ಸೀರೆಯುಟ್ಟು ಬರಿಗಾಲಿನಲ್ಲಿ 1600 ಮೀಟರ್​​ ಓಡಿ ಗೆದ್ದರೂ ಸಿಗಲಿಲ್ಲ ಕೆಲಸ: ಕಮರಿದ ಕವಿತಾ ಕನಸು! ಕಾರಣವೇನು? Barefoot Saree Runner Kavita

ಸೀರೆಯುಟ್ಟು, ಯಾವುದೇ ಶೂ ಇಲ್ಲದೆ ಬರಿಗಾಲಿನಲ್ಲಿ ಓಡುವ ಮೂಲಕ ಜಾಲತಾಣದಲ್ಲಿ ಎಲ್ಲರ ಮನ ಗೆದ್ದಿದ್ದ ಜಾರ್ಖಂಡ್‌ನ ರಾಮ್‌ಘರ್ ಜಿಲ್ಲೆಯ ಕವಿತಾ ಹೆಸರಿನ ಇಬ್ಬರು ಮಕ್ಕಳ ತಾಯಿ, ಸರ್ಕಾರರಿಂದ ನಡೆದ ಹೋಮ್​ಗಾರ್ಡ್​ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಬಡತನದ ಸರಪಳಿಯನ್ನು ಕಳಚಿ ಕುಟುಂಬಕ್ಕೆ ಆಸರೆಯಾಗುವ ಭರವಸೆಯಿಂದ ಕಣಕ್ಕಿಳಿದಿದ್ದ ಕವಿತಾ, ಅತ್ಯಂತ ಕ್ಲಿಷ್ಟಕರವಾದ 1600 ಮೀಟರ್ ರೇಸ್ ಅನ್ನು ಕೇವಲ 8 ನಿಮಿಷ 57 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ನಿಗದಿತ 10 ನಿಮಿಷಗಳ ಸಮಯಕ್ಕಿಂತ ಮುಂಚಿತವಾಗಿಯೇ ಗುರಿ ತಲುಪಿ ಗೆದ್ದು ಬೀಗಿದ್ದರು.
Barefoot Saree Runner Kavita
ಸೀರೆಯುಟ್ಟು ಬರಿಗಾಲಿನಲ್ಲಿ 1600 ಮೀಟರ್​​ ಓಡಿ ಗೆದ್ದರೂ ಸಿಗಲಿಲ್ಲ ಕೆಲಸ: ಕಮರಿದ ಕವಿತಾ ಕನಸು!
Published on: 

ರಾಂಚಿ: ವೈಯಕ್ತಿಕ ಜೀವನದ ಕಷ್ಟ-ಕಾರ್ಪಣ್ಯಗಳನ್ನು ಬದಿಗೊತ್ತಿ, ಕನಸು ನನಸು ಮಾಡಿಕೊಳ್ಳಲು ಏಕಾಂಗಿ ಹೋರಾಟ ನಡೆಸುವ ಮಹಿಳೆಯರ ( Barefoot Saree Runner Kavita ) ಕಥೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಇಂತಹದ್ದೇ ಒಂದು ಸ್ಫೂರ್ತಿದಾಯಕ ಹಾಗೂ ಅಷ್ಟೇ ಬೇಸರ ತರುವ ಘಟನೆಯೊಂದು ಜಾರ್ಖಂಡ್‌ನಲ್ಲಿ ನಡೆದಿದೆ.

ಹೌದು, ಸೀರೆಯುಟ್ಟು, ಯಾವುದೇ ಶೂ ಇಲ್ಲದೆ ಬರಿಗಾಲಿನಲ್ಲಿ ಓಡುವ ಮೂಲಕ ಜಾಲತಾಣದಲ್ಲಿ ಎಲ್ಲರ ಮನ ಗೆದ್ದಿದ್ದ ಜಾರ್ಖಂಡ್‌ನ ರಾಮ್‌ಘರ್ ಜಿಲ್ಲೆಯ ಕವಿತಾ ಹೆಸರಿನ ಇಬ್ಬರು ಮಕ್ಕಳ ತಾಯಿ, ಸರ್ಕಾರರಿಂದ ನಡೆದ ಹೋಮ್​ಗಾರ್ಡ್​ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಬಡತನದ ಸರಪಳಿಯನ್ನು ಕಳಚಿ ಕುಟುಂಬಕ್ಕೆ ಆಸರೆಯಾಗುವ ಭರವಸೆಯಿಂದ ಕಣಕ್ಕಿಳಿದಿದ್ದ ಕವಿತಾ, ಅತ್ಯಂತ ಕ್ಲಿಷ್ಟಕರವಾದ 1600 ಮೀಟರ್ ರೇಸ್ ಅನ್ನು ಕೇವಲ 8 ನಿಮಿಷ 57 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿ ನಿಗದಿತ 10 ನಿಮಿಷಗಳ ಸಮಯಕ್ಕಿಂತ ಮುಂಚಿತವಾಗಿಯೇ ಗುರಿ ತಲುಪಿ ಗೆದ್ದು ಬೀಗಿದ್ದರು.

