ಅವನನ್ನು ಏಕೆ ಆಡಿಸಲಿಲ್ಲ....? ಐರ್ಲೆಂಡ್ ಎದುರು ಟೀ ಇಂಡಿಯಾಗೆ ಹೀನಾಯ ಸೋಲು; ವಂಡರ್​ ಕಿಡ್​​ ಪರ ಬ್ಯಾಟ್ ಬೀಸಿದ ರಿತೇಶ್​ ದೇಶ್​ಮುಖ್​! Riteish Deshmukh on Vaibhav Suryavanshi

ಯುವ ಆಟಗಾರ ವೈಭವ್ ಸೂರ್ಯವಂಶಿ ಪರ ಧ್ವನಿ ಎತ್ತಿದ ರಿತೇಶ್ ದೇಶ್‌ಮುಖ್
ಯುವ ಆಟಗಾರ ವೈಭವ್ ಸೂರ್ಯವಂಶಿ ಪರ ಧ್ವನಿ ಎತ್ತಿದ ರಿತೇಶ್ ದೇಶ್‌ಮುಖ್
Published on

ಪ್ರಮುಖ ಮುಖ್ಯಾಂಶಗಳು

  • ಐರ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಕ್ಲೀನ್ ಸ್ವೀಪ್ ಮುಖಭಂಗ!
  • ಯುವ ಆಟಗಾರ ವೈಭವ್ ಸೂರ್ಯವಂಶಿ ಪರ ಧ್ವನಿ ಎತ್ತಿದ ರಿತೇಶ್ ದೇಶ್‌ಮುಖ್
  • ಅವನನ್ನು ಏಕೆ ಆಡಿಸಲಿಲ್ಲ ಎಂದು ಟ್ವಿಟ್​
ಮುಂಬೈ: ಐರ್ಲೆಂಡ್​​ ವಿರುದ್ಧದ ಟಿ-20 ಸರಣಿಯಲ್ಲಿ ಭಾರತ ಹೀನಾಯ ಸೋಲನ್ನು ಕಂಡಿದ್ದು, ಟೀ ಇಂಡಿಯಾದ ನಿರಸ ಪ್ರದರ್ಶನಕ್ಕೆ ಕ್ರಿಕೆಟ್​ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದರೆ. ಅಂತೆಯೇ ಬಾಲಿವುಡ್​ ನಟ ರಿತೇಶ್​ ದೇಶ್​ಮುಖ್ (Riteish Deshmukh on Vaibhav Suryavanshi)​, ಈ ಸರಣಿಯಲ್ಲಿ ವೈಭವ್​ ಸೂರ್ಯವಂಶಿಯನ್ನು ಏಕೆ ಕಣಕ್ಕಿಳಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮುಸ್ಲಿಮೇತರ ಮಕ್ಕಳಿಗೆ ನಮಾಜ್, ಕಲ್ಮಾ ಬೋಧನೆ ಆರೋಪ: ಪೋಷಕರ ಆಕ್ರೋಶ; ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ ಮೇಲೆ ಹಲ್ಲೆ! Principal Attacked in Nizamabad

ಏಕೆ ಈ ನಿರ್ಧಾರ?

ಈ ಭಾರಿಯ ಐಪಿಎಲ್​ನಲ್ಲಿ ತನ್ನ ಬ್ಯಾಟಿಂಗ್​ ಮೂಲಕ ಎಲ್ಲರ ಗಮನ ಸೆಳೆದಿದ್ದ ಆಟಗಾರ ಎಂದರೆ ಅದು ವೈಭವ್​ ಸೂರ್ಯವಂಶಿ. ಈ ಕಾರಣದಿಂದಲೇ ಇತನನ್ನು ಐರ್ಲೆಂಡ್​ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ನಡೆದ ಎರಡೂ ಪಂದ್ಯಗಳಲ್ಲಿ ವೈಭವ್​ನನ್ನು ತಂಡಕ್ಕೆ ಸೇರಿಸಿಕೊಳ್ಳದಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.
ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿರುವ ರಿತೇಶ್​ ದೇಶ್​ಮುಖ್​, ವೈಭವ್​ ಸೂರ್ಯವಂಶಿಯನ್ನು ಆದಷ್ಟು ಬೇಗ ಮೈದಾನಕ್ಕಿಳಿಸಿ, ನೀವು ಯಾವುದಕ್ಕಾಗಿ ಕಾಯುತ್ತಿದ್ದಿರಿ? ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಯುವ ಆಟಗಾರನ ಪರ ಬಾಲಿವುಡ್​ ನಟ ಧ್ವನಿ ಎತ್ತಿದ್ದಕಾಗಿ ಜನ ಫುಲ್​ ಖುಷ್​ ಆಗಿದ್ದಾರೆ.

