ಜ್ಞಾನೇಶ್ ಕುಮಾರ್ ರಕ್ಷಿಸುವ ಮೂಲಕ ಕೇಂದ್ರ ಸರ್ಕಾರ ದೊಡ್ಡ ತಪ್ಪು ಮಾಡ್ತಿದೆ: ನಮ್ಮ ಪ್ರತಿಭಟನೆಯಿಂದ ಸಿಇಸಿಗೆ ನಿದ್ದೆ ಬರ್ತಿಲ್ಲ ಎಂದ ರಾಹುಲ್​ ಗಾಂಧಿ! | Rahul Gandhi

ನವದೆಹಲಿ: ಎಸ್​ಐಆರ್​ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಇಂಡಿಯಾ ಒಕ್ಕೂಟವು ಇಂದು ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸಲು ಸಜ್ಜಾಗಿದೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
Published on: 

ನವದೆಹಲಿ: ಎಸ್​ಐಆರ್​ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಇಂಡಿಯಾ ಒಕ್ಕೂಟವು ಇಂದು ಸುಪ್ರೀಂ ಕೋರ್ಟ್‌ಗೆ ಮೆರವಣಿಗೆ ನಡೆಸಲು ಸಜ್ಜಾಗಿದೆ. ಈ ಮಧ್ಯೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಚುನಾವಣಾ ನ್ಯಾಯಸಮ್ಮತತೆ ಕುರಿತು ತಾವೂ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಒಕ್ಕೂಟದ ನಾಯಕರು ಜಂಟಿಯಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅಧಿಕೃತ ಅರ್ಜಿಯನ್ನು ಸಲ್ಲಿಸಲಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್​ ಗಾಂಧಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಬಿಜೆಪಿ ಸರ್ಕಾರ ರಕ್ಷಿಸುತ್ತಿದೆ ಎಂದು ಆರೋಪಿಸಿದರು. ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ ದೆಹಲಿಯಲ್ಲಿ ಹೇರಲಾಗಿರುವ ಭದ್ರತಾ ನಿರ್ಬಂಧಗಳನ್ನು ಪ್ರಶ್ನಿಸುತ್ತಾ, ಯುವ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗುತ್ತಿದೆ ಎಂಬ ಸ್ಫೋಟಕ ಆರೋಪ ಮಾಡಿದರು.

ಇದನ್ನೂ ಓದಿ:ಸಿಂಹಾಸನ ಖಾಲಿ ಮಾಡಿ, ಜನ ಬರುತ್ತಿದ್ದಾರೆ: ಹಿಂದಿ ಕವಿತೆ ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಶಶಿ ತರೂರ್! | Shashi Tharoor Post

ಪೊಲೀಸ್ ಸಿಬ್ಬಂದಿಯಿಂದ ಪ್ರತಿಭಟನೆಗೆ ಬೆಂಬಲ: ರಾಹುಲ್ ಗಾಂಧಿ

ಶೇಕಡಾ 50 ರಷ್ಟು ಪೊಲೀಸ್ ಸಿಬ್ಬಂದಿ ತಮ್ಮ ಪ್ರತಿಭಟನೆಯು ನ್ಯಾಯಯುತವಾಗಿದೆ ಮತ್ತು ಇದು ಮುಂದುವರಿಯಬೇಕು ಎಂದು ವಿರೋಧ ಪಕ್ಷದವರಿಗೆ ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪೊಲೀಸ್ ಸಿಬ್ಬಂದಿ, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP), ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (CRPF) ಹಾಗೂ ಭಾರತದ ಜನತೆಯು ಒಂದು ಕಡೆಯಿದ್ದರೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಚುನಾವಣಾ ಆಯೋಗದ ಕೆಲವರು ಇನ್ನೊಂದು ಕಡೆಯಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿಯಿಂದ ಜ್ಞಾನೇಶ್ ಕುಮಾರ್ ರಕ್ಷಣೆ!...ರಾಹುಲ್ ಗಾಂಧಿ ಆರೋಪ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ರಕ್ಷಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ರಾಹುಲ್ ಗಾಂಧಿ, ದೆಹಲಿಯಲ್ಲಿನ ಭದ್ರತಾ ವ್ಯವಸ್ಥೆಗಳನ್ನು ತೀವ್ರವಾಗಿ ಟೀಕಿಸಿದರು. ಸರ್ಕಾರದ ಕಡೆಯಿಂದ ಸಿಇಒಗೆ ಭದ್ರತೆ ಒದಗಿಸುವ ಮೂಲಕ ಸರ್ಕಾರ ತಪ್ಪು ಮಾಡುತ್ತಿದೆ ಎಂದು ವಾದಿಸಿದ ಅವರು, ದೆಹಲಿಯ ಬೀದಿಗಳಲ್ಲಿ 20,000 ರಿಂದ 30,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ವಿರೋಧ ಪಕ್ಷಗಳು ಬಯಸಿದ್ದವು ಎಂದರು.

