ಮಂಗಳವಾರ(ಜು. 29) ಲೋಕಸಭೆಯ ಚರ್ಚೆಯ ಸಮಯದಲ್ಲಿ ಮಾತನಾಡಿರುವ ಠಾಕೂರ್, ನಾನು ಪ್ರಿಯಾಂಕಾ ಗಾಂಧಿ ಅವರಿಗೆ ಉತ್ತರಿಸುತ್ತೇನೆ. ಗಂಭೀರ ವಿಷಯಗಳ ಕುರಿತು ಮಾತನಾಡುವಾಗ ಅವರು ಮುಗ್ಧ ಮುಖಭಾವ ತೋರುವುದು, ಜನರನ್ನು ದಾರಿ ತಪ್ಪಿಸುವುದು, ಮಂದಹಾಸ ಬೀರುವುದು ಮತ್ತು ಸ್ವತಃ ಸಭಾಪತಿಯವರನ್ನೇ ನಗುವಂತೆ ಕೇಳಿಕೊಳ್ಳುವುದು ಹೀಗೆಲ್ಲಾ ಮಾಡುವ ಮೂಲಕ ಅವರು ತಮ್ಮದೇ ಸರ್ಕಾರದ ಹಿಂದಿನ ತಪ್ಪುಗಳು ಮತ್ತು ವೈಫಲ್ಯಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.