

ಬಂಗಾಳ ಕೊಲ್ಲಿಯಲ್ಲಿ ಅರ್ನಬ್ ಚಂಡಮಾರುತ ಸೃಷ್ಟಿ.
ಆಂಧ್ರಪ್ರದೇಶ, ಒಡಿಶಾ ಮತ್ತು ಪುದುಚೇರಿಯಲ್ಲಿ ಭಾರಿ ಮಳೆ.
ಮರಗಿಡಗಳು ಬುಡಮೇಲು, ಶಾಲಾ ಕಾಲೇಜುಗಳಿಗೆ ರಜೆ.
ಬಂಗಾಳ ಕೊಲ್ಲಿಯಲ್ಲಿ ತೀವ್ರ ಸ್ವರೂಪದ ಅರ್ನಬ್ ಚಂಡಮಾರುತ ಸೃಷ್ಟಿಯಾಗಿದ್ದು, ಆಂಧ್ರಪ್ರದೇಶ, ಒಡಿಶಾ ಮತ್ತು ಪುದುಚೇರಿಯ ಕರಾವಳಿ ತೀರದ ನಡುವೆ ಅಪ್ಪಳಿಸಿದೆ. ಭೂ ಕುಸಿತ ಪ್ರಕ್ರಿಯು ಮರು ಗಂಟೆಗಳ ಕಾಲ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಕೊಟ್ಟಿದೆ.
ಗಂಟೆಗೆ 125-135 ಕಿ.ಮೀ ವೇಗದಲ್ಲಿ ಬೀಸಿದ ಗಾಳಿಯು ಗರಿಷ್ಠ 150 ಕಿಲೋ ಮೀಟರ್ ವೇಗವನ್ನು ತಲುಪಿರುವ ಕಾರಣ, ಚಂಡಮಾರುತದ ಅಬ್ಬರಕ್ಕೆ ಆಂಧ್ರಪ್ರದೇಶ ಮತ್ತು ಯಾನಂ, ಒಡಿಶಾ, ತೆಲಂಗಾಣ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡಿನ ಕರಾವಳಿ ಭಾಗದಲ್ಲಿ ವರುಣಾರ್ಭಟ ಜೋರಾಗಿದ್ದು, ಜನ ಹೈರಾಣಾಗಿದ್ದಾರೆ.
ಅನಕಾಪಲ್ಲಿ, ವಿಶಾಖಪಟ್ಟಣ, ಕಾಕಿನಾಡ ಮತ್ತು ಕೋನಸೀಮೆ ಜಿಲ್ಲೆಗಳ ವಿವಿಧೆಡೆ ಭಾರೀ ಮಳೆಯಾಗಿದೆ. ವಿಶಾಖಪಟ್ಟಣಂ, ಕಾಕಿನಾಡ, ಕೋನಸೀಮ ಮತ್ತು ಪಶ್ಚಿಮ ಗೋದಾವರಿ ಪ್ರದೇಶಗಳಲ್ಲಿ ಭಾರೀ ಮಳೆ ಹಾಗೂ ಬಿರುಗಾಳಿ ಬೀಸುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಬಿರುಗಾಳಿಯ ಪ್ರಭಾವದಿಂದ ಹಲವೆಡೆ ಮರಗಳು ಧರೆಗುರುಳಿವೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಅರ್ನಬ್ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿ ಅ.28ರಂದು ಬುಧವಾರ ನಸುಕಿನ ಮುಂಜಾನೆ ಸುಮಾರು 1:20 ರ ಸುಮಾರಿಗೆ ಆಂಧ್ರಪ್ರದೇಶದ ಕರಾವಳಿ ಕಾಕಿನಾಡ ತೀವ್ರ ಸ್ವರೂಪ ಪಡೆಯಿತು. ಈ ಚಂಡಮಾರುತವು ಬಾಪಟ್ಲ ಮತ್ತು ವಿಶಾಖಪಟ್ಟಣದ ನಡುವೆ, ಯಾನಂನ ದಕ್ಷಿಣಕ್ಕೆ ಹತ್ತಿರದಲ್ಲಿ ಕರಾವಳಿಯನ್ನು ದಾಟಿದ್ದು ಗಂಟೆಗೆ 125-135 ಕಿ.ಮೀ ವೇಗದಲ್ಲಿ (ಗರಿಷ್ಠ 150 ಕಿ.