ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು, ಇಬ್ಬರೂ ಸೈನಿಕರು 8 ರಾಷ್ಟ್ರೀಯ ರೈಫಲ್ಸ್‌ಗೆ ಸೇರಿದವರಾಗಿದ್ದು, ಘಟನೆ ನಡೆದಾಗ ಎಲ್‌ಒಸಿ ಬಳಿ ಕರ್ತವ್ಯದಲ್ಲಿದ್ದರು. ಗಾಯಗೊಂಡ ಸೈನಿಕರನ್ನು ತಕ್ಷಣವೇ ಸ್ಥಳದಿಂದ ಶ್ರೀನಗರದ ಬಾದಾಮಿಬಾಗ್‌ನಲ್ಲಿರುವ ಸೇನಾ ಮೂಲ ಆಸ್ಪತ್ರೆಗೆ ವಿಮಾನದ ಮೂಲಕ ಕರೆದೊಯ್ಯಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.