Also Read
ರಶ್ಮಿಕಾರನ್ನು ತುಂಬಾ ಕೀಳಾಗಿ ನಡೆಸಿಕೊಂಡಿದ್ದಾರೆ ಎಂಬ ಆರೋಪ: ಕೊನೆಗೂ ಮೌನ ಮುರಿದ ವಿಜಯ್​ ದೇವರಕೊಂಡ! Vijay Deverakonda
Barefoot Saree Runner Kavita

ನೇಮಕಾತಿ ಪರೀಕ್ಷೆಯಲ್ಲಿ 238 ರೋಲ್ ನಂಬರ್ ಹೊಂದಿದ್ದ ಕವಿತಾ, ಮೊದಲ ಹಂತದ ರೇಸಿಂಗ್ ಪರೀಕ್ಷೆಯನ್ನು ಅತ್ಯಂತ ಸುಲಭವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ ಅಲ್ಲಿ ನೆರೆದಿದ್ದ ಎಲ್ಲರ ಹುಬ್ಬೇರಿಸಿದ್ದರು. ಅಲ್ಲದೆ, ಅವರ ಫೋಟೋ ಮತ್ತು ವಿಡಿಯೋಗಳು ವೈರಲ್​ ಆಗಿ, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು. ಇನ್ನೂ ಪರೀಕ್ಷೆಯಲ್ಲಿ ಕವಿತಾ ಅವರೊಂದಿಗೆ ಒಟ್ಟು 930 ಮಹಿಳಾ ಅಭ್ಯರ್ಥಿಗಳು ಭಾಗವಹಿಸಿದ್ದರು. ರೇಸ್ ಗೆದ್ದ ನಂತರ ಮುಂದಿನ ಹಂತವಾದ 'ಹೈಜಂಪ್' (ಎತ್ತರ ಜಿಗಿತ) ಸ್ಪರ್ಧೆಯಲ್ಲಿ ಕವಿತಾ ಅವರಿಗೆ ಅರ್ಹತೆ ಪಡೆಯಲು ಸಾಲು ಸಾಲಾಗಿ ಒಟ್ಟು ಮೂರು ಅವಕಾಶಗಳನ್ನು ನೀಡಲಾಗಿತ್ತು. ಆದರೆ, ದುರದೃಷ್ಟವಶಾತ್ ನಿಗದಿತ ಎತ್ತರವನ್ನು ಜಿಗಿಯಲು ಅವರಿಗೆ ಸಾಧ್ಯವಾಗಲಿಲ್ಲ. ಮೂರೂ ಪ್ರಯತ್ನಗಳಲ್ಲಿ ವಿಫಲರಾದ ಕಾರಣ ಅವರನ್ನು ಅಂತಿಮವಾಗಿ ಪರೀಕ್ಷೆಯಲ್ಲಿ ಅನುತ್ತೀರ್ಣ ಎಂದು ಘೋಷಿಸಲಾಯಿತು.

ಕವಿತಾ ಅವರು ಪ್ರಸಿದ್ಧಿಗೆ ಬಂದಿದ್ದು ಇದೇ ತಿಂಗಳ ಆರಂಭದಲ್ಲಿ. ಸಿಡೋ-ಕಾನ್ಹು ಜಿಲ್ಲಾ ಮೈದಾನದಲ್ಲಿ 'ಅಂಕಿತ್ ರನ್ನಿಂಗ್ ಅಕಾಡೆಮಿ' ಆಯೋಜಿಸಿದ್ದ ಪ್ರಾಯೋಗಿಕ ಓಟದ ಸ್ಪರ್ಧೆಯಲ್ಲಿ (Trial Run) ಅವರು ಭಾಗವಹಿಸಿದ್ದರು. ಮನೆಯಲ್ಲಿ ವಿಪರೀತ ಆರ್ಥಿಕ ಸಂಕಷ್ಟವಿದ್ದ ಕಾರಣ ಮತ್ತು ಓಟಕ್ಕೆ ಸೂಕ್ತವಾದ ಕ್ರೀಡಾ ಉಡುಪು ಅಥವಾ ಶೂಗಳನ್ನು ಖರೀದಿಸಲು ಹಣವಿಲ್ಲದ ಕಾರಣ, ಅವರು ದಿನನಿತ್ಯ ಉಡುವ ಸೀರೆಯನ್ನೇ ಉಟ್ಟುಕೊಂಡು ಬರಿಗಾಲಿ0ನಲ್ಲಿ ಮೈದಾನಕ್ಕಿಳಿದು ಓಡಿದ್ದರು. ಈ ಕಠಿಣ ಪರಿಶ್ರಮದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿ, ರಾತ್ರೋರಾತ್ರಿ ಅವರು ವೈರಲ್​ ಆದರು.

