ಮುಸ್ಲಿಮೇತರ ಮಕ್ಕಳಿಗೆ ನಮಾಜ್, ಕಲ್ಮಾ ಬೋಧನೆ ಆರೋಪ: ಪೋಷಕರ ಆಕ್ರೋಶ; ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ ಮೇಲೆ ಹಲ್ಲೆ! Principal Attacked in Nizamabad

ನಿಜಾಮಾಬಾದ್ ಶಾಲೆಯಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ನಮಾಜ್, ಕಲ್ಮಾ ಬೋಧನೆ ಆರೋಪ!
ನಿಜಾಮಾಬಾದ್ ಶಾಲೆಯಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ನಮಾಜ್, ಕಲ್ಮಾ ಬೋಧನೆ ಆರೋಪ!
Published on

ಪ್ರಮುಖ ಮುಖ್ಯಾಂಶಗಳು

  • ನಿಜಾಮಾಬಾದ್ ಶಾಲೆಯಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ನಮಾಜ್, ಕಲ್ಮಾ ಬೋಧನೆ ಆರೋಪ!
  • ಪೋಷಕರು ಮತ್ತು ಬಿಜೆಪಿ ಕಾರ್ಯಕರ್ತರಿಂದ ಪ್ರಿನ್ಸಿಪಾಲ್ ಮೇಲೆ ಹಲ್ಲೆ
  • ಪ್ರಿನ್ಸಿಪಾಲ್ ಆಮಿರ್ ಖಾನ್ ಮೇಲೆ ಹಲ್ಲೆ ಆರೋಪದ ಬೆನ್ನಲ್ಲೇ ಉದ್ವಿಗ್ನ ಪರಿಸ್ಥಿತಿ
ನಿಜಾಮಾಬಾದ್​: ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ಶಾಲೆಯೊಂದರಲ್ಲಿ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಉರ್ದು ಭಾಷೆ ಬೋಧನೆಯನ್ನು ವಿರೋಧಿಸಿ, ಪಾಲಕರು ಶಾಲಾ ಮುಖ್ಯೋಪಾಧ್ಯಾಯರ ಮೇಲೆ ದೈಹಿಕ ಹಲ್ಲೆ (Principal Attacked in Nizamabad) ನಡೆಸಿದ ಘಟನೆ ವರದಿಯಾಗಿದೆ.
ಪರ್ಕಿಟ್ ಗ್ರಾಮದಲ್ಲಿರುವ ಭರತ್​ ಚಂದ್ರ ಹೈಸ್ಕೂಲ್​ನಲ್ಲಿ ಈ ಘಟನೆ ನಡೆದಿದ್ದು, ಪಾಲಕರ ಮೇಲೆ ಶಿಕ್ಷಕರು, ಶಿಕ್ಷಕರ ಮೇಲೆ ಪಾಲಕರು ಪರಸ್ಪರ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.

ಮಕ್ಕಳಿಗೆ ನಮಾಜ್​ ಹೇಳಿಕೊಡುತ್ತಿದ್ದರು!

ಪಾಲಕರ ದೂರಿನ ಪ್ರಕಾರ, ಶಾಲೆಯಲ್ಲಿ ಮಕ್ಕಳಿಗೆ ಹಿಂದಿ ಪಠ್ಯಕ್ರಮವನ್ನು ಬೋಧಿಸುವಾಗ, ಮಕ್ಕಳಿಗೆ ಉರ್ದು ಭಾಷೆಯನ್ನು ಹೇಳಿಕೊಡುತ್ತಿದ್ದಾರೆ. ಇದರೊಟ್ಟಿಗೆ ಮಕ್ಕಳಿಗೆ ನಮಾಜ್​ ಮತ್ತು ಕಲ್ಮಾವನ್ನು ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಆದರೆ, ಈ ಆರೋಪವನ್ನು ಶಾಲೆಯ ಆಡಳಿತ ಮಂಡಳಿ ತಳ್ಳಿಹಾಕಿದೆ. ಈ ಆರೋಪ ತಮ್ಮ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿ ಪ್ರಿನ್ಸಿಪಾಲ್ ಆಮಿರ್ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಶಾಲಾ ಮಂಡಳಿ ಪ್ರತಿದೂರನ್ನು ದಾಖಲಿಸಿದೆ.
ನಾವು ಉರ್ದು ವರ್ಣಮಾಲೆಯನ್ನಷ್ಟೇ ಕಲಿಸಿದ್ದೆವೆ!
ಶಾಲೆ ಮೇಲೆ ಬಂದಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಉರ್ದು ಶಿಕ್ಷಕರು, ನಾವು ಮಕ್ಕಳಿಗೆ ಕೇವಲ ಎರಡು ದಿನ ಮಾತ್ರ ಉರ್ದು ಭಾಚೆಯನ್ನು ಕಲಿಸಿದ್ದೆವೆ. ಅದರಲ್ಲಿ ಅವರಿಗೆ ವರ್ಣಮಾಲೆಯನ್ನು ಮಾತ್ರ ಹೇಳಿಕೊಟ್ಟಿವೆ ಹೊರತು ಯಾವುದೇ ಧಾರ್ಮಿಕ ಬೋಧನೆ ಮಾಡಿಲ್ಲ ಎಂದು ಹೇಳಿದ್ದಾರೆ.

ಮುಂದುವರಿದ ಪೊಲೀಸ್​ ತನಿಖೆ

ಈಗ ಎರಡು ಕಡೆಯವರಿಂದ ಪೊಲೀಸರಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಅದರೆ ಅಲ್ಪಸಂಖ್ಯಾರ ಶಿಕ್ಷಕನ ಮೇಲೆ ಹಲ್ಲೆ ಮಾಡಿದ ಹಿನ್ನಲೆ ಅಲ್ಪಸಂಖ್ಯಾತ ಅಸೋಸಿಯೇಶನ್​ ಅವರು ಸೋಮವಾರ (ಜೂ.29) ನಿಜಾಮಾಬಾದ್ ಬಂಧ್​ಗೆ ಕರೆಕೊಟ್ಟಿದ್ದಾರೆಂದು ತಿಳಿದು ಬಂದಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net