ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್ ರಾಜೇಶ್​ ಖನ್ನಾರ ಕನಸಿನ ಕೂಸು'ಆಶೀರ್ವಾದ್' ನೆಲಸಮ​; ಬಂಗಲೆ ಮತ್ತು ಪ್ರೀತಿಯ ಕಾಕಾ ಬಗ್ಗೆ ನಟಿ Mumtaz ಹೇಳಿದ್ದಿಷ್ಟು..​​

Mumtaz Emotional Talks on  Rajesh Khanna Bungalow
Mumtaz Emotional Talks on Rajesh Khanna Bungalow
Published on

ಪ್ರಮುಖ ಮುಖ್ಯಾಂಶಗಳು

  • ರಾಜೇಶ್ ಖನ್ನಾರಿದ್ದ ಆಶೀರ್ವಾದ್​ ಬಂಗಲೆ ಕೇವಲ ಒಂದು ಮನೆಯಲ್ಲ, ಅದೊಂದು ಸ್ಮಾರಕ
  • ಆಶೀರ್ವಾದ್​ ಬಂಗಲೆ ನೆಲಸಮಗೊಂಡ ಬಗ್ಗೆ ನಟಿ ಮುಮ್ತಾಜ್​ ಬೇಸರ
  • ಕಾಕಾ ಅತಿಥಿ ಸತ್ಕಾರ ಚೆನ್ನಾಗಿ ಮಾಡುತ್ತಾರೆ ಎಂದ ನಟಿ ಮುಮ್ತಾಜ್
Mumtaz Emotional Talks on  Rajesh Khanna Bungalow:  ಮುಂಬೈನ ಕಾರ್ಟರ್ ರೋಡ್​ನಲ್ಲಿರುವ ರಾಜೇಶ್ ಖನ್ನಾ ಅವರ ಐಕಾನಿಕ್ ಬಂಗಲೆ 'ಆಶೀರ್ವಾದ್' ಇತಿಹಾಸದ ಪುಟ ಸೇರಿದೆ. ಈ ಕಟ್ಟಡದ ನೆಲಸಮದ ಬಗ್ಗೆ ಹಿರಿಯ ನಟಿ ಮುಮ್ತಾಜ್ ತೀವ್ರ ಅಸಮಾಧಾನ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಆ ಬಂಗಲೆ ಕೇವಲ ಒಂದು ಮನೆಯಲ್ಲ, ಅದೊಂದು ಸ್ಮಾರಕವಾಗಿತ್ತು ಎಂದು ಅವರು ಬಣ್ಣಿಸಿದ್ದಾರೆ. 
'ಇಂದಿಗೂ ಆಶೀರ್ವಾದ್​ ಬಂಗಲೆ ಇದ್ದ ಜಾಗ ನೋಡಿದ್ರೆ ಕಣ್ಣಲ್ಲೀ ನೀರು ಹಾಗೆಯೇ ಕೆಳಗಿಳಿಯುತ್ತದೆ. ನೆಲಕ್ಕೆ ಕುಸಿದು ಬೀಳುವಷ್ಟು ನೋವಾಗುತ್ತದೆ. ನನ್ನ ನಾಯಕನ ಮನೆ ಎಂದು ಅನಿಸುತ್ತದೆ. ಸಿನಿಮಾ ರಂಗದ ಹೆಗ್ಗುರುತು. ಇದೊಂದು ಸ್ಮಾರಕವಿದ್ದಂತೆ. ಬಂಗಲೆ ಮಾರಾಟದ ಹಿಂದಿನ ಆಂತರಿಕ ವಿಚಾರಗಳ ಬಗ್ಗೆ ತಿಳಿದಿಲ್ಲವಾದರೂ, ಒಂದು ಸುಂದರ ನೆನಪು ಮಣ್ಣಾಗಿರುವುದು ಮುಮ್ತಾಜ್ ಅವರಿಗೆ ತುಂಬಲಾರದ ನೋವು ತಂದಿದೆ' ಎಂದು  90ರ ದಶಕದ ಹೆಸರಾಂತ ನಟಿ ಮಮ್ತಾಜ್​​​ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 
'1970ರ ಕಾಲದಲ್ಲಿ  ಮಮ್ತಾಜ್ ಮತ್ತು ರಾಜೇಶ್​ ಖನ್ನಾ ಇಬ್ಬರು  ಯಶಸ್ವಿ ಜೋಡಿಗಳು. ಇಬ್ಬರು ಒಟ್ಟಾಗಿ ನಟಿಸಿದ 8 ಸಿನಿಮಾಗಳು ಭಾರಿ ಹಿಟ್​​ ಕಂಡಿದ್ದವು. ಇವರಿಬ್ಬರ ರೀಲ್​ ಕೆಮೆಸ್ಟ್ರಿ ರಿಯಲ್​​​ ಲೈಫ್​ನಲ್ಲೂ ಮುಂದುವರೆದಿದೆ ಎನ್ನುವ ಗಾಸಿಪ್ಸ್​ ಹರಡಿತ್ತು. ಈ ಬಗ್ಗೆ ಅವರು ಇತ್ತೀಚೆಗೆ ಸ್ಪಷ್ಟನೆ ಕೊಟ್ಟಿದ್ದರು. ಅವರು ನನ್ನ ಗೆಳತಿ ಅಂಜು ಮಹೇಂದ್ರರನ್ನು ಪ್ರೀತಿಸುತ್ತಿದ್ದರು. ಆದರೆ, ಮದುವೆಯಾಗಿಲ್ಲ ಸ್ನೇಹವಾಗಿ ಸಂಬಂಧ ಉಳಿಸಿಕೊಂಡರು ಎಂದು ಮುಗುಳ್ನಕ್ಕರು.