ಕವಿತಾ ಅವರ ನಿಜ ಜೀವನದ ಕಥೆ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಹುದ್ದು. ಕೆಲ ವರ್ಷಗಳ ಹಿಂದಷ್ಟೇ ಅವರ ಪತಿ ನಿಧನರಾಗಿದ್ದರು. ಪತಿಯ ಅಗಲಿಕೆಯ ನಂತರ ತಮ್ಮ ಇಬ್ಬರು ಪುಟ್ಟ ಮಕ್ಕಳು ಹಾಗೂ ವಯಸ್ಸಾದ ಅತ್ತೆ-ಮಾವಂದಿರ ಸಂಪೂರ್ಣ ಜವಾಬ್ದಾರಿ ಕವಿತಾ ಅವರ ಹೆಗಲ ಮೇಲೆ ಬಿತ್ತು. ಕುಟುಂಬಕ್ಕೆ ನಯಾಪೈಸೆ ಆದಾಯವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾದಾಗ, ಹೇಗಾದರೂ ಮಾಡಿ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು ಎಂಬ ಏಕೈಕ ಕನಸಿನಿಂದ ಅವರು ಈ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು. ಅವರ ಕಷ್ಟದ ಕಥೆ ವೈರಲ್ ಆದ ನಂತರ ಅನೇಕ ದಾನಿಗಳು ಮತ್ತು ಸಮಾಜ ಸೇವಕರು ಅವರಿಗೆ ತರಬೇತಿ ಹಾಗೂ ದಿನನಿತ್ಯದ ಜೀವನ ನಿರ್ವಹಣೆಗೆ ಸಹಾಯ ಮಾಡಲು ಮುಂದೆ ಬಂದಿದ್ದರು.

Also Read
'ನನ್ನ ಕಾಲು, ಹೊಟ್ಟೆ ಮಸಾಜ್ ಮಾಡಿ ಕೇರ್ ಮಾಡ್ತಾರೆ'; ರಶ್ಮಿಕಾ ಮುಟ್ಟಿನ ದಿನಗಳಲ್ಲಿ ವಿಜಯ್​ ಹೀಗೆ ನೋಡ್ಕೊಳ್ತಾರಂತೆ..Vijay-Rashmika
Barefoot Saree Runner Kavita

ದೈಹಿಕ ಪರೀಕ್ಷೆಯ 1600 ಮೀಟರ್ ರೇಸ್ ಅನ್ನು ಯಶಸ್ವಿಯಾಗಿ ಮುಗಿಸಿದಾಗ ಕವಿತಾ ಅವರ ಕೆಲಸದ ಕನಸು ನನಸಾಗುವ ಹತ್ತಿರಕ್ಕೆ ಬಂದಿತ್ತು. ಆದರೆ ಹೈಜಂಪ್‌ನಲ್ಲಿ ಎಡವಿದ್ದು ಅವರ ಎಲ್ಲಾ ನಿರೀಕ್ಷೆಗಳನ್ನು ತಲೆಕೆಳಗಾಗಿಸಿದೆ. ಕವಿತಾ ಅವರ ಈ ಪಯಣವು ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಧೃತಿಗೆಡದೆ ಹೋರಾಡುವ ಮನೋಭಾವಕ್ಕೆ ಸಾಕ್ಷಿಯಾಗಿದೆ. ಜತೆಗೆ, ಗ್ರಾಮೀಣ ಹಾಗೂ ಬಡತನದ ಹಿನ್ನೆಲೆಯಿಂದ ಬರುವ ಪ್ರತಿಭಾವಂತ ಅಭ್ಯರ್ಥಿಗಳಿಗೆ ಕನಿಷ್ಠ ತರಬೇತಿ ಅಥವಾ ಕ್ರೀಡಾ ಸೌಲಭ್ಯಗಳ ಕೊರತೆ ಹೇಗೆ ಅವರ ಕನಸುಗಳಿಗೆ ತಡೆಯಾಗುತ್ತದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಎತ್ತಿಹಿಡಿದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net