ಐಜಿಆರ್ಎಸ್) ಪೋರ್ಟಲ್ ಮೂಲಕ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ಕರೆ ದಾಖಲೆಗಳನ್ನು ವಿಶ್ಲೇಷಿಸಿ, ಶಂಕಿತರನ್ನು ವಿಚಾರಣೆ ನಡೆಸಿದಾಗ ಆಘಾತಕಾರಿ ಘಟನೆ ಹೊರಗೆ ಬಂದಿದ್ದು, ತಂದೆಯೇ ಮಗಳನ್ನು ಕೊಲೆ ಮಾಡಿದ್ದು ಕಂಡು ಬಂದಿದೆ. ಬಳಿಕ ಸಾಮಾಜಿಕ ಅವಮಾನದ ಭಯದಿಂದ ಮಗಳನ್ನು ಕೊಂದಿದ್ದಾಗಿ ಆರೋಪಿ ತಂದೆ ತಪ್ಪೊಪ್ಪಿಕೊಂಡಿದ್ದಾನೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net