ಈ ಕುರಿತು ಪ್ರತಿಕ್ರಿಯಿಸಿರುವ ಸಿಜೆಪಿ, ವಿದ್ಯಾರ್ಥಿಗಳ ವಿರುದ್ಧದ ಎಫ್ಐಆರ್ಗಳ ತನಿಖೆಯನ್ನು ಮುಂದುವರಿಸಲು ಸರ್ಕಾರಗಳಿಗೆ ಅನುಮತಿ ನೀಡುವ ಸುಪ್ರೀಂ ಕೋರ್ಟ್ನ ಮಧ್ಯಂತರ ಆದೇಶವು ಜುಲೈ 25ರಂದು ಕೇಂದ್ರವು ನೀಡಿದ ಪ್ರಕರಣಗಳ ಹಿಂತೆಗೆತ ಮತ್ತು ಪ್ರತಿಭಟನಾಕಾರರನ್ನು ಬಂಧಿಸುವುದಿಲ್ಲ ಎಂಬ ಭರವಸೆಗೆ ನೇರ ವಿರೋಧಾಭಾಸವಿದೆ. ಇನ್ನೂ ಕೇಂದ್ರ ಸರ್ಕಾರ ಜುಲೈ 25ರ ಭರವಸೆಗಳನ್ನು ಪೂರೈಸುವ ಗಡುವು ಮಂಗಳವಾರ ಮುಗಿದಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದೆ.