'ನನ್ನ ಕಾಲು, ಹೊಟ್ಟೆ ಮಸಾಜ್ ಮಾಡಿ ಕೇರ್ ಮಾಡ್ತಾರೆ'; ರಶ್ಮಿಕಾ ಮುಟ್ಟಿನ ದಿನಗಳಲ್ಲಿ ವಿಜಯ್​ ಹೀಗೆ ನೋಡ್ಕೊಳ್ತಾರಂತೆ..Vijay-Rashmika

Rashmika Mandanna and Vijay Deverakonda
ತಾರಾದಂಪತಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ
Published on: 
  • ಮುಟ್ಟಾದಾಗ ವಿಜಯ್​​​ ನನ್ನ ಪಾದ, ಹೊಟ್ಟೆ ಮಸಾಜ್​ ಮಾಡಿ, ನೋವು ಶಮನಕ್ಕೆ ಸಹಾಯ ಮಾಡ್ತಾರೆ.

  • ಮುಟ್ಟಿನ ದಿನಗಳಲ್ಲಿ ವಿಜಯ್​ ಕೇರಿಂಗ್​ ಹೇಗಿರುತ್ತೆ ಎಂದು ಬಹಿರಂಗವಾಗಿ ಮಾತನಾಡಿದ ರಶ್ಮಿಕಾ.

  • ಪೀರಿಯಡ್ಸ್ ಸಮಯದಲ್ಲಿ ಹೊಟ್ಟೆ ನೋವು ನಿವಾರಣೆಗೆ ಜೀರಿಗೆ ನೀರು ಕುಡಿಯುವ ರಶ್ಮಿಕಾ.

Rashmika Mandanna- Vijay Deverakonda: ಕಾಫಿ ವಿತ್ ಕರಣ್ ಜೋಹರ್ ಟಾಕ್ ಶೋನಲ್ಲಿ ವಿಜಯ್ ದೇವರಕೊಂಡ ಅವರು ರಶ್ಮಿಕಾ ಅವರನ್ನು ಸರಿಯಾಗಿ ಗೌರವಿಸಲಿಲ್ಲ, ಕಣ್ಣಲ್ಲಿ ಕಣ್ಣಿಟ್ಟು ನೋಡಲೂ ಇಲ್ಲ, ಪತ್ನಿ ಮೇಲೆ ಪ್ರೀತಿಯೇ ಇಲ್ಲ ಎಂಬ ಚರ್ಚೆಗಳು ಒಂದು ಕಡೆ ನಡೆಯುತ್ತಿದ್ದರೆ, ಮತ್ತೊಂದು ಕಡೆ ಪೀರಿಯಡ್ಸ್ ಸಮಯದಲ್ಲಿ ವಿಜಯ್ ತಮ್ಮನ್ನು ಹೇಗೆ ಕಾಳಜಿ ವಹಿಸುತ್ತಾರೆ ಗೊತ್ತಾ ಎಂದು ಮತ್ತೊಂದು ಪಾಡ್​ಕಾಸ್ಟ್​ನಲ್ಲಿ ಮಾತನಾಡಿರುವ ರಶ್ಮಿಕಾ ಮಾತುಗಳು ಸದ್ಯ ಸೋಶಿಯಲ್​​ ಮೀಡಿಯಾದಲ್ಲಿ ಮತ್ತೊಂದು ರೀತಿ ಸದ್ದು ಮಾಡ್ತಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್​ ದೇವರಕೊಂಡ ಅವರು ಗೀತಗೋವಿಂದಂ ಸಿನಿಮಾದಿಂದಾಗಿ ಪರಿಚಿತರಾದರು. ಆನಂತರ ಅವರ ಕಾಂಬಿನೇಷನ್​ನಲ್ಲಿ ಡಿಯರ್ ಕಾಮ್ರೇಡ್ ಸಿನಿಮಾ ಬಂತು. ಆದರೆ ಅಷ್ಟಾಗಿ ಹಿಟ್ ಕಂಡಿಲ್ಲ. ಅಂದಿನಿಂದ ಈ ಇಬ್ಬರು ಒಟ್ಟಾಗಿ ಡೇಟಿಂಗ್ ಮಾಡ್ತಿದ್ದಾರೆ. ಇಬ್ಬರಿಗೂ ಪ್ರೀತಿ ಇದೆ ಇನ್ನೇನು ಮದುವೆಯಾಗುತ್ತಾರೆ ಎನ್ನುವ ಕುತೂಹಲಗಳು ಇತ್ತು. ಅದರಂತೆ ಪೋಟೋಸ್ ಸಹ ವೈರಲ್ ಆಗುತ್ತಿದ್ದವು. ಆದರೆ, ಕಾಫಿ ವಿತ್ ಕರಣ್ ಜೋಹರ್ ಟಾಕ್ ಶೋನಲ್ಲಿ ವಿಜಯ್​ ದೇವರಕೊಂಡ ಹೇಳಿದ ಮಾತು ಫ್ಯಾನ್ಸ್ ಸಿಟ್ಟಿಗೆ ಕಾರಣವಾಗಿದೆ.

'ನನ್ನನ್ನು ಮದುವೆಯಾಗುವಂತೆ ರಶ್ಮಿಕಾ ನೂರು ಬಾರಿ ಕೇಳಿದ್ರು' ಎಂದು ದೇವರಕೊಂಡ ಹೇಳಿದ್ರೆ, ರಶ್ಮಿಕಾ 'ಇಲ್ಲ ವರ್ಷ ಪೂರ್ತಿ ಕೇಳಿದ್ದೆ' ಎನ್ನುತ್ತಾರೆ. ವಿಜಯ್​ನ ಕೆಲವೊಂದು ಬಿಹೇವಿಯರ್​ ಸದ್ಯ ರಶ್ಮಿಕಾ ಫ್ಯಾನ್ಸ್​ ಅನ್ನು ಕೆರಳಿಸಿದೆ. ಈ ಎಲ್ಲ ಚರ್ಚೆಗಳ ಮಧ್ಯೆ ಮಧ್ಯೆ ಸದ್ಯ ವೈರಲ್ ಆಗ್ತಿರುವ ವಿಚಾರವೆಂದರೆ ವಿಜಯ್​ ದೇವರಕೊಂಡ ಅವರ ಕೇರಿಂಗ್​ ಸ್ವಭಾವ.

ಹೌದು, ಖಾಸಗಿ ಮಾಧ್ಯಮವೊಂದರ ಜೊತೆಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ್ದ ರಶ್ಮಿಕಾ ಅವರು ವಿಜಯ್​ ದೇವರಕೊಂಡ ಅವರ ಕೇರಿಂಗ್​ ಸ್ವಭಾವದ ಬಗ್ಗೆ ಬಿಚ್ಚಿಟ್ಟಿದ್ದಾರೆ. ಅವರಿಗೆ ಮುಟ್ಟಾದಾಗ ಹೊಟ್ಟೆಯನ್ನು ಉಜ್ಜುತ್ತಾರೆ ಮತ್ತು ಕೈ ಮತ್ತು ಪಾದಗಳನ್ನು ಒತ್ತುತ್ತಾರೆ ಎಂದು ಸತ್ಯ ಬಿಚ್ಚಿಟ್ಟಿದಾರೆ.

ಪೀರಿಯಡ್ಸ್ ಸಮಯದಲ್ಲಿ ವಿಜಯ್ ಆರೈಕೆ ಹೇಗಿರುತ್ತದೆ?

'ವಿಜಯ್ ದೇವರಕೊಂಡ ಮನೆಯಲ್ಲಿ ಮುಟ್ಟಿನ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡದಿದ್ದರೂ ಸಹ, ನೋವಿನ ವಿಷಯ ಬಂದಾಗ ಅವರು ತುಂಬಾ ಅರ್ಥಮಾಡಿಕೊಳ್ಳುತ್ತಾರೆ. ಮುಟ್ಟಿನ ಸಮಯದಲ್ಲಿ ವಿಜಯ್ ಹೊಟ್ಟೆಯ ಭಾಗವನ್ನು ಉಜ್ಜುತ್ತಾರೆ. ಕೈ ಹಾಗೂ ಕಾಲುಗಳನ್ನು ಒತ್ತುವ ಮೂಲಕ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತಾರೆ. ಅವರ ಆ ಸಾಂತ್ವನವೇ ದೊಡ್ಡದು' ಎಂದರು.

