ಸಿಂಧ್ ರೇಂಜರ್ಸ್ ಮೇಲೆ ತಾಲಿಬಾನ್ ದಾಳಿ: ಭಾರತದ ಮೇಲೆ ಪಾಕ್ ಆರೋಪ; ಮೊದಲು ನಿಮ್ಮ ದೇಶದ ಭಯೋತ್ಪಾದಕನ್ನು ನಿಯಂತ್ರಿಸಿ: ವಿದೇಶಾಂಗ ಸಚಿವಾಲಯ ತಿರುಗೇಟು! MEA Slams Pakistan
ನಮ್ಮ ಮೇಲೆ ಗೂಬೆ ಕೂರಿಸುವ ಬದಲು ನಿಮ್ಮ ದೇಶದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಾಕಿಸ್ತಾನದ ಸಿಂಧ್ ರೇಂಜರ್ಸ್ ಪಡೆಗಳ ಮೇಲೆ ನಡೆದ ಟಿಟಿಪಿ (TTP) ಉಗ್ರರ ದಾಳಿ
ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕ್ ಆರೋಪ
ನಮ್ಮ ಮೇಲೆ ಗೂಬೆ ಕೂರಿಸುವ ಬದಲು ನಿಮ್ಮ ದೇಶದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸಿ
ನವದೆಹಲಿ: ಪಾಕಿಸ್ತಾನದ ಸಿಂಧ್ ರೇಂಜರ್ಗಳ ಮೇಲೆ ನಡೆದ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪವನ್ನು ಭಾನುವಾರ (ಜೂ.28) ವಿದೇಶಾಂಗ ಇಲಾಖೆ (MEA Slams Pakistan) ತಳ್ಳಿ ಹಾಕಿದೆ.
ಪಾಕಿಸ್ತಾನದ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣದೀರ್ ಜೈಸ್ವಾಲ್, ಭಾರತದ ಮೇಲೆ ಪಾಕಿಸ್ತಾನ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಪಾಕಿಸ್ತಾನ ಮೊದಲು ತಮ್ಮ ದೇಶದಲ್ಲಿ ಪೋಷಿಸುತ್ತಿರುವ ಭಯೋತ್ಪಾದಕರನ್ನು ನಿಯಂತ್ರಿಸುತ್ತ ಚಿಂತೆ ನಡೆಸಲಿ ಎಂದಿದ್ದಾರೆ.
ಪಾಕಿಸ್ತಾನದ ಆರೋಪವನ್ನು ತಿರಸ್ಕರಿಸಿರುವ ರಣಧೀರ್ ಜೈಸ್ವಾಲ್, ನಮ್ಮ ಮೇಲೆ ಆರೋಪ ಮಾಡುವ ಬದಲು ನಿಮ್ಮ ದೇಶದಲ್ಲಿರುವ ಭಯೋತ್ಪಾದರನ್ನು ಮಟ್ಟಹಾಕಿ, ಹಾಗೆಯೇ ಈ ದಾಳಿ ನಡೆಸಿರುವ ಗುಂಪಿನ ಮೇಲೆ ಮರುದಾಳಿ ಮಾಡಿ ಎಂದು ಹೇಳಿದ್ದಾರೆ.
ಶನಿವಾರ (ಜೂ.27) ಪಾಕಿಸ್ತಾನದ ಸಿಂಧ್ ರೇಂಜರ್ ಪಡೆಗಳ ಮೇಲೆ ದಿಡೀರ್ ದಾಳಿ ನಡೆದಿದ್ದು, ನಾಲ್ವರು ರೇಂಜರ್ಗಳು ಮೃತ ಪಟ್ಟಿದ್ದಾರೆ. ಇದೇ ದಾಳಿಯಲ್ಲಿ ಆರು ಜನ ಭಯೋತ್ಪಾದಕರು ಸಾವನ್ನಪ್ಪಿದ್ದು, ಒಬ್ಬನನ್ನು ಬಂಧಿಸಿರುವುದಾಗಿ ಪಾಕಿಸ್ತಾನ ಹೇಳಿದೆ.
ಸಿಂಧ್ ರೇಂಜರ್ಗಳ ಮೇಲೆ ನಡೆದ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿರುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಂಘಟನೆಯ ಜಮಾತ್-ಉಲ್-ಅಹ್ರಾರ್ ಎಂಬ ಗುಂಪು ತೆಗೆದುಕೊಂಡಿದೆ, (ಏಜನ್ಸೀಸ್).