ಪುಣೆ ಕೊಲೆ ಪ್ರಕರಣ: ಮದುವೆ ಶಾಪಿಂಗ್‌ಗೆ ಕೇತನ್​ನಿಂದ 1 ಕೋಟಿ ಪಡೆದಿದ್ದ ಸಿಯಾ; ಚೇತನ್​ ಜೊತೆ ಉದಯ್​ಪುರಕ್ಕೆ ಹೋಗಿದ್ದೆಕೆ ಗೊತ್ತಾ? Ketan Agarwal Murder Case

ಮದುವೆ ಶಾಪಿಂಗ್‌ಗೆ 1 ಕೋಟಿ ಪಡೆದಿದ್ದ ಭಾವಿ ಪತ್ನಿ ಸಿಯಾ
ಮದುವೆ ಶಾಪಿಂಗ್‌ಗೆ 1 ಕೋಟಿ ಪಡೆದಿದ್ದ ಭಾವಿ ಪತ್ನಿ ಸಿಯಾ
Published on

ಪ್ರಮುಖ ಮುಖ್ಯಾಂಶಗಳು

  • ಪುಣೆ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದಲ್ಲಿ ಶಾಕಿಂಗ್ ಟ್ವಿಸ್ಟ್!
  • ಮದುವೆ ಶಾಪಿಂಗ್‌ಗೆ 1 ಕೋಟಿ ಪಡೆದಿದ್ದ ಭಾವಿ ಪತ್ನಿ ಸಿಯಾ
  • ಸಿಯಾ, ಪ್ರಿಯಕರ ಚೇತನ್ ಜೊತೆ ಉದಯ್‌ಪುರಕ್ಕೆ ಹೋಗಿದ್ದೇಕೆ?
ಪುಣೆ: ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿರುವ ಪುಣೆಯ ಯುವ ಉದ್ಯಮಿ ಕೇತನ್​ ಅಗರ್​ವಾಲ್​ ಕೊಲೆ ಪ್ರಕರಣ (Ketan Agarwal Murder Case) ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ. ಕೇತನ್​ ಕೊಲೆ ಆರೋಪದಲ್ಲಿ ಭಾವಿ ಪತ್ನಿ ಸಿಯಾ ಗೋಯಲ್​​ ಮತ್ತು ಆಕೆಯ ಪ್ರಿಯಕರ ಚೇತನ್​ ಚೌಧರಿಯನ್ನು ಬಂಧಿಸಿರುವ ಪೊಲೀಸರ ವಿಚಾರಣೆಯಲ್ಲಿ ಕೆಲ ಶಾಕಿಂಗ್​ ಮಾಹಿತಿಗಳು ಬಹಿರಂಗಗೊಂಡಿವೆ.

ಕೇತನ್​ನಿಂದ 1 ಕೋಟಿ ಪಡೆದಿದ್ದ ಸಿಯಾ!

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್​ಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಸಿಯಾ ಮದುವೆ ಶಾಪಿಂಗ್​ಗಾಗಿ ಕೇತನ್​ನಿಂದ 1 ಕೋಟಿ ಹಣವನ್ನು ಪಡೆದುಕೊಂಡಿದ್ದಳೆಂದು ತಿಳಿದು ಬಂದಿದೆ. ನಂತರದ ದಿನಗಳಲ್ಲಿ ಸಿಯಾ ಆ ಹಣವನ್ನು ಕೇತನ್​ಗೆ ಮರಳಿಸಿದ್ದು, ಕೇತನ್​ ಅದನ್ನು ತನ್ನ ಉದ್ಯಮದಲ್ಲಿ ವಿನಿಯೋಗಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ನಿಶ್ಚಿತಾರ್ಥದ ಬಳಿಕ ಚೇತನ್​ ಜೊತೆ ಉದಯ್​ಪುರ್​ ಟೂರ್​!
ಫೆಬ್ರುವರಿಯಲ್ಲಿ ಕೇತನ್​ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಸಿಯಾ, ಕೆಲ ದಿನಗಳ ಬಳಿಕ ಪ್ರಿಯಕರ ಚೇತನ್​ ಜೊತೆ ಉದಯ್​ಪುರ್​ಗೆ ಪ್ರವಾಸಕ್ಕೆ ತೆರಳಿದ್ದಳೆಂಬ ಮಾಹಿತಿ ದೊರೆತಿದೆ.
ಸಿಯಾ ಮತ್ತು ಚೇತನ್​ ಉದಯ್​ಪುರಕ್ಕೆ ಏಕೆ ತೆರಳಿದ್ದರು? ಇವರು ಅಲ್ಲಿಯೇ ಕೇತನ್​ನನ್ನು ಕೊಲ್ಲಲು ಯೋಜನೆ ರೂಪಿಸಿದ್ದರೆ? ಎನ್ನುವ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದರೆ. ಆದರೆ ಅಲ್ಲಿಗೆ ತೆರಳಿದ್ದಾಗ ಸಿಯಾ ತನಗೆ ಕೇತನ್​ನನ್ನು ಮದುವೆಯಾಗಲು ಇಷ್ಟವಿಲ್ಲ ಎಂದು ಚೇತನ್​ಗೆ ಹೇಳಿದ್ದಳೆಂದು ಕೇಳಿಬಂದಿದೆ.

ಮುಂದುವರಿದ ಪೊಲೀಸ್​ ತನಿಖೆ!

ಈ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಕೆಲ ದಿನಗಳ ಹಿಂದೆ ಕೊಲೆ ನಡೆದ ಲೋಹಗಢ ಕೋಟೆಗೆ ತೆರಳಿ ಕೊಲೆಯನ್ನು ಮರುಸೃಷ್ಟಿ ಮಾಡಿದ್ದರು. ಈಗ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿರುವ ಸಿಯಾ ಮತ್ತು ಚೇತನ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಚ್​ಶೀಟ್​ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net