'ಪೀರಿಯಡ್ಸ್ ಬರುವ ದಿನ ಹತ್ತಿರವಿರುವಾಗುತ್ತಿದ್ದಂತೆ ನನಗೆ ಯಾವುದೇ ಕಾರಣವಿಲ್ಲದೆ ಮನಸ್ಸು ಮಂಕಾಗುತ್ತೆ. ಸಿಟ್ಟು ಬರುತ್ತದೆ. ಆ ಬಗ್ಗೆ ನಾನು ಮುಂಚೆಯೇ ವಿಜಯ್​ಗೆ ತಿಳಿಸುತ್ತೇನೆ. ನನಗೆ ಹೊಟ್ಟೆ ನೋವು ಕಾಣಿಸಿಕೊಂಡಾಗ, ನನ್ನೊಂದಿಗೆ ಇದ್ದು ನೋವಿಗೆ ಮದ್ದೆರೆಯುತ್ತಾರೆ. ಅದೇ ದೊಡ್ಡದು ಅಲ್ವಾ? ಇನ್ನೇನು ಮಾಡಲು ಸಾಧ್ಯ. ನಮ್ಮ ಗರ್ಭಾಶಯವನ್ನು ಹೊರ ತೆಗೆಯೋಕಂತು ಸಾಧ್ಯವಿಲ್ಲವಲ್ಲ 'ಎಂದು ನಟಿ ಹೇಳಿದ್ರು.

ನೋವು ನಿವಾರಣೆಗೆ ರಶ್ಮಿಕಾ ಬಳಸುವ ನೈಸರ್ಗಿಕ ಮದ್ದು ಇದು

ನೋವು ತಡೆಯಲು ಹಾಟ್ ಪ್ಯಾಡ್‌ಗಳನ್ನುಬಳಸುವುದು. ಆರೋಗ್ಯಕ್ಕೆ ಒಳ್ಳೆಯದಾದ ಜೀರಿಗೆ ನೀರನ್ನು ಕುಡಿಯುವುದು ಅಭ್ಯಾಸ ಎಂದಿದ್ದಾರೆ.

ಮೊದಲ ಮುಟ್ಟಿನ ಭಯಾನಕ ನೆನಪುಗಳು

'ಮೊದಲ ಬಾರಿ ನಾನು ಮುಟ್ಟಾದಾಗ ಯಾರ ಬಳಿಯೂ ಹೇಳಿಕೊಳ್ಳಲು ಆಗದೆ ಹೆದರಿದ್ದೆ. ಪ್ಯಾಡ್ ಎಂದರೇನು ಎಂದೇ ಗೊತ್ತಿರಲಿಲ್ಲ. ಆಗ ಸ್ಯಾನಿಟರಿ ಪ್ಯಾಡ್​ಗಳ ಬಳಕೆ ಜಾರಿಯಲ್ಲಿದೆ ಎನ್ನುವ ಮಾಹಿತಿ ನನಗಿರಲಿಲ್ಲ. ಹೀಗಾಗಿ ಕಾಟನ್​ ಬಟ್ಟೆಯನ್ನು ಮಡಚಿ ಬಳಕೆ ಮಾಡ್ತಿದ್ದೆ. ಯಾವುದೋ ಕಾರಣಕ್ಕೆ ಇದು ಜೀವನದಲ್ಲಿ ಒಂದೇ ಬಾರಿ ಬರುವ ಸಂಗತಿ ಎಂದುಕೊಂಡಿದ್ದೆ' ಎಂದು ನೆನಪಿಸಿಕೊಂಡರು

ತಮ್ಮ ಮುಟ್ಟಿನ ದಿನಗಳಲ್ಲಿ ತೀವ್ರವಾದ ನೋವು ಅನುಭವಿಸುವುದಾಗಿ ತಿಳಿಸಿರುವ ರಶ್ಮಿಕಾ, ನನಗೆ ತಿಂಗಳ ಮುಟ್ಟಿನ ದಿನ ಇನ್ನೇನು ಆರಂಭವಾಗಿದೆ ಎನ್ನುವುದಕ್ಕೂ ಮುನ್ನವೇ ಆತಂಕ ಶುರುವಾಗುತ್ತದೆ. ಇಂದಿನ ಚಿತ್ರರಂಗದಲ್ಲಿ ಮಹಿಳೆಯರು ಪ್ರಮುಖ ಸ್ಥಾನಗಳಲ್ಲಿದ್ದರೂ ಸಹ, ಮುಟ್ಟಿನ ರಜೆಯಂತಹ ಸೌಲಭ್ಯಗಳಿ ಲ್ಲದೆ ಕೆಲಸ ಮಾಡಬೇಕಾಗಿರುವುದು ನೋವಿನ ಸಂಗತಿಯಾಗಿದೆ ಮತ್ತು ಇದೇ ಇಲ್ಲಿನ ಸಾಮಾನ್ಯ ಪರಿಸ್ಥಿತಿಯಾಗಿಬಿಟ್ಟಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದರು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net