ಸುಪ್ರೀಂ ಈಗ ಎಲ್ಲರೂ ಗುಂಡೇಟು ತಿನ್ನಬೇಕೆಂದು ಬಯಸುತ್ತದೆಯೇ?; ಮೊಯಿತ್ರಾ ಅರ್ಜಿ ಕುರಿತ ನ್ಯಾಯಾಧೀಶರ ಕಮೆಂಟ್​ಗೆ ಅಭಿಜೀತ್ ಪ್ರಶ್ನೆ | Supreme Court

ಮಹುವಾ ಮೊಯಿತ್ರಾ ಮತ್ತು ಅಭಿಜಿತ್ ದೀಪ್ಕೆ
ಮಹುವಾ ಮೊಯಿತ್ರಾ ಮತ್ತು ಅಭಿಜಿತ್ ದೀಪ್ಕೆ
Published on
ನವದೆಹಲಿ: ದ್ವೇಷ ಭಾಷಣ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ ನ್ಯಾಯಾಧೀಶರು ಮಾಡಿದ ಕಾಮೆಂಟ್​ಗಳ ಕುರಿತು ಶುಕ್ರವಾರ(ಆ. 07) ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದೀಪ್ಕೆ ಪ್ರತಿಕ್ರಿಯಿಸಿದ್ದು, ಸುಪ್ರೀಂಕೋರ್ಟ್ ಈಗ ಎಲ್ಲರೂ ಗುಂಡೇಟು ತಿನ್ನಬೇಕೆಂದು ಬಯಸುತ್ತದೆಯೇ? ಎಂದು ಟೀಕಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಸುಪ್ರೀಂ ಕೋರ್ಟ್ ಈಗ ಎಲ್ಲರೂ ಗುಂಡೇಟು ತಿನ್ನಬೇಕೆಂದು ಬಯಸುತ್ತದೆಯೇ? ನ್ಯಾಯಾಧೀಶರು ವಿರೋಧ ಪಕ್ಷದ ನಾಯಕರ ವಿರುದ್ಧ ಈ ರೀತಿಯ ಹೇಳಿಕೆಗಳನ್ನು ನೀಡಿದಾಗ, ಅದು ಸಾಮಾನ್ಯ ಜನರಿಗೆ ಯಾವ ಭರವಸೆಯನ್ನು ನೀಡುತ್ತದೆ? ಎಂದಿದ್ದಾರೆ.
ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮುಂದೆ ಹಾಜರಾಗುವಂತೆ ಕಲ್ಕತ್ತಾ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿತ್ತು. ಈ ವೇಳೆ ಕೆಲವು ಕಾಮೆಂಟ್​ಗಳನ್ನು ಮಾಡಿತ್ತು.

ನ್ಯಾಯಾಧೀಶರು ಮಾಡಿದ ಕಾಮೆಂಟ್​ಗಳೇನು?

ಮಹುವಾ ಮೊಹಿತ್ರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ದೀಪಂಕರ್ ದತ್ತ ಮತ್ತು ಶೀಲ್ ನಾಗು ಅವರ ನ್ಯಾಯಪೀಠ ವಿಚಾರಣೆ ನಡೆಸಿದ್ದು, ಈ ವೇಳೆ ಟಿಎಂಸಿ ನಾಯಕಿ ಪರವಾಗಿ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ತಮ್ಮ ಕಕ್ಷಿದಾರರಿಗೆ ವರ್ಚುವಲ್ ಆಗಿ ಹಾಜರಾಗಲು ಅವಕಾಶ ನೀಡಬೇಕು ಎಂದು ವಾದಿಸಿದರು.

ವಿಚಾರಣೆಯ ಸಮಯದಲ್ಲಿ, ತೃಣಮೂಲ ಕಾಂಗ್ರೆಸ್ ನಾಯಕಿ ಪರ ಹಾಜರಾದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ತಮ್ಮ ಕಕ್ಷಿದಾರರಿಗೆ ವರ್ಚುವಲ್ ಆಗಿ ಹಾಜರಾಗಲು ಅವಕಾಶ ನೀಡಬೇಕು. ಈ ಹಿಂದೆ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ, ಕೆಲವರು ಮೊಟ್ಟೆ ದಾಳಿ ನಡೆಸಿದ್ದರು. ಅದನ್ನು ಪೊಲೀಸರು ತಡೆಯುವಲ್ಲಿ ವಿಫಲರಾಗಿದ್ದರು ಎಂದು ವಾದಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಪೀಠ, ನೀವು ರಾಜಕೀಯಕ್ಕೆ ಧುಮುಕಿದ ಮೇಲೆ ಈ ಮೊಟ್ಟೆದಾಳಿಗೆ ಹೆದರುತ್ತಿದ್ದಿರಾ? ನಮ್ಮ ಸ್ವಾತಂತ್ರ ಹೋರಾಟಗಾರರು ಬ್ರಿಟಿಷರು ಚಲಾಯಿಸಿದ ಗುಂಡಿಗೆ ತಮ್ಮ ಎದೆಯೊಡ್ಡಿದ್ದರು, ನ್ಯಾಯಾಲಯದ ಮುಂದೆ ಈ ರೀತಿಯ ಅರ್ಜಿಗಳು ಬರಬಾರದು ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net