ಜ್ಞಾನೇಶ್ ಕುಮಾರ್​ರನ್ನು ಎಷ್ಟು ಹೆಚ್ಚು ರಕ್ಷಿಸುತ್ತೀರೋ, ಅಷ್ಟು ನಾವು ಅಂತಿಮವಾಗಿ ಅವರ ನಿಯಂತ್ರಕರ ಬಳಿಗೆ ತಲುಪುತ್ತೇವೆ, ಯುವ ಪ್ರತಿಭಟನಾಕಾರರ ವಿರುದ್ಧ ಬಲಪ್ರಯೋಗ ಮಾಡುವಂತೆ ಬರುವ ಸೂಚನೆಗಳಿಂದ ಪೊಲೀಸ್ ಸಿಬ್ಬಂದಿ ತೀವ್ರ ಮಾನಸಿಕ ಅಶಾಂತಿಗೆ ಒಳಗಾಗಿದ್ದಾರೆ ಎಂಬ ವರದಿಗಳು ವಿರೋಧ ಪಕ್ಷಕ್ಕೆ ಬರುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

Also Read
ಮನವಿ ಪತ್ರ ಸಾಲಲ್ಲ, ಸುಪ್ರೀಂ ಕೋರ್ಟ್​​ ಬಾಗಿಲು ತೆಗೆದಿದೆ ಅರ್ಜಿ ಹಾಕಿ: ವಿರೋಧ ಪಕ್ಷಗಳ ಭೇಟಿಗೆ ನಿರಾಕರಿಸಿ ಸ್ಪಷ್ಟ ಸಂದೇಶ ರವಾನಿಸಿದ ಮುಖ್ಯ ನ್ಯಾಯಮೂರ್ತಿಗಳು! | CJI SuryaKant
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ

ಮತದಾರರ ಪಟ್ಟಿಯ ಅಕ್ರಮಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ನಡುವೆ ದೆಹಲಿಯಲ್ಲಿ ಹೇರಲಾಗಿರುವ ನಿರ್ಬಂಧಗಳ ಬಗ್ಗೆಯೂ ರಾಹುಲ್ ಗಾಂಧಿ ಪ್ರಶ್ನೆಗಳನ್ನು ಎತ್ತಿದ್ದು, ರೈಲುಗಳು ಮತ್ತು ಬಸ್‌ಗಳಲ್ಲಿ ಜನರನ್ನು ದೆಹಲಿಗೆ ಪ್ರವೇಶಿಸದಂತೆ ತಡೆಯಲಾಗುತ್ತಿದೆ, ರಾಷ್ಟ್ರರಾಜಧಾನಿಯನ್ನು ಜೈಲ್​ ಆಗಿ ಮಾರ್ಪಾಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತಗಳ ಕಳ್ಳತನದ ವಿರುದ್ಧ ದೆಹಲಿಯಲ್ಲಿ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ, ಹಾಗಾದರೆ ದೆಹಲಿಯನ್ನು ಜೈಲನ್ನಾಗಿ ಮಾಡಿದ್ದು ಯಾಕೆ..? ಎಂದು ಪ್ರಶ್ನಿಸಿದ ಅವರು, ಸರ್ಕಾರ ನಗರವನ್ನು ಕೋಟೆಯನ್ನಾಗಿಸಲಾಗಿದೆ ಎಂದು ಹೇಳಿದರು.

ಸುಮಾರು 200 ಸರ್ಕಾರಿ ಅಧಿಕಾರಿಗಳು ವಿರೋಧ ಪಕ್ಷದವರ ಸಂಪರ್ಕದಲ್ಲಿದ್ದಾರೆ ಮತ್ತು ತಮಗೆ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದಾರೆ ಎಂದು ರಾಹುಲ್​ ಗಾಂಧಿ ಬಾಂಬ್ ಸಿಡಿಸಿದ್ದಾರೆ.

ನಿಮ್ಮ ರಾಜೀನಾಮೆ ಕೊಡಿಸಿಯೇ ಸಿದ್ಧ

ಮತ ಕಳ್ಳತನದ ಆರೋಪಗಳ ವಿರುದ್ಧ ನಡೆಯುತ್ತಿರುವ ಉಗ್ರ ಪ್ರತಿಭಟನೆಗಳ ಕಾರಣದಿಂದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ರಾತ್ರಿ ನಿದ್ದೆ ಬರುತ್ತಿಲ್ಲ ಎಂದಿರುವ ರಾಹುಲ್ ಗಾಂಧಿ, ನಿಮ್ಮ ಹಿಂದಿನ ಚರಿತ್ರೆ ಮತ್ತು ಭ್ರಷ್ಟಾಚಾರದ ಬಗ್ಗೆ ನಮಗೆ ತಿಳಿದಿದೆ, ಈ ನಿರಂತರ ಹೋರಾಟವು ರಾಜೀನಾಮೆ ಪಡೆಯುವವರೆಗೂ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net