ಮೀ ವರೆಗಿನ ವೇಗದ ಗಾಳಿಯೊಂದಿಗೆ) ಅಪ್ಪಳಿಸಿದೆ. ಭೂಕ ಕುಸಿತ ಪ್ರಕ್ರಿಯೆ ಮೂರು ಗಂಟೆಗಳ ಕಾಲ ಮುಂದುವರೆಯಲಿದ್ದು, ಕ್ರಮೇಣವಾಗಿ ಚಂಡಮಾರುತವು ವಾಯುವ್ಯ ದಿಕ್ಕಿನಿಂದ ಉತ್ತರ ವಾಯು ತೆಲಂಗಾಣದತ್ತ ಚಲಿಸುವ ವೇಳೆಗೆ ದುರ್ಬಲವಾಗಲಿದೆ ಎಂದು ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಕೋನಸೀಮಾ, ಕಾಕಿನಾಡ ಮತ್ತು ಅನಾಕಪಲ್ಲಿ ಸೇರಿದಂತೆ ಆಂಧ್ರಪ್ರದೇಶದ ಕರಾವಳಿ ಪ್ರದೇಶದ ಹಲವು ಕಡೆ ನೂರಾರು ಮರಗಳು, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದೆ. ಎರಡೂ ರಾಜ್ಯಗಳಲ್ಲಿ ಇಲ್ಲಿಯವರೆಗೆ ಯಾವುದೇ ಜೀವಹಾನಿ ಸಂಭವಿಸಿಲ್ಲ. ವಿದ್ಯುತ್ ಸರಬರಾಜು ಅಸ್ತವ್ಯಸ್ತಗೊಂಡಿದೆ.
ವಿಶಾಖಪಟ್ಟಣದ ಬೀಚ್ ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳು ಮುಳುಗಡೆಯಾಗಿದೆ. ಹೆದ್ದಾರಿ ರಸ್ತೆಯಲ್ಲಿ ಮರಗಳು ಉರುಲಿ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ವಿಶಾಖಪಟ್ಟಣದಲ್ಲಿ ಮಂಗಳವಾರ ಮುಂಜಾನೆಯಿಂದ ಬುಧವಾರ ಮಧ್ಯರಾತ್ರಿಯವರೆಗೂ 216.9 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ಹಂಚಿಕೊಂಡಿದೆ. ಕಳಿಂಗಪಟ್ಟಣದಲ್ಲಿ 147 ಮಿ.ಮೀ, ಕಾಕಿನಾಡದಲ್ಲಿ 118 ಮತ್ತು ಮಚಲಿಪಟ್ಟಣದಲ್ಲಿ 115 ಮಿ.ಮೀ ಮಳೆಯಾಗಿದೆ.
ಇನ್ನೂ ಕರಾವಳಿ ತೀರದಲ್ಲಿ ಬೃಹತ್ ಎತ್ತರದ ಅಲೆಗಳು 1.5 ರಿಂದ 2.5 ಮೀಟರ್ ಎತ್ತರದಲ್ಲಿ ಅಪ್ಪಳಿಸುತ್ತಿದೆ. ಯಾನಂ ಸಮೀಪದ ಸವತ್ರಿ ನಗರದಲ್ಲಿದ್ದ ಪರಿಹಾರ ಕೇಂದ್ರಕ್ಕೆ ಸಮುದ್ರದ ನೀರು ನುಗ್ಗಿದೆ. ಒಡಿಶಾದ ಗಂಜಾಂ, ರಾಯಗಡ, ಬಾಲಸೋರ್ ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ ನೀಡಲಾಗಿದೆ.
ಆಂಧ್ರಪ್ರದೇಶದಲ್ಲಿ 89,000ಕ್ಕೂ ಹೆಚ್ಚು ಜನರನ್ನು 2,000ಕ್ಕೂ ಹೆಚ್ಚು ಚಂಡಮಾರುತ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವಲೋಕಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನೂ ಒಡಿಶಾದ 16 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಶ್ರೀ ಲಂಕಾದಲ್ಲಿಯೂ ಅರ್ನಬ್ ಚಂಡಮಾರುತದ ಬಿಸಿ ತಟ್ಟಿದೆ ಎನ್ನುವ ವಿಡಿಯೋಗಳನ್ನು ಎಕ್ಸ್ನಲ್ಲಿ ಹಂಚಿಕೊಳ್ಳಲಾಗಿದೆ, (ಏಜೆನ್ಸೀಸ್).