ಕಾರ್​-ಸ್ಕೂಟಿ ಡಿಕ್ಕಿ: ಮಹಿಳೆಯ ಕಪಾಳಕ್ಕೆ ಹೊಡೆದ ಯುವಕ; ಸಾರ್ವಜನಿಕರಿಂದ ತರಾಟೆ; ವಿಡಿಯೋ ವೈರಲ್​! Viral Video

ಸ್ಕೂಟಿ ಮೇಲಿದ್ದ ಮಹಿಳೆ ಕಪಾಳಿಗೆ ಹೊಡೆದ ಯುವಕ
ಸ್ಕೂಟಿ ಮೇಲಿದ್ದ ಮಹಿಳೆ ಕಪಾಳಿಗೆ ಹೊಡೆದ ಯುವಕ
Published on

ಪ್ರಮುಖ ಮುಖ್ಯಾಂಶಗಳು

  • ಕಾರು ಮತ್ತು ಸ್ಕೂಟಿ ನಡುವೆ ಡಿಕ್ಕಿ
  • ಸ್ಕೂಟಿ ಮೇಲಿದ್ದ ಮಹಿಳೆ ಕಪಾಳಿಗೆ ಹೊಡೆದ ಯುವಕ
  • ಚಂಡೀಗಢದಲ್ಲಿ ನಡೆದ ಘಟನೆ; ವಿಡಿಯೋ ವೈರಲ್​
ಚಂಡೀಗಢ್: ಇತ್ತೀಚಿನ ದಿನಗಳಲ್ಲಿ ಸೋಷಿಯಲ್​ ಮೀಡಿಯಾಗಳಲ್ಲಿ ಒಂದಿಲ್ಲೊಂದು ವಿಡಿಯೋಗಳು ವೈರಲ್​ ಆಗುತ್ತವೆ ಇರುತ್ತವೆ. ಭಾರತದಲ್ಲಿ ಟ್ರಾಫಿಕ್​ ನಿಯಮಗಳಿಗೆ ಹಾಗೂ ಮಹಿಳೆಯರಿಗೆ ಅಗೌರವ ತೋರುವುದು ಇದೇ ಮೊದಲಲ್ಲವಾದರೂ ಚಂಡೀಗಡದಲ್ಲಿ ನಡೆದಿದೆ ಎನ್ನಲಾದ ಈ ವಿಡಿಯೋ ಸಖತ್​ ವೈರಲ್ (Viral Video) ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಕಾರಿನಲ್ಲಿರುವ ಯುವಕನೊಬ್ಬ, ಸ್ಕೂಟಿಯಲ್ಲಿ ಬಂದ ಯುವತಿಯ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಏಕೆ ಹೀಗೆ ಮಾಡಿದ್ರಿ? ಎಂದು ಯುವತಿ ಕೇಳಿದಕ್ಕೆ ಕುಪಿತನಾದ ಯುವಕ, ಕಾರಿನಿಂದ ಆಚೆ ಬಂದು ಮಹಿಳೆಯ ಕಪಾಳಿಗೆ ಹೊಡೆದಿದ್ದಾನೆ.
ಕೂಡಲೇ ಹತ್ತಿರದಲ್ಲಿದ್ದ ಸಾರ್ವಜನಿಕರು ಸ್ಥಳಕ್ಕೆ ಧಾವಿಸಿ ಆ ಯುವಕನಿಗೆ ಸರಿಯಾಗಿ ಥಳಿಸಿದ್ದಾರೆ. ಒನ್ನೊಬ್ಬ ಯುವಕನಂತೂ ಆತನನ್ನು ರಸ್ತೆಗೆ ಕಡೆವಿ ಸರಿಯಾಗಿ ಹೊಡೆಯುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದಾಗಿದೆ.

ಮಹಿಳಾ ಸುರಕ್ಷತೆ ಎಲ್ಲಿದೆ?

ಘಟನೆ ನಂತರ ವಿಡಿಯೋ ಮಾಡಿರುವ ಯುವತಿ, ಆ ಘಟನೆಯಲ್ಲಿ ನನ್ನದೇನು ತಪ್ಪಿರಲಿಲ್ಲ, ಆತ ಸಮಾಧಾನದಿಂದ ಹೇಳಿದ್ದರೆ ನಾನು ಸರಿ ಎಂದು ಹೋಗುತ್ತಿದೆ. ಅದರೆ ದಡೀರನೇ ಹಲ್ಲೆ ನಡೆಸಲು ಬಂದಾಗ ನಾನು ಹೆದರಿ ಹೋದೆ. ಸಾರ್ವಜನಿಕರು ನನ್ನ ಸಹಾಯಕ್ಕೆ ಬರದೆ ಹೋಗಿದ್ದರೆ ನಾನ್ನ ಪರಿಸ್ಥಿತಿ ಏನಾಗುತ್ತಿತ್ತು? ಎಂದು ಆಕೆ ಪ್ರಶ್ನಸಿದ್ದಾಳೆ.

ನೆಟ್ಟಿಗರು ಏನಂತಾರೆ?

ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ ಬಾಕ್ಸ್​ನ್ನು ತುಂಬಿಸಿದ್ದಾರೆ. ಆ ಗಂಡಸಿನ ಮನೆಯಲ್ಲಿ ಯಾರೂ ಹೆಣ್ಣಿಲ್ಲವೆಂದು ಕಾಣಿಸುತ್ತದೆ. ಯಾರಾದರೂ ನಡುರಸ್ತೆಯಲ್ಲಿ ಕೈ ಮಾಡುತ್ತಾರಾ? ಎಂದು ಒಬ್ಬ ಬಳಕೆದಾರ ಬರೆದಿದ್ದಾರೆ.
ಕಾರಿನವನ ಜಾಗದಲ್ಲಿ ಹೆಣ್ಣಿದ್ದರೆ ಒಬ್ಬನಾದರೂ ಮುಂದೆ ಬರುತ್ತಿದ್ದರಾ? ಇವರಿಗೆ ಹೆಣ್ಣು ಮಕ್ಕಳ ಮುಂದೆ ಹಿರೋ ಆಗೋ ಬಯಕೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಆ ಯುವಕನ ಮೇಲೆ ಕೈಮಾಡಿದವನ ಮೇಲೆ ಸಹ ಪೊಲೀಸ್​ ತನಿಕೆ ನಡೆಯಲೇ ಬೇಕೆಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net