ಆ ಒಂದು ಮಾತು ಕೇಳಿ ಕುಸಿದು ಹೋದೆ!...ಸ್ಮಿತ್ ಮಚ್ಚಾರ್ ಮೇಲಿನ ಹಲ್ಲೆ ಬಗ್ಗೆ ಪತ್ನಿ ಸೋನಲ್ ಹೇಳಿದ್ದಿಷ್ಟು | Smit Machchhars Wife

Smit Machchhars Wife: ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ತಮ್ಮ ಪತಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ನಡೆದ ದಾಳಿಯ ಸುದ್ದಿ ತಿಳಿದಾಗ ತಮಗೆ ತೀವ್ರ ಆಘಾತವಾಯಿತು ಎಂದು ಪತ್ನಿ ಸೋನಲ್ ಮಚ್ಚಾರ್ ತಿಳಿಸಿದ್ದು, ಈ ಘಟನೆಯ ಬಗ್ಗೆ ಕೇಳಿ ತಾನು ತುಂಬಾ ನೊಂದಿದ್ದೆ ಮತ್ತು ಆ ಕ್ಷಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಮಾನಸಿಕ ಸ್ಥಿತಿಯಲ್ಲಿ ತಾನು ಇರಲಿಲ್ಲ ಎಂದು ಹೇಳಿದ್ದಾರೆ.
ಸ್ಮಿತ್ ಮಚ್ಚಾರ್ ಮೇಲಿನ ಹಲ್ಲೆ ಬಗ್ಗೆ ಪತ್ನಿ ಸೋನಲ್ ಹೇಳಿದ್ದಿಷ್ಟು
ಸ್ಮಿತ್ ಮಚ್ಚಾರ್ ಮೇಲಿನ ಹಲ್ಲೆ ಬಗ್ಗೆ ಪತ್ನಿ ಸೋನಲ್ ಹೇಳಿದ್ದಿಷ್ಟು
Published on: 

Smit Machchhars Wife: ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ತಮ್ಮ ಪತಿ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ನಡೆದ ದಾಳಿಯ ಸುದ್ದಿ ತಿಳಿದಾಗ ತಮಗೆ ತೀವ್ರ ಆಘಾತವಾಯಿತು ಎಂದು ಪತ್ನಿ ಸೋನಲ್ ಮಚ್ಚಾರ್ ತಿಳಿಸಿದ್ದು, ಈ ಘಟನೆಯ ಬಗ್ಗೆ ಕೇಳಿ ತಾನು ತುಂಬಾ ನೊಂದಿದ್ದೆ ಮತ್ತು ಆ ಕ್ಷಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಮಾನಸಿಕ ಸ್ಥಿತಿಯಲ್ಲಿ ತಾನು ಇರಲಿಲ್ಲ ಎಂದು ಹೇಳಿದ್ದಾರೆ.

ಎಎನ್ಐ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ತುಂಬಾ ನೊಂದಿದ್ದೆ. ಮತ್ತು ನಾನು ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯುವ ಮಾನಸಿಕ ಸಾಮರ್ಥ್ಯ ನನಗೆ ಇರಲಿಲ್ಲ. ಪಕ್ಕದಲ್ಲಿದ್ದ ತಮ್ಮ ಸ್ನೇಹಿತರು ಮತ್ತು ಕುಟುಂಬದವರು ಸುತ್ತಲೂ ಇದ್ದುದು ಹಾಗೂ ಭಾರತೀಯ ಅಧಿಕಾರಿಗಳಿಂದ ಸಿಕ್ಕ ಕ್ಷಣ ಕ್ಷಣದ ಮಾಹಿತಿ ಈ ಕಠಿಣ ಸಮಯದಲ್ಲಿ ಧೈರ್ಯ ತುಂಬಲು ಸಹಾಯ ಮಾಡಿತು ಎಂದು ಅವರು ತಿಳಿಸಿದರು.

ಸೋನಲ್ ಅವರು ಗುರುವಾರ ಅಬುಧಾಬಿಯ ಆಸ್ಪತ್ರೆಯಲ್ಲಿ ಸ್ಮಿತ್ ಅವರನ್ನು ಭೇಟಿಯಾದರು, ಇದು ಅವರ ಆರೋಗ್ಯದ ಬಗ್ಗೆ ಇದ್ದ ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಸದ್ಯ ತಮ್ಮ ಪತಿ ಬೇಗ ಗುಣಮುಖರಾಗಿ ಮನೆಗೆ ಮರಳುವಂತೆ ಮಾಡುವುದೇ ತಮ್ಮ ಮೊದಲ ಆದ್ಯತೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಮಚ್ಚಾರ್ ಅಂದ್ರೆ ಸೊಳ್ಳೆ ಮಾತ್ರ ಅಲ್ರಪ್ಪಾ!...ದೇಶದ ಹೊಸ ಹೀರೋ ಕ್ಯಾಪ್ಟನ್ ಸ್ಮಿತ್ ಉಪನಾಮದ ಆಸಕ್ತಿದಾಯಕ ಹಿನ್ನೆಲೆ ಇಲ್ಲಿದೆ! | Captain Smit Machchhar

ನೆತನ್ಯಾಹು ಜೊತೆ ಮಾತನಾಡಲು ಸ್ಮಿತ್ ಸೂಕ್ತ ವ್ಯಕ್ತಿ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಚ್ಚಾರ್ ಅವರೊಂದಿಗೆ ಮಾತನಾಡಲು ಬಯಸಿದ್ದಾರೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ಸೋನಲ್, ನಾನು ನೆತನ್ಯಾಹು ಅವರೊಂದಿಗೆ ಮಾತನಾಡಲು ಸಾಧ್ಯವಿಲ್ಲ; ಸ್ಮಿತ್ ಅವರೇ ಸರಿಯಾದ ವ್ಯಕ್ತಿ, ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ನೇರವಾಗಿ ಅವರೊಂದಿಗೆ ಮಾತನಾಡುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ಜೊತೆ ಮಚ್ಚಾರ್​ ಮಾತುಕತೆ!

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್, ದಾಳಿಯ ಸಂದರ್ಭದಲ್ಲಿ ತಾವೆಲ್ಲ ನೆಲದ ಮೇಲೆ ಕುಸಿದುಬಿದ್ದಾಗ ನಡೆದ ರೋಚಕ ಕ್ಷಣಗಳನ್ನು ವಿವರಿಸಿದರು. ತಮ್ಮ 17 ವರ್ಷಗಳ ಹಾರಾಟದ ಅನುಭವವು ವಿಮಾನವು ಕೆಳಗೆ ಇಳಿಯುತ್ತಿದೆ ಎಂಬುದನ್ನು ಅರಿಯಲು ನೆರವಾಯಿತು ಎಂದು ತಿಳಿಸಿದ ಅವರು, ತಮ್ಮ ಮೇಲೆ ಸತತವಾಗಿ ಏಟುಗಳು ಬೀಳುತ್ತಿದ್ದರೂ, ಇದು ಕೊನೆಯ ಪ್ರಯತ್ನ ಸ್ಮಿತ್, ಬಾಗಿಲು ಅಲ್ಲೇ ಇದೆ ಎಂದು ಮನಸ್ಸಿನಲ್ಲಿ ಅಂದುಕೊಂಡು ಕಾಕ್‌ಪಿಟ್ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದೆ ಎಂದು ಪ್ರಧಾನಿಗೆ ತಿಳಿಸಿದರು.

ತಮ್ಮ ಪ್ರಾಣ ಉಳಿಸಿಕೊಳ್ಳುವುದರ ಜೊತೆಗೆ, ಪ್ರಯಾಣಿಕರು ಸಾವನ್ನಪ್ಪಲು ಬಿಡುವುದಿಲ್ಲ ಎಂಬ ದೃಢಸಂಕಲ್ಪವೇ ಆ ಕ್ಷಣದಲ್ಲಿ ತಮಗೆ ಸ್ಪೂರ್ತಿಯಾಗಿತ್ತು ಎಂದರು. ಸ್ಮಿತ್ ಮಚ್ಚಾರ್ ಅವರ ಈ ಸಾಹಸವನ್ನು ಪ್ರಧಾನಿ ಮೋದಿ ಕೊಂಡಾಡಿದ್ದು, ಅವರ ಧೈರ್ಯ, ತಾಳ್ಮೆ ಮತ್ತು ಸಮಯಪ್ರಜ್ಞೆ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಶ್ಲಾಘಿಸಿದರು.

Also Read
ಭೀಕರ ಪರಿಸ್ಥಿತಿಯಲ್ಲಿ ಮಗನ ಒಳಗೆ ಕೆಲಸ ಮಾಡಿದ್ದ ಆ ರಹಸ್ಯ ಶಕ್ತಿ ಯಾವುದು...? ಸಾಹಸಿ ಪೈಲಟ್ ತಂದೆಯ ಹೆಮ್ಮೆಯ ನುಡಿಗಳು ಹೀಗಿವೆ! | Smit Machchhar Father
ಸ್ಮಿತ್ ಮಚ್ಚಾರ್ ಮೇಲಿನ ಹಲ್ಲೆ ಬಗ್ಗೆ ಪತ್ನಿ ಸೋನಲ್ ಹೇಳಿದ್ದಿಷ್ಟು

ಘಟನೆಯ ಹಿನ್ನಲೆ!

ಸೆಪ್ಟೆಂಬರ್ 30 ರಂದು ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ವಿಮಾನದಲ್ಲಿ ಈ ಭದ್ರತಾ ಬಿಕ್ಕಟ್ಟು ಸಂಭವಿಸಿತ್ತು. ಒಮಾನ್ ಮೂಲದ ಸಹ-ಪೈಲಟ್ ವಿಮಾನವನ್ನು ಕೆಳಗೆ ತರುವ ಉದ್ದೇಶದಿಂದ ಕಮಾಂಡರ್ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದರಿಂದ ವಿಮಾನವು ಕೇವಲ ಎರಡು ನಿಮಿಷಗಳಲ್ಲಿ ಸರಿಸುಮಾರು 16,000 ಅಡಿಗಳಷ್ಟು ಕೆಳಗೆ ಧುಮುಕಿತ್ತು. ತೀವ್ರ ಗಾಯಗಳಾಗಿದ್ದರೂ ಮಚ್ಚಾರ್ ದಾಳಿಕೋರನನ್ನು ಪ್ರತಿರೋಧಿಸಿದರು. ತಕ್ಷಣ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರು ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರನನ್ನು ನಿಯಂತ್ರಿಸಿದರು. ಬಳಿಕ ಕರ್ತವ್ಯದಲ್ಲಿಲ್ಲದ ಇಬ್ಬರು ವಾಯುಯಾನ ತಜ್ಞರ ಸಹಾಯದಿಂದ ವಿಮಾನವನ್ನು ಸೌದಿ ಅರೇಬಿಯಾದ ತಬುಕ್‌ನಲ್ಲಿ ಸುರಕ್ಷಿತವಾಗಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಇದರಿಂದ ವಿಮಾನದಲ್ಲಿದ್ದ ಎಲ್ಲಾ 180 ಮಂದಿ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದರು.

ಈ ಘಟನೆಯ ಕುರಿತು ಅಂತರರಾಷ್ಟ್ರೀಯ ತನಿಖೆ ಮುಂದುವರಿದಿದ್ದು, ದಾಳಿಕೋರನನ್ನು ಯುಎಇಗೆ ಕರೆತರಲಾಗಿದೆ. ಈ ದಾಳಿಯ ಹಿಂದೆ ಹೊರಗಿನವರ ಕೈವಾಡವಿದೆಯೇ ಎಂಬುದನ್ನು ಪತ್ತೆಹಚ್ಚಲು ಇಸ್ರೇಲಿ ತನಿಖಾ ಸಿಬ್ಬಂದಿಯನ್ನು ಸಹ ಯುಎಇಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net