ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ದುರಂತ: ಹೈವೇನಲ್ಲಿ ಕಾರು ರಿವರ್ಸ್ ತೆಗೆದಿದ್ದೇ ತಪ್ಪಾಯ್ತು; ಒಂದೇ ಕುಟುಂಬದ ನಾಲ್ವರು ದುರ್ಮರಣ! Accident in Delhi Dehradun Expressway

ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ನಡುಕ ಹುಟ್ಟಿಸುವ ಭೀಕರ ಅಪಘಾತ!
ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ನಡುಕ ಹುಟ್ಟಿಸುವ ಭೀಕರ ಅಪಘಾತ!
Published on

ಪ್ರಮುಖ ಮುಖ್ಯಾಂಶಗಳು

  • ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ನಡುಕ ಹುಟ್ಟಿಸುವ ಭೀಕರ ಅಪಘಾತ!
  • ಹೈವೇನಲ್ಲಿ ಕಾರು ರಿವರ್ಸ್ ತೆಗೆದಿದ್ದಕ್ಕೆ ವೇಗವಾಗಿ ಬಂದ SUV ಡಿಕ್ಕಿ
  • ಒಂದೇ ಕುಟುಂಬದ ನಾಲ್ವರು ದುರ್ಮರಣ
  • ಸಿಸಿಟಿವಿ ವಿಡಿಯೋ ವೈರಲ್!
ಉತ್ತರಪ್ರದೇಶ: ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಫಘಾತವೊಂದು (Accident in Delhi Dehradun Expressway) ನಡೆದಿದ್ದು, ಕನಿಷ್ಟ ನಾಲ್ಕು ಜನ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ. ಹಿಮ್ಮುಖದಲ್ಲಿ ಬರುತ್ತಿದ್ದ ಕಾರೊಂದಕ್ಕೆ ವೇಗವಾಗಿ ಬಂದ ಎಸ್​ಯುವಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಅಫಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ವಿಡಿಯೋ ವೈರಲ್​!

ಈ ಘಟನೆಯು ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇನ ಭಾಗವಾಗಿರುವ ಉತ್ತರಪ್ರದೇಶದ ಶರಣ್​ಪುರ್​ದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಈ ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಕಾರೊಂದು ದಾರಿ ತೊಪ್ಪಿ ಮುಂದೆ ಹೋಗಿದೆ. ಮುಂದೆ ಹೋಗಿ ತಿರುಗಿಸಿ ಬರುವ ಬದಲು ಡ್ರೈವರ್​ ಕಾರನ್ನು ಹಿಮ್ಮುಖವಾಗಿ ಚಲಾಯಿಸಲು ಪ್ರಾರಂಭಿಸಿದ್ದಾನೆ.
ಆದರೆ ಇದು ಎಕ್ಸ್‌ಪ್ರೆಸ್‌ವೇಯಾದ ಕಾರಣ ಮುಂದಿನಿಂದ ವೇಗವಾಗಿ ಬಂದ ಎಸ್​ಯುವಿ ಕಾರೊಂದು ಈ ಹಿಮ್ಮುಖವಾಗಿ ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದು ಎಸ್​ಯುವಿ ಕಾರು ರಸ್ತೆಯಲ್ಲಿ ತಲೆಕೆಳಗಾಗಿ ಮಲಗಿದರೆ, ಇನ್ನೊಂದು ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದುಕೊಂಡಿದೆ.

ಒಂದೇ ಕುಟುಂಬ ನಾಲ್ವರು ನಿಧನ

ಮಾಹಿತಿ ಪ್ರಕಾರ, ಈ ಅಫಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಇವರು ಹರಿಯಾಣದಿಂದ ಹರಿದ್ವಾರಕ್ಕೆ ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ಮೃತರನ್ನು ಪ್ರವೀಣ್​ (40) ಆತನ ಪತ್ನಿ ಪ್ರೀತಿ (37) ಆತನ ತಾಯಿ ಸುದೇಶ್​ ಹಾಗೂ ಮಗ ಶಿವಾಂಶ್​ (9) ಎಂದು ಗುರುತಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾಗಿ ತಿಳಿದುಬಂದಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net