ಭೀಕರ ಪರಿಸ್ಥಿತಿಯಲ್ಲಿ ಮಗನ ಒಳಗೆ ಕೆಲಸ ಮಾಡಿದ್ದ ಆ ರಹಸ್ಯ ಶಕ್ತಿ ಯಾವುದು...? ಸಾಹಸಿ ಪೈಲಟ್ ತಂದೆಯ ಹೆಮ್ಮೆಯ ನುಡಿಗಳು ಹೀಗಿವೆ! | Smit Machchhar Father

ನವದೆಹಲಿ: ಮಗ ಸ್ಮಿತ್ ಮಚ್ಚಾರ್ ಮಾಡಿದ ಸಾಹಸದ ಸುದ್ದಿ ತಿಳಿಯುತ್ತಿದ್ದಂತೆ ಅವರ ತಂದೆ-ತಾಯಿಯ ಮೊದಲ ಪ್ರತಿಕ್ರಿಯೆ ಭಯವಾಗಿತ್ತು. ಆ ಆಘಾತದಿಂದ ಬೇಗನೆ ಚೇತರಿಸಿಕೊಂಡ ಅವರು, ಕೂಡಲೇ ದೇವಸ್ಥಾನಕ್ಕೆ ಧಾವಿಸಿ ಪ್ರಾರ್ಥನೆ ಮಾಡಿದರು ಎಂಬ ವಿಷಯವನ್ನು ಪೈಲಟ್ ತಂದೆ (Smit Machchhar Father) ಭೂಪೇಂದ್ರ ಮಚ್ಚಾರ್ ಅವರು ತಮ್ಮ ಜೀವನದ ಅತ್ಯಂತ ಕಷ್ಟದ ಗಂಟೆಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.
ಭೀಕರ ಪರಿಸ್ಥಿತಿಯಲ್ಲಿ ಮಗನ ಒಳಗೆ ಕೆಲಸ ಮಾಡಿದ್ದ ಆ ರಹಸ್ಯ ಶಕ್ತಿ ಯಾವುದು...? ಸಾಹಸಿ ಪೈಲಟ್ ತಂದೆಯ ಹೆಮ್ಮೆಯ ನುಡಿಗಳು ಹೀಗಿವೆ! | Smit Machchhar Father
Published on: 

ನವದೆಹಲಿ: ಮಗ ಸ್ಮಿತ್ ಮಚ್ಚಾರ್ ಮಾಡಿದ ಸಾಹಸದ ಸುದ್ದಿ ತಿಳಿಯುತ್ತಿದ್ದಂತೆ ಅವರ ತಂದೆ-ತಾಯಿಯ ಮೊದಲ ಪ್ರತಿಕ್ರಿಯೆ ಭಯವಾಗಿತ್ತು. ಆ ಆಘಾತದಿಂದ ಬೇಗನೆ ಚೇತರಿಸಿಕೊಂಡ ಅವರು, ಕೂಡಲೇ ದೇವಸ್ಥಾನಕ್ಕೆ ಧಾವಿಸಿ ಪ್ರಾರ್ಥನೆ ಮಾಡಿದರು ಎಂಬ ವಿಷಯವನ್ನು ಪೈಲಟ್ ತಂದೆ (Smit Machchhar Father) ಭೂಪೇಂದ್ರ ಮಚ್ಚಾರ್ ಅವರು ತಮ್ಮ ಜೀವನದ ಅತ್ಯಂತ ಕಷ್ಟದ ಗಂಟೆಗಳನ್ನು ಮಾಧ್ಯಮದ ಮುಂದೆ ಹಂಚಿಕೊಂಡಿದ್ದಾರೆ.

ಎನ್​ಡಿಟಿವಿ ಜೊತೆ ಮಾತನಾಡಿದ ಸ್ಮಿತ್​ ತಂದೆ ಭೂಪೇಂದ್ರ ಮಚ್ಚಾರ್, ಎಲ್ಲಾ ಪೋಷಕರಂತೆ, ಮೊದಲು ಅವರ ಮನಸ್ಸಿಗೆ ಬಂದ ಆಲೋಚನೆ ಆಘಾತ ಮತ್ತು ಭಯದ್ದು. ತಕ್ಷಣವೇ ನಾವು ದೇವರ ಮುಂದೆ ದೀಪ ಹಚ್ಚಿ ಪ್ರಾರ್ಥಿಸಿದೆವು ಎಂದು ಅವರು ತಿಳಿಸಿದರು.

