ಸಿಜೆಐ ಸಭೆಗೆ ಅನುಮತಿ ನೀಡದಿರಲು ಕಾರಣವಾಯಿತು ಆ ಒಂದು ಕಾನೂನು ಅಸ್ತ್ರ: ಏನಿದು ಸೆಪರೇಷನ್ ಆಫ್ ಪವರ್ಸ್..? | CJI SuryaKant

ನವದೆಹಲಿ: ಸಂಸತ್ತಿನ ಎರಡು ಮನೆಯ ವಿರೋಧ ಪಕ್ಷಗಳ ನಾಯಕರ ಭೇಟಿಯನ್ನೇ ಸಾರಾಸಗಟಾಗಿ ತಳ್ಳಿಹಾಕಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (CJI SuryaKant) ಅವರ ಆ ದಿಢೀರ್ ನಿರ್ಧಾರದ ಹಿಂದಿನ ಅಸಲಿ ಮರ್ಮವೇನು...? ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಈ ನಿಲುವಿನ ಹಿಂದೆ ಸಂವಿಧಾನದ ಯಾವ ಕಟ್ಟುನಿಟ್ಟಿನ ನಿಯಮ ನಿಂತಿದೆ ಎಂಬ ರೋಚಕ ರಹಸ್ಯ ಈಗ ಹೊರಬಿದ್ದಿದೆ.
ಸಿಜೆಐ ಸಭೆಗೆ ಅನುಮತಿ ನೀಡದಿರಲು ಕಾರಣವಾಯಿತು ಆ ಒಂದು ಕಾನೂನು ಅಸ್ತ್ರ: ಏನಿದು ಸೆಪರೇಷನ್ ಆಫ್ ಪವರ್ಸ್..? | CJI SuryaKant
Published on: 

ನವದೆಹಲಿ: ಸಂಸತ್ತಿನ ಎರಡು ಮನೆಯ ವಿರೋಧ ಪಕ್ಷಗಳ ನಾಯಕರ ಭೇಟಿಯನ್ನೇ ಸಾರಾಸಗಟಾಗಿ ತಳ್ಳಿಹಾಕಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ (CJI SuryaKant) ಅವರ ಆ ದಿಢೀರ್ ನಿರ್ಧಾರದ ಹಿಂದಿನ ಅಸಲಿ ಮರ್ಮವೇನು...? ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಈ ನಿಲುವಿನ ಹಿಂದೆ ಸಂವಿಧಾನದ ಯಾವ ಕಟ್ಟುನಿಟ್ಟಿನ ನಿಯಮ ನಿಂತಿದೆ ಎಂಬ ರೋಚಕ ರಹಸ್ಯ ಈಗ ಹೊರಬಿದ್ದಿದೆ.

ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮನವಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ತಿರಸ್ಕರಿಸಲು ಪ್ರಮುಖ ಕಾರಣವೇನು ಎಂಬುದರ ಕುರಿತು ಮಹತ್ವದ ವಿವರಗಳು ಹೊರಬಂದಿದ್ದು, ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯ ಹಂತದಲ್ಲಿರುವ ವಿಷಯಗಳ ಕುರಿತು ಸಭೆ ನಡೆಸುವುದು ಅಧಿಕಾರ ಪ್ರತ್ಯೇಕತೆಯ ತತ್ವಕ್ಕೆ ವಿರುದ್ಧವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇಂಡಿಯಾ ಒಕ್ಕೂಟದ ವತಿಯಿಂದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧದ ಬೇಡಿಕೆಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸಲು ಸಿದ್ಧತೆ ನಡೆಸಿರುವ ಸಂದರ್ಭದಲ್ಲಿ, ಮನವಿ ಪತ್ರವನ್ನು ಸಲ್ಲಿಸಲು ಸೋಮವಾರ ಭೇಟಿಗೆ ಅನುಮತಿ ಕೋರಿದ್ದ ಕಾಂಗ್ರೆಸ್ ನಾಯಕರ ಮನವಿಯನ್ನು ಸಿಜೆಐ ತಿರಸ್ಕರಿಸಿದ್ದರು. ಈ ಪತ್ರ ಇಂಡಿಯಾ ಟುಡೆಗೆ ಲಭ್ಯವಾಗಿದೆ ಎಂದು ವರದಿಯಾಗಿದ್ದು, ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಇದನ್ನೂ ಓದಿ:ಜ್ಞಾನೇಶ್ ಕುಮಾರ್ ರಕ್ಷಿಸುವ ಮೂಲಕ ಕೇಂದ್ರ ಸರ್ಕಾರ ದೊಡ್ಡ ತಪ್ಪು ಮಾಡ್ತಿದೆ: ನಮ್ಮ ಪ್ರತಿಭಟನೆಯಿಂದ ಸಿಇಸಿಗೆ ನಿದ್ದೆ ಬರ್ತಿಲ್ಲ ಎಂದ ರಾಹುಲ್​ ಗಾಂಧಿ! | Rahul Gandhi

ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಯಲ್ಲದೆ, ಮತ ಕಳ್ಳತನಕ್ಕೆ ಅಂತ್ಯ ಹಾಡುವುದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ನಿಲ್ಲಿಸುವುದು ಮತ್ತು ಬ್ಯಾಲೆಟ್​ ಪೇಪರ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರುವುದನ್ನು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಏನಿದು ಸೆಪರೇಷನ್ ಆಫ್ ಪವರ್ಸ್..?

ನಿನ್ನೆ ಬರೆದ ಪತ್ರದಲ್ಲಿ, ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಎತ್ತಿರುವ ಸಮಸ್ಯೆಗಳು ಈಗಾಗಲೇ ನ್ಯಾಯಾಲಯದ ವಿಚಾರಣೆಯ ಹಂತದಲ್ಲಿವೆ ಎಂದು ಸಿಜೆಐ ಸೂರ್ಯಕಾಂತ್ ಅವರು ತಿಳಿಸಿದ್ದು, ಬಾಕಿ ಇರುವ ಪ್ರಕರಣಗಳ ಕುರಿತು ಸಭೆಯಲ್ಲಿ ಚರ್ಚಿಸುವುದು ನ್ಯಾಯಾಂಗದ ನಡವಳಿಕೆಗೆ ಸರಿಹೊಂದುವುದಿಲ್ಲ. ಇದು ಭಾರತೀಯ ಸಂವಿಧಾನದ ಮೂಲ ರಚನಾ ಸಿದ್ಧಾಂತದ ಅಂತರ್ಗತ ಅಂಶವಾದ ಅಧಿಕಾರ ಪ್ರತ್ಯೇಕತೆಯ ತತ್ವವನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಪತ್ರದಲ್ಲಿ ಮತ್ತಷ್ಟು ಸ್ಪಷ್ಟನೆ ನೀಡಿರುವ ಸಿಜೆಐ ಸೂರ್ಯಕಾಂತ್ ಅವರು, ಕಾಂಗ್ರೆಸ್ ನಾಯಕರು ಎತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸುಪ್ರೀಂ ಕೋರ್ಟ್‌ಗೆ ಯಾವುದೇ ಆಡಳಿತಾತ್ಮಕ ಅಧಿಕಾರವಿಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ, ನಾಗರಿಕಕರ ಹಕ್ಕುಗಳ ಮೇಲೆ ಪರಿಣಾಮ ಬೀರುವ ವಿಷಯಗಳನ್ನು ನ್ಯಾಯಾಂಗ ಪ್ರಕ್ರಿಯೆಗಳ ಮೂಲಕ ಪರಿಗಣಿಸಲು ಬದ್ಧವಾಗಿದೆ ಎಂಬ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಆಡಳಿತಾತ್ಮಕ ನೆಲೆಯಲ್ಲಿ ಮನವಿ ಪತ್ರವನ್ನು ಸಲ್ಲಿಸುವುದಕ್ಕಿಂತ ಸುಪ್ರೀಂ ಕೋರ್ಟ್‌ನ ನ್ಯಾಯಾಂಗ ಅಧಿಕಾರವನ್ನು ಬಳಸುವುದು ಹೆಚ್ಚು ಸೂಕ್ತ ಎಂದು ಸಿಜೆಐ ಸಲಹೆ ನೀಡಿದರು. ಇದೇ ರೀತಿಯ ಸಮಸ್ಯೆಗಳನ್ನು ಒಳಗೊಂಡಿರುವ ವಿಷಯಗಳ ವಿಚಾರಣೆಯು ಮಂಗಳವಾರ ನಿಗದಿಯಾಗಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ.

