ಸ್ವಾತಂತ್ರ್ಯ ಹೋರಾಟಗಾರರು ಗುಂಡಿಗೆ ಎದೆಯೊಡ್ಡಿದ್ದರು... ನೀವು ಮೊಟ್ಟೆಗೆ ಹೆದರಿದ್ರಾ? ಮಹುವಾ ಮೊಯಿತ್ರಾ ಅರ್ಜಿ ವಜಾ ಮಾಡಿ ಸುಪ್ರೀಂ ಆದೇಶ! Supreme Court on Mahua Moitra

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್​
ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ದ್ವೇಷ ಭಾಷಣ ಪ್ರಕರಣ
  • ಸ್ವಾತಂತ್ರ್ಯ ಹೋರಾಟಗಾರರು ಗುಂಡಿಗೆ ಎದೆಯೊಡ್ಡಿದ್ದರು, ನೀವು ಮೊಟ್ಟೆಗೆ ಹೆದರಿದ್ರಾ? ಸುಪ್ರೀಂ ತರಾಟೆ
  • ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್​
ನವದೆಹಲಿ:  2026 ರಲ್ಲಿ ದ್ವೇಷ ಭಾಷಣಕ್ಕೆ ಸಂಬಂಧಿಸಿದಂತೆ ಪೊಲೀಸ್​ ವಿಚಾರಣೆಗೆ ತಾವು ಖುದ್ದಾಗಿ ಹಾಜರಾಗಲೂ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದ ಟಿಎಂಸಿ ಸಂಸದೆ, ಮಹುವಾ ಮೊಯಿತ್ರಾ ಅವರಿಗೆ ಸರ್ವೋಚ್ಛ (Supreme Court on Mahua Moitra) ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ.
ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲ್ಕತ್ತಾ ನ್ಯಾಯಾಲಯ, ಸಂಸದೆ ಪೊಲೀಸ್​ ವಿಚಾರಣೆಗೆ ವಿಡಿಯೋ ಕಾಲ್​ ಮೂಲಕವಲ್ಲ, ಭೌತಿಕವಾಗಿ ಹಾಜರಾಗಬೇಕೆಂದು ನಿರ್ದೇಶಿಸಿದ್ದ ತೀರ್ಪನ್ನು ಪ್ರಶ್ನಿಸಿ ಮಹುವಾ ಸುಪ್ರೀ ಕೋರ್ಟ್​ ಮೆಟ್ಟಿಲೇರಿದ್ದು, ಇಂದು ಅರ್ಜಿ ವಜಾವಾಗಿದೆ. 

ನೀವು ಮೊಟ್ಟೆಗೆ ಹೆದರಿದ್ರಾ? 

ಪೊಲೀಸ್​ ವಿಚಾರಣೆಗೆ ತಮಗೆ ಭಾಗಿಯಾಗಲೂ ಜೀವಭಯವಿದೆ. ಕೆಲ ದಿನಗಳ ಹಿಂದೆ ತಮ್ಮ ಲೋಕಸಭಾ ಕ್ಷೇತ್ರಕ್ಕೆ ತೆರಳಿದ್ದಾಗ, ಜನರು ಮತ್ತೆ ಇಲ್ಲಿಗೆ ಬಂದರೆ ಮೊಟ್ಟೆ ಹೊಡೆಯುವುದಾಗಿ ಹೆದರಿಸಿದ್ದರು. ನಂತರ ತಾವು ಬೇಟಿ ನೀಡಿದಾಗ ತಮ್ಮ ಮೇಲೆ ಮೊಟ್ಟೆಯಿಂದ ದಾಳಿ ನಡೆಸಿದ್ದಾರೆ. ಇದನ್ನು ತಡೆಯುವಲ್ಲಿ ಪೊಲೀಸ್​ ವ್ಯವಸ್ಥೆ ಸಂಪೂರ್ಣ ವಿಫಲವಾಗಿತ್ತು, ಹೀಗಾಗಿ ನನಗೆ ಪೊಲೀಸ್​ ವಿಚಾರಣೆಗೆ ನೇರವಾಗಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದರು. 

ಆದರೆ, ಈ ಅರ್ಜಿಯನ್ನು ವಿಚಾರಣೆ ನಡೆಸಿದ ಜಸ್ಟೀಸ್​, ದೀಪಂಕರ್ ದತ್ತ ಮತ್ತು ಶೀಲ್ ನಾಗು ಅವರ ನ್ಯಾಯಪೀಠ, ನೀವು ರಾಜಕೀಯಕ್ಕೆ ಧುಮುಕಿದ ಮೇಲೆ ಈ ಮೊಟ್ಟೆದಾಳಿಗೆ ಹೆದರುತ್ತಿದ್ದಿರಾ? ನಮ್ಮ ಸ್ವಾತಂತ್ರ ಹೋರಾಟಗಾರರು ಬ್ರಿಟಿಷರು ಚಲಾಯಿಸಿದ ಗುಂಡಿಗೆ ತಮ್ಮ ಎದೆಯೊಡ್ಡಿದ್ದರು, ನ್ಯಾಯಾಲಯದ ಮುಂದೆ ಈ ರೀತಿಯ ಅರ್ಜಿಗಳು ಬರಬಾರದು ಎಂದು ಹೇಳಿ ಅರ್ಜಿಯನ್ನು ವಜಾ ಮಾಡಿದ್ದಾರೆ.


ಹೋಟೆಲ್​​ಗೆ ಹೋದಾಗ ಮೊಟ್ಟೆ ಎಸೆತ!

ಜು. 1 ರಂದು ಕೃಷ್ಣಾನಗರದ ಸಂಸದೆ, ಮಹುವಾ ಮೊಯಿತ್ರಾ ತಮ್ಮ ಕ್ಷೇತ್ರದ ರೆಸ್ಟೋರೆಂಟ್​ವೊಂದಕ್ಕೆ ಬೇಟಿ ನೀಡಿದ್ದ ಸಂದರ್ಭದಲ್ಲಿ ರೊಚ್ಚಿಗೆದ್ದ ಜನ ಅವರ ಮೇಲೆ ಮೊಟ್ಟೆ ಎಸೆದಿದ್ದರು. ಈ ಘಟನೆಯನ್ನು ತಮ್ಮ ಮೊಬೈಲ್​ನಲ್ಲಿ ಹಂಚಿಕೊಂಡಿದ್ದ ಸಂಸದೆ, ಬಂಗಾಳದಲ್ಲಿ ಚುನಾವಣೆ ಮುಗಿದ ಮೇಲೆ ಬಿಜೆಪಿ ಗೂಂಡಾಗಿರಿ ಎಲ್ಲೆ ಮೀರಿದ್ದು, ಇಂದು ನನ್ನ ಮೇಲೆ ಮೊಟ್ಟೆ ಎಸೆದಿದ್ದಾರೆ. ಇದನ್ನು ತಡೆಯಬೇಕಿದ್ದ ಪೊಲೀಸರು ಸುಮ್ಮನೆ ನೋಡುತ್ತಾ ನಿಂತಿದ್ದಾರೆಂದು ವಿಡಿಯೋನಲ್ಲಿ ಆರೋಪಿಸಿದ್ದರು, (ಏಜನ್ಸೀಸ್​). ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net