ಬ್ಲಾಕ್ ಸಮುದ್ರ ದಾಳಿ ಬಳಿಕ ಉಕ್ರೇನ್ ಸಮೀಪ ವಾಣಿಜ್ಯ ಹಡಗಿನ ಮೇಲೆ ದಾಳಿ: ಅಪಾಯದಲ್ಲಿ ಸಿಲುಕಿದ 13 ಭಾರತೀಯ ನಾವಿಕರು | Indian sailors

ಘಟನೆಯ ಸ್ಥಳ
ಘಟನೆಯ ಸ್ಥಳ
Published on
ಕೈವ್: ರಷ್ಯಾ-ಉಕ್ರೇನ್ ಸಂಘರ್ಷ ಮುಂದುವರೆದಿದ್ದು, ಕಪ್ಪು ಸಮುದ್ರದಲ್ಲಿ ದಾಳಿ ಬಳಿಕ ಉಕ್ರೇನ್ ಸಮೀಪದ ಚೋರ್ನೊಮೊರ್ಸ್ಕ್ ಬಂದರಿನಲ್ಲಿ ಸರಕು ಸಾಗಣೆ ಹಡಗಿನ ಮೇಲೆ ದಾಳಿ ನಡೆದಿದ್ದು, ಘಟನೆಯಲ್ಲಿ ಕನಿಷ್ಠ 13 ಭಾರತೀಯ ನಾವಿಕರು(Indian sailors) ಅಪಾಯದಲ್ಲಿ ಸಿಲುಕಿದ್ದಾರೆ ಎಂದು(ಜು. 29) ವರದಿಯಾಗಿದೆ.
ರಷ್ಯಾ ಮತ್ತು ಉಕ್ರೇನ್ ಕಪ್ಪು ಸಮುದ್ರ ಬಂದರಿನ ಬಳಿ ಸಂಘರ್ಷ ಮುಂದುವರೆಸಿದ್ದು, ದಾಳಿಯಲ್ಲಿ ಸಿಕ್ಕಿಬಿದ್ದ ಸಿಬ್ಬಂದಿ ಭಯಾನಕ ಮತ್ತು ಜೀವಕ್ಕೆ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಮತ್ತು ಯಾವುದೇ ಕ್ಷಣದಲ್ಲಿ ನೇರ ಹೊಡೆತದ ನಿರಂತರ ಭಯದಲ್ಲಿ ಬದುಕುತ್ತಿದ್ದಾರೆ ಎಂದು ನಾವಿಕರ ಒಕ್ಕೂಟ ಎಚ್ಚರಿಸಿದೆ.
ಈ ಕುರಿತು ಎಕ್ಸ್​​ನಲ್ಲಿ ಮಾಹಿತಿ ನೀಡಿರುವ ಫಾರ್ವರ್ಡ್ ಸೀಮನ್ಸ್ ಯೂನಿಯನ್ ಆಫ್ ಇಂಡಿಯಾ(FSUI), ತುರ್ತು ಮನವಿ, ಉಕ್ರೇನ್‌ನ ಚೋರ್ನೊಮೊರ್ಸ್ಕ್ ಬಂದರಿನಲ್ಲಿರುವ 'ಎಂ.ವಿ. ಅಮೀರ್-1' ಹಡಗು 13 ಮಂದಿ ಭಾರತೀಯ ನಾವಿಕರು ಸೇರಿದಂತೆ ಒಟ್ಟು 15 ಸಿಬ್ಬಂದಿಯೊಂದಿಗೆ ಭಯಾನಕ ಹಾಗೂ ಜೀವಕ್ಕೆ ಅಪಾಯವಿರುವ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ ಎಂದು ಹೇಳಿದೆ.
ಹಡಗಿನ ಸಮೀಪದಲ್ಲಿ ಪದೇ-ಪದೇ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ನೇರ ಹೊಡೆತದ ಭಯದಲ್ಲಿ ಸಿಬ್ಬಂದಿ ಬದುಕುತ್ತಿದ್ದಾರೆ. ಭಾರತ ಸರ್ಕಾರ, ಹಡಗು ಮಾಲೀಕರು, ಹಡಗಿನ ಧ್ವಜ ರಾಷ್ಟ್ರ ಮತ್ತು ಇತರ ಅಧಿಕಾರಿಗಳು ಸಿಬ್ಬಂದಿಯ ಸುರಕ್ಷತೆಯನ್ನು ತಕ್ಷಣವೇ ಖಚಿತಪಡಿಸಿಕೊಳ್ಳಲು ಮತ್ತು ತ್ವರಿತ ವಾಪಸಾತಿ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದೆ. ಭಾರತೀಯ ನಾವಿಕರನ್ನು ಸಂಘರ್ಷ ವಲಯಗಳಲ್ಲಿ ಕುಳಿತುಕೊಳ್ಳುವ ಗುರಿಯಾಗಿ ಬಿಡಬಾರದು. ಈಗಲೇ ಕಾರ್ಯನಿರ್ವಹಿಸಿ ಎಂದು ಮನವಿ ಮಾಡಿದೆ.
ಇನ್ನೂ ಹಡಗಿನ ಸುತ್ತಮುತ್ತಲಿನ ಪ್ರದೇಶದಲ್ಲಿ ದೊಡ್ಡ ಹೊಗೆಯ ಗೊಂಚಲುಗಳು ಆವರಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ನಾವಿಕರ ಒಕ್ಕೂಟವು ಹಂಚಿಕೊಂಡಿದ್ದು, ಬಂದರಿನಲ್ಲಿನ ಅಸ್ಥಿರ ಭದ್ರತಾ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ. 13 ಭಾರತೀಯ ನಾವಿಕರು ಸಂಕಷ್ಟದಲ್ಲಿದ್ದಾರೆ ಎಂಬ ವರದಿಗೆ ಇನ್ನೂ ದೇಶಾಂಗ ಸಚಿವಾಲಯವಾಗಲಿ ಅಥವಾ ಹಡಗು ಕಂಪನಿಯಾಗಲಿ ಇಲ್ಲಿಯವರೆಗೆ ಪ್ರತಿಕ್ರಿಯಿಸಿಲ್ಲ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net