Also Read
ಮನವಿ ಪತ್ರ ಸಾಲಲ್ಲ, ಸುಪ್ರೀಂ ಕೋರ್ಟ್​​ ಬಾಗಿಲು ತೆಗೆದಿದೆ ಅರ್ಜಿ ಹಾಕಿ: ವಿರೋಧ ಪಕ್ಷಗಳ ಭೇಟಿಗೆ ನಿರಾಕರಿಸಿ ಸ್ಪಷ್ಟ ಸಂದೇಶ ರವಾನಿಸಿದ ಮುಖ್ಯ ನ್ಯಾಯಮೂರ್ತಿಗಳು! | CJI SuryaKant
ಸಿಜೆಐ ಸಭೆಗೆ ಅನುಮತಿ ನೀಡದಿರಲು ಕಾರಣವಾಯಿತು ಆ ಒಂದು ಕಾನೂನು ಅಸ್ತ್ರ: ಏನಿದು ಸೆಪರೇಷನ್ ಆಫ್ ಪವರ್ಸ್..? | CJI SuryaKant

ಪತ್ರದಲ್ಲಿ, ನಿಮಗೆ ಸೂಕ್ತವೆನಿಸಿದರೆ ಸೋಮವಾರದಂದು ಬೆಳಿಗ್ಗೆ 10.30 ರಿಂದ ಸಂಜೆ 4.30 ರ ನಡುವೆ ಭಾರತದ ಸುಪ್ರೀಂ ಕೋರ್ಟ್‌ಗೆ ನೇರವಾಗಿ ಬಂದು ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಯಾವುದೇ ದಿನ ಮತ್ತು ಯಾವುದೇ ಸಮಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಇ-ಫೈಲಿಂಗ್ (e-filing) ಆಯ್ಕೆಯನ್ನು ಬಳಸಿಕೊಳ್ಳಬಹುದು. ಅಲ್ಲದೆ, ಸಲ್ಲಿಸಲಾಗುವ ಯಾವುದೇ ಅರ್ಜಿಯನ್ನು ಕಾನೂನಿಗೆ ಅನುಗುಣವಾಗಿ ಸಾಧ್ಯವಾದಷ್ಟು ಬೇಗ ವಿಚಾರಣೆಗೆ ಕೈಗೊಳ್ಳಲಾಗುವುದು ಎಂದು ನಾಯಕರಿಗೆ ಸಿಜೆಐ ಭರವಸೆ ನೀಡಿದ್ದಾರೆ.

ಅಕ್ಟೋಬರ್ 9 ರಂದು, ವಿವಿಧ ಇಂಡಿಯಾ ಒಕ್ಕೂಟದ ಪಕ್ಷಗಳ ನಾಯಕರು ಸಂಸತ್ತಿನಿಂದ ವಿಜಯ ಚೌಕ್ ವರೆಗೆ ಮೆರವಣಿಗೆ ನಡೆಸಿ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು. ವಿರೋಧ ಪಕ್ಷದ ನಾಯಕರು ತಮ್ಮ ಕಳವಳಗಳನ್ನು ಸಿಜೆಐಗೆ ತಿಳಿಸಲು ಬಯಸಿದ್ದರು ಎಂದು ಖರ್ಗೆ ಹೇಳಿದ್ದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net