ಏನಿದು ಆಶೀರ್ವಾದ್​ ಬಂಗಲೆ ಪುರಾಣ?

ರಾಜೇಶ್​ ಖನ್ನಾರವರು 1969-71ನೇ ಸಾಲಿನ ಮೊದಲ ಬಾಲಿವುಡ್​ ಸ್ಟಾರ್​. ರಾಜೇಶ್​ ಖಣ್ನಾರ ಹಿಟ್​​ ಸಿನಿಮಾಗಳ ಜೊತೆಗೆ ಅವರ ಸಂಗಾತಿಯಂತೆ ಜೊತೆಯಾಗಿ ನಿಂತಿದ್ದು ಅವರ ಪ್ರೀತಿಯ ಆಶೀರ್ವಾದ್​ ಬಂಗಲೆ.  1970ರಲ್ಲಿ ಅವರ ಸಿನಿಮಾ ರಂಗದ ಅದೃಷ್ಟವನ್ನೇ ಬದಲಾಯಿಸಿದ್ದು ಇದೇ ಆಶೀರ್ವಾದ್​. ಇವರು ಬಾಲಿವುಡ್​ನ ಕಾಕಾ ಎಂದೇ ಪ್ರಖ್ಯಾತಿ ಪಡೆದುಕೊಂಡರು.
1973 ರಲ್ಲಿ ಅವರು ಡಿಂಪಲ್​ ಕಪಾಡಿಯಾ ಅವರ ಕೈ ಹಿಡಿದರು ಅದಕ್ಕೂ ಮುನ್ನವೇ ಮೂರುವರೆ ಲಕ್ಷ ರೂಪಾಯಿ ಕೊಟ್ಟು ಈ ಸುಂದರ ಬಂಗಲೆಯನ್ನು ಖರೀದಿಸಿದ್ದರು. ಇದಕ್ಕೂ ಮೊದಲು ನಟ ರಾಜೇಂದ್ರ ಕುಮಾರ್ ಅವರು  60 ಸಾವಿರ ರೂಪಾಯಿ ಕೊಟ್ಟು ಈ ಬಂಗಲೆ ಖರೀದಿಸಿದ್ದರಂತೆ. ಈ ಬಂಗಲೆಗೆ ತೆರಳಿದ ಕಾಲಘಟ್ಟದಲ್ಲಿ ಅವರ ಸಿನಿಮಾಗಳು ಸೋಲು ಕಂಡವು. ಚಿತ್ರಗಳು ಬಹಳ ದಿನ ಓಡಲಿಲ್ಲ. ಹಾಗಾಗಿ ಬಂಗಲೆ ಮಾರಾಟಕ್ಕೆ ರಾಜೇಂದ್ರ ಅವರು ಮುಂದಾದರು. 
ಡಿಂಪಲ್​ ಎಂದಿರುವ ಹೆಸರನ್ನು ಬದಲಿಸಲು ರಾಜೇಶ್​ ಖನ್ನಾರಿಗೆ ಇಷ್ಟವಿರಲಿಲ್ಲ. ಆದರೆ ಅನಿವಾರ್ಯವಾಗಿ ಬಂಗಲೆಗೆ  ಆಶೀರ್ವಾದ್ ಎಂದು ಹೆಸರಿಟ್ಟರು. ಇದು ಅವರ ಕನಸಿನ ಮನೆ . ಇದನ್ನು ಮ್ಯೂಸಿಯಂ ಮಾಡುವ ಕನಸನ್ನು ಖನ್ನಾ ಅವರು ಕಂಡಿದ್ದರು. 