ಶ್ರೀರಾಮ ನಮ್ಮ ಅಸ್ಮಿತೆ, ಆರೋಪಿಗಳ ಪರ ಯಾರೂ ನಿಲ್ಲುವಂತಿಲ್ಲ: ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ; ಬಾರ್ ಕೌನ್ಸಿಲ್ ಖಡಕ್ ಆದೇಶ! Ayodhya Ram Mandir
ಆರೋಪಿಗಳ ಪರ ವಾದ ಮಂಡಿಸಿದರೆ ವಕೀಲರಿಗೆ 5 ಲಕ್ಷ ರೂ. ದಂಡ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಅಯೋಧ್ಯಾ ರಾಮ ಮಂದಿರ ದೇಣಿಗೆ ಅಕ್ರಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್!
ಆರೋಪಿಗಳ ಪರ ವಾದ ಮಂಡಿಸಿದರೆ ವಕೀಲರಿಗೆ 5 ಲಕ್ಷ ರೂ. ದಂಡ
ಅಯೋಧ್ಯಾ ಬಾರ್ ಅಸೋಸಿಯೇಷನ್ ಖಡಕ್ ಆದೇಶ
ಪ್ರಕರಣದ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ಅಯೋಧ್ಯಾ: ಹಿಂದೂಗಳ ಅಸ್ಮಿತೆ ಎಂದೇ ಕರೆಯಲಾಗುವ ಅಯೋಧ್ಯಾ ರಾಮ ಮಂದಿರ (Ayodhya Ram Mandir) ದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಸುದ್ದಿ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಮಾರು ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ಮುಂದುವರಿಸಿದ್ದಾರೆ.
ಈಗ ಈ ಬಂಧಿತರಾಗಿರುವ ಆರೋಪಿಗಳ ಪರವಾಗಿ ವಕಾಲತ್ನ್ನು ನಡೆಸದಂತೆ ಅಯೋಧ್ಯಾ ಬಾರ್ ಕೌಂನ್ಸಿಲ್ ನಿರ್ಧಾರ ಕೈಗೊಂಡಿದ್ದು, ಈ ನಿರ್ಧಾರವನ್ನು ವಿರೋಧಿಸುವ ವಕೀಲರಿಗೆ 5 ಲಕ್ಷ ದಂಡವನ್ನು ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಸೋಮವಾರ (ಜೂ.29) ಅಯೋಧ್ಯಾ ರಾಮ ಮಂದಿರದ ಬಗ್ಗೆ ಕೇಳಿ ಬಂದಿರುವ ಆರೋಪಗಳು ನಮ್ಮ ಅರಿವಿಗೆ ಬಂದಿದೆ. ಆದರೆ ಆರೋಪಿಗಳೆಂದು ಬಂಧಿಸಲಾಗಿರುವವರ ಪರವಾಗಿ ಅಯೋಧ್ಯಾ ಹಾಗೂ ಫೈಜಾಬಾದ್ ಜಿಲ್ಲೆಯ ಯಾವುದೇ ವಕೀಲರು ವಕಾಲತ್ ನಾಮವನ್ನು ಸಲ್ಲಿಸುವಂತಿಲ್ಲ. ಅಂತೆಯೇ ಅವರ ಪರವಾಗಿ ವಾದ ಮಂಡಿಸುವಂತಿಲ್ಲ ಎಂದು ಬಾರ್ ಅಸೋಸಿಯೇಶನ್ ಆದೇಶಿಸಿದೆ. ಈ ಆದೇಶವನ್ನು ಧಿಕ್ಕರಿಸುವ ವಕೀಲನಿಗೆ 5 ಲಕ್ಷ ದಂಡವನ್ನು ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ನಾವು ದೇವಸ್ಥಾನದ ಪರವಿದ್ದೆವೆ
ಅಯೋಧ್ಯಾ ರಾಮ ಮಂದಿರಕ್ಕೆ ಹರಿದು ಬಂದಿರುವ ದೇಣಿಗೆಯಲ್ಲಿ ಅಕ್ರಮ ನಡೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತು ಈಗಾಗಲೇ ಹಲವರು ಬಂಧನಕ್ಕೆ ಒಳಗಾಗಿದ್ದಾರೆ. ಪ್ರಭು ಶ್ರೀರಾಮನ ಮಂದಿರ ನಮ್ಮೆಲ್ಲರ ಅಸ್ಮಿತೆ. ನಮ್ಮ ಅಸ್ಮಿತೆಗೆ ತೊಂದರೆ ಉಂಟಾದರೆ ನಾವು ಸುಮ್ಮನಿರುವುದಿಲ್ಲ. ನಾವು ಕೇವಲ ದೇವಸ್ಥಾನ ಪರವಾಗಿ ಮಾತ್ರ ನಿಲ್ಲುತ್ತೆವೆ, ನ್ಯಾಯಾಲಯದಲ್ಲಿ ಹೋರಾಡುತ್ತೆವೆಂದು ಬಾರ್ ಕೌಂನ್ಸಿಲ್ನಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಅಯೋಧ್ಯೆಯ ಶ್ರೀರಾಮನ ಮಂದಿರದ ದೇಣಿಗೆಯಲ್ಲಿ ಭಾರಿ ಅಕ್ರಮ ನಡೆದಿದೆ ಈ ಕುರಿತು ತುರ್ತು ವಿಚಾರಣೆ ನಡೆಯಬೇಕೆಂದು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಜೂ.29) ವಜಾ ಮಾಡಿದೆ.
ಈಗ ನ್ಯಾಯಾಲಯ ರಜಾಪೀಠದಲ್ಲಿದೆ. ಇದನ್ನು ಬೇಸಿಗೆ ರಜೆ ಮುಗಿದ ನಂತರ ಪಟ್ಟಿ ಮಾಡಲಾಗುವುದು, ಮೊದಲು ಪೊಲೀಸ್ ತನಿಖೆ ಆಗಲಿ, ಇಷ್ಟು ಆತುರದ ಅಗತ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಂ. ಎಂ. ಸುಂದರೇಶ್ ಮತ್ತು ಶೀಲ್ ನಾಗು ಅವರ ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ, (ಏಜನ್ಸೀಸ್).