ಐರ್ಲೆಂಡ್​ ವಿರುದ್ಧ ಭಾರತಕ್ಕೆ ಮುಖಭಂಗ!

ಜೂನ್​ 26 ರಂದು ನಡೆದ ಮೊದಲ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ್ದ ಐರ್ಲೆಂಡ್​ 20 ಓವರ್​ಗಳಲ್ಲಿ 184 ರನ್​ಗಳನ್ನು ಗಳಿಸಿತು. ಈ ದೊಡ್ಡ ಟಾರ್ಗೆಟ್​​ನ್ನು ಬೆನ್ನತ್ತಿದ್ದ ಭಾರತದ ಬ್ಯಾಟಿಂಗ್​ ವಿಭಾಗ ಸಂಪೂರ್ಣ ವಿಫಲವಾದ ಹಿನ್ನಲೆ 18.5 ಓವರ್​ಗಳಲ್ಲಿ 148 ರನ್​ಗಳಿಸಿ ಆಲ್​ಔಟ್​ ಆಗಿತು. ಈ ಮೂಲಕ ಮೊದಲ ಪಂದ್ಯದಲ್ಲಿ ಐರ್ಲೆಂಡ್​ 34 ರನ್​ಗಳ ಭರ್ಜರಿ ಗೆಲುವನ್ನು ಸಾಧಿಸಿತು.
ಭಾನುವಾರ (ಜೂ.28) ನಡೆದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ಕೇವಲ 1 ರನ್​ನಿಂದ ಪರಾಜಿತಗೊಂಡಿತು. ಟಾಸ್​​ ಸೊತು ಬ್ಯಾಟಿಂಗ್​ ಆರಂಭಿಸಿದ ಐರ್ಲೆಂಡ್​ ತಂಡ 20 ಓವರ್​ಗಳಲ್ಲಿ 154 ರನ್​ ಗಳಿಸಿತು.
155 ರನ್​ನ್ನು ಬೆನ್ನತ್ತಿದ್ದ ಭಾರತ ತಂಡದ ಬ್ಯಾಟರ್​ಗಳು ನಿರಾಶಾದಾಯಕ ಪ್ರದರ್ಶನ ನೀಡಿದರು. ತಿಲಕ್​ ವರ್ಮಾ ಬ್ಯಾಟ್​ನಿಂದ ಅರ್ಧ ಶತಕ ಬಂದಿದ್ದು ಬಿಟ್ಟರೆ ಮತ್ತ್ಯಾರು ಹೇಳಿಕೊಳ್ಳುವಂತ ಪ್ರದರ್ಶನ ನೀಡಲಿಲ್ಲ. ಪಂದ್ಯದ ಕೊನೆಯಲ್ಲಿ ಹರ್ಷಿತ್​ ರಾಣಾ ಪ್ರಯತ್ನ ತಂಡವನ್ನು ಗೆಲ್ಲಿಸಲಿಲ್ಲ. ಹೀಗಾಗಿ ಭಾರತ ಈ ಪಂದ್ಯವನ್ನೂ ಸಹ ಸೋಲುವುದರೊಂದಿಗೆ ಸರಿಣಿಯಲ್ಲಿ ಕ್ಲೀನ್​ ಸ್ವೀಪ್​ ಮೂಲಕ ಪರಾಜಿಗಗೊಂಡಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net