2012 ಜುಲೈ 18ರಂದು ಅವರು ನಿಧನರಾದರು. ಅವರ ಕನಸು ಕನಸಾಗಿಯೇ ಉಳಿದು ಬಿಟ್ಟಿತು.
ರಿಂಕಿ ಮತ್ತು ಟ್ವಿಂಕಲ್​ ಅಪ್ಪನ ಕನಸು ನನಸು ಮಾಡಲು ಮುಂದಾಗಲಿಲ್ಲ, ವಿವಾದಕ್ಕೆ ಹೆದರಿ ಆಲ್ಕಾರ್ಗೋ ಲಾಜಿಸ್ಟಿಕ್ಸ್ ಲಿಮಿಟೆಡ್ ಸಂಸ್ಥಾಪಕ ಮತ್ತು ಅಧ್ಯಕ್ಷ ಶಶಿಕಿರಣ್ ಶೆಟ್ಟಿಗೆ 2014ರಲ್ಲಿ 90 ಕೋಟಿಗೆ ಮಾರಾಟ ಮಾಡಿಯೇ ಬಿಟ್ಟರು. ಅವರು ಈ ಬಂಗಲೆಯನ್ನು 2016ರಲ್ಲಿ ಕೆಡವಿ ಐಷಾರಾಮಿ ಕಟ್ಟಡವನ್ನು ನಿರ್ಮಿಸಿಕೊಂಡಿದ್ದಾರೆ.

ಎಂಥ ಅತಿಥಿ ಸತ್ಕಾರ ಮಾಡ್ತಾರೆ ಗೊತ್ತ?

ಅಂಜು ಮಹೀಂದ್ರ ಮತ್ತು ಕಾಕಾ ಅಂದರೆ ರಾಜೇಶ್​ ಖನ್ನಾ ಅವರು ನನ್ನನ್ನು ತುಂಬಾ ಪ್ರೀತಿಯಿಂದ ಕಾಣುತ್ತಿದ್ದರು. ನಾನು ಅವರ ಮನೆಗೆ ಭೇಟಿ ಕೊಟ್ಟಾಗ ಸಾಕು ಎಂದರೂ ಇದನ್ನು ತಿನ್ನು ಅದನ್ನು ತಿನ್ನು ಎಂದು ಪೀಡಿಸುತ್ತಿದ್ದರು. ಅವರ ಅತಿಥಿ ಸತ್ಕಾರಕ್ಕೆ ನಾನು ಮನಸೋತಿದ್ದೆ.  ಚಿತ್ರರಂಗದ ಜನರು ವಿಶಾಲ ಹೃದಯಿಗಳು ಎಂದು ಮುಮ್ತಾಜ್ ಮುಗುಳ್ನಕ್ಕರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net