ದೇವರ ಆಶೀರ್ವಾದವಲ್ಲದೇ ಮತ್ತೇನು ಇಲ್ಲ!

ಮುಂದುವರೆದು ಮಾತನಾಡಿದ ಭೂಪೇಂದ್ರ, ಯಾರೂ ಈ ರೀತಿಯ ಪರಿಸ್ಥಿತಿಗಾಗಿ ನಿರ್ದಿಷ್ಟವಾಗಿ ತರಬೇತಿ ಪಡೆದಿರುವುದಿಲ್ಲ. ಆದರೆ ಇದು ದೇವರ ಕೃಪೆ. ಕೆಲವು ಆಂತರಿಕ ಶಕ್ತಿ ಅವನಿಗೆ ಮಾರ್ಗದರ್ಶನ ನೀಡಿತು. ಬಿಕ್ಕಟ್ಟು ಎದುರಾದಾಗ, ಅವನು ತನ್ನ ಪ್ರತಿಯೊಂದು ಶಕ್ತಿಯನ್ನು ಬಳಸಿ ಅದನ್ನು ಎದುರಿಸಿದ. ಇದು ಎಲ್ಲಕ್ಕಿಂತ ಹೆಚ್ಚಾಗಿ ದೇವರ ಆಶೀರ್ವಾದ ಎಂಬುದು ನಮ್ಮ ನಂಬಿಕೆ ಎಂದು ಅವರು ಹೇಳಿದರು. ಗಾಯಗೊಂಡ ಪುತ್ರ ಸ್ಮಿತ್​ ಚೇತರಿಸಿಕೊಳ್ಳುತ್ತಿದ್ದು, ಆದರೆ ಅವರ ಗಾಯಗಳು ಸಂಪೂರ್ಣವಾಗಿ ಗುಣಮುಖವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ತಿಳಿಸಿದರು.

ಈ ಗಾಯಗಳು ಗುಣಮುಖವಾಗಲು ಸಮಯ ಹಿಡಿಯುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಅವನ ತಲೆಗೆ ಮತ್ತು ಎರಡೂ ಕೈಗಳಿಗೆ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಾಕಷ್ಟು ಹೊಲಿಗೆಗಳನ್ನು ಹಾಕಲಾಗಿದ್ದು, ಸದ್ಯಕ್ಕೆ ಎಲ್ಲಾ ನಿಖರವಾದ ವಿವರಗಳನ್ನು ನೀಡಲು ಸಾಧ್ಯವಿಲ್ಲ, ಆದರೆ ಗಾಯಗಳು ಹೆಚ್ಚಿದ್ದು, ಚೇತರಿಸಿಕೊಳ್ಳಲು ಸ್ವಲ್ಪ ಸಮಯಾವಕಾಶ ಬೇಕಾಗುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ನನ್ನನ್ನು ಕೊಂದುಬಿಡಿ ಎಂದಿದ್ದ ಸಹ-ಪೈಲಟ್​!...ಫ್ಲೈದುಬೈ ವಿಮಾನ ದಾಳಿಯ ಹಿಂದೆ ಇರಾನ್ ಕೈವಾಡವಿದೆಯಾ...? ನೆತನ್ಯಾಹು ಸ್ಫೋಟಕ ಹೇಳಿಕೆ! | Benjamin Netanyahu

ಸ್ಮಿತ್ ಮಚ್ಚಾರ್ ತಮ್ಮ ಕೆಲಸವನ್ನು ತುಂಬಾನೇ ಇಷ್ಟಪಡುತ್ತಾರೆ ಮತ್ತು ಸದಾ ಇತರ ಪೈಲಟ್‌ಗಳಿಗೆ ಸಹಾಯ ಮಾಡುತ್ತಿರುತ್ತಾರೆ ಎಂದು ತಿಳಿಸಿರುವ ಅವರ ತಂದೆ, ಹಾರಾಟವೆಂದರೆ ಅವ್ನಿಗೆ ಹೆಂಡತಿಯಿದ್ದಂತೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಸುಮಾರು 17 ವರ್ಷಗಳಿಂದ ವಿಮಾನ ಹಾರಿಸುತ್ತಿರುವ ಅವರು, ನೂರಾರು ಪೈಲಟ್‌ಗಳಿಗೆ ಸಂದರ್ಶನ ಹಾಗೂ ವಾಯುಯಾನದ ವಿಷಯಗಳಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಕೆಲಸವೇ ಅವರಿಗೆ ಸರ್ವಸ್ವವೂ ಆಗಿದ್ದು, ಅತ್ಯುತ್ತಮವಾಗಿ ವಿಮಾನ ಹಾರಿಸುವುದನ್ನು ಬಿಟ್ಟು ಬೇರೆ ಯಾವುದೇ ಯೋಚನೆ ಅವರಿಗಿಲ್ಲ ಎಂದು ತಿಳಿಸಿದ್ದಾರೆ.

Also Read
ಮಚ್ಚಾರ್ ಅಂದ್ರೆ ಸೊಳ್ಳೆ ಮಾತ್ರ ಅಲ್ರಪ್ಪಾ!...ದೇಶದ ಹೊಸ ಹೀರೋ ಕ್ಯಾಪ್ಟನ್ ಸ್ಮಿತ್ ಉಪನಾಮದ ಆಸಕ್ತಿದಾಯಕ ಹಿನ್ನೆಲೆ ಇಲ್ಲಿದೆ! | Captain Smit Machchhar
ಭೀಕರ ಪರಿಸ್ಥಿತಿಯಲ್ಲಿ ಮಗನ ಒಳಗೆ ಕೆಲಸ ಮಾಡಿದ್ದ ಆ ರಹಸ್ಯ ಶಕ್ತಿ ಯಾವುದು...? ಸಾಹಸಿ ಪೈಲಟ್ ತಂದೆಯ ಹೆಮ್ಮೆಯ ನುಡಿಗಳು ಹೀಗಿವೆ! | Smit Machchhar Father

ಮಗನ ಆರೋಗ್ಯ ಮತ್ತು ಯೋಗಕ್ಷೇಮವೇ ಮುಖ್ಯ

ಅವನು ಕಾಕ್‌ಪಿಟ್ ಒಳಗೆ ಬಿದ್ದಾಗ, ಏನು ಮಾಡಬೇಕೋ ಅದನ್ನು ಅಲ್ಲಿಯೇ ಮಾಡಬೇಕು, ಇಲ್ಲದಿದ್ದರೆ ಯಾರೂ ಉಳಿಯುವುದಿಲ್ಲ ಎಂದುಕೊಂಡನು. ಹೋರಾಡುವುದೊಂದೇ ದಾರಿ ಎಂದು ಯೋಚಿಸಿ ಕ್ರಮ ಕೈಗೊಂಡು ಯಶಸ್ವಿಯಾದನು. ತನ್ನ ಹಿಂದೆ ಇರುವ ಯಾವುದೇ ಪ್ರಯಾಣಿಕರು ಪ್ರಾಣ ಕಳೆದುಕೊಳ್ಳಬಾರದು ಎಂಬುದೇ ಅವನ ಮನಸ್ಸಿನಲ್ಲಿ ಮುಖ್ಯವಾಗಿತ್ತು, ದೇವರು ಅವನ ಆ ಒಳ್ಳೆಯ ಉದ್ದೇಶಕ್ಕೆ ಬೆಂಬಲ ನೀಡಿದನು ಎಂದು ತಂದೆ ಹೆಮ್ಮೆಯಿಂದ ಸ್ಮರಿಸಿದ್ದಾರೆ.

ಮಗನ ಬಗ್ಗೆ ಹೆಮ್ಮೆಯಿದ್ದರೂ, ತಮಗೆ ಅವನ ಆರೋಗ್ಯವೇ ಮುಖ್ಯ ಎಂದಿರುವ ತಂದೆ, ನಾವು ಬಹಳ ಸರಳ ಜನರು. ಎಲ್ಲರೂ ಇದನ್ನು ಹೆಮ್ಮೆಯ ಕ್ಷಣ ಎನ್ನುತ್ತಿದ್ದಾರೆ, ಆದರೆ ನಮಗೆ ಮತ್ತು ಅವನ ಹೆಂಡತಿಗೆ ಮೊದಲು ಮಗನ ಆರೋಗ್ಯ ಮತ್ತು ಯೋಗಕ್ಷೇಮವೇ ಮುಖ್ಯ ಎಂದಿದ್ದಾರೆ. ಮಗ ಸಂಪೂರ್ಣವಾಗಿ ಗುಣಮುಖನಾದ ಬಳಿಕ ಮತ್ತೆ ತನ್ನ ಕೆಲಸಕ್ಕೆ ಮರಳಲಿದ್ದಾನೆ ಎಂದು ಭೂಪೇಂದ್ರ ಮಚ್ಚಾರ್ ತಿಳಿಸಿದ್ದಾರೆ.

ಅಂತಿಮವಾಗಿ ಯುವಜನತೆಗೆ ಸಂದೇಶ ನೀಡಿರುವ ಅವರು, ಸ್ಮಿತ್‌ನ ಮೌಲ್ಯಗಳು ಹಾಗೂ ನಮ್ಮ ಕುಟುಂಬದ ಹಿನ್ನೆಲೆಯನ್ನು ನೋಡಿ ಜೆನ್ ಜೀ ಮತ್ತು ಯುವಕರಿಗೆ ನಾನು ಹೇಳುವುದೇನೆಂದರೆ, ಪೋಷಕರಿಗೆ ಗೌರವ ಕೊಟ್ಟು ಸರಳ ಜೀವನ ನಡೆಸಿ. ನಿಮ್ಮ ಆಲೋಚನೆ ಮತ್ತು ಕೆಲಸಗಳು ಒಳ್ಳೆಯದಾಗಿದ್ದರೆ, ಕಷ್ಟದ ಸಮಯದಲ್ಲಿ ದೇವರು ನಿಮ್ಮ ಜತೆ ನಿಲ್ಲುತ್ತಾನೆ. ಸತ್ಯ ಹಾಗೂ ಪ್ರಾಮಾಣಿಕತೆ ಯಾವಾಗಲೂ ಗೆಲ್ಲುತ್ತದೆ, ಸಮಗ್ರತೆಯನ್ನು ಕಾಪಾಡಿಕೊಳ್ಳುವುದೇ ನಿಜವಾದ ಯಶಸ್ಸು ಎಂದು ತಿಳಿಸಿದ್ದಾರೆ.

ಸ್ಮಿತ್​ ಮಾಡಿದ್ದೇನು..?

ವಿಮಾನದ ಕಾಕ್‌ಪಿಟ್ ಒಳಗೆ ಒಮಾನ್ ಮೂಲದ ಸಹ-ಪೈಲಟ್ ಸ್ಮಿತ್ ಮಚ್ಚಾರ್ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದಾಗ, ವಿಮಾನವು ಕೆಳಗೆ ಧುಮುಕಿತು. ಈ ಆಪತ್ತಿನಲ್ಲಿ ಎಚ್ಚೆತ್ತುಕೊಂಡ ಅವರು, ನಾವೆಲ್ಲರೂ ಬದುಕಬೇಕಾದರೆ ತಕ್ಷಣವೇ ಏನಾದರೂ ಮಾಡಬೇಕು ಎಂದು ಅರಿತುಕೊಂಡರು. ಗಂಭೀರವಾಗಿ ಗಾಯಗೊಂಡಿದ್ದರೂ ಲೆಕ್ಕಿಸದೆ ಕಾಕ್‌ಪಿಟ್ ಬಾಗಿಲು ತೆರೆದು ಸಿಬ್ಬಂದಿ ಹಾಗೂ ಪ್ರಯಾಣಿಕರಿಗೆ ದಾಳಿಯ ಮುನ್ನೆಚ್ಚರಿಕೆ ನೀಡಿದರು. ತಕ್ಷಣವೇ ಇತರ ಪ್ರಯಾಣಿಕರು ದಾಳಿಕೋರನನ್ನು ಹಿಡಿದು ಬಗ್ಗುಬಡಿದರು, ಹಾಗೂ ಕರ್ತವ್ಯದಲ್ಲಿಲ್ಲದ ಇಬ್ಬರು ಪೈಲಟ್‌